Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಹೊರಗಿನ ಅಭ್ಯರ್ಥಿಗಳಿಗೆ ಮಣೆ ಹಾಕುವ ಕನಕಗಿರಿ ಮತದಾರರು
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | ಹೊರಗಿನ ಅಭ್ಯರ್ಥಿಗಳಿಗೆ ಮಣೆ ಹಾಕುವ ಕನಕಗಿರಿ ಮತದಾರರು

Districts

ಹೊರಗಿನ ಅಭ್ಯರ್ಥಿಗಳಿಗೆ ಮಣೆ ಹಾಕುವ ಕನಕಗಿರಿ ಮತದಾರರು

Public TV
Last updated: March 27, 2023 12:19 pm
Public TV
Share
3 Min Read
basavaraj dadesugur Shivaraj Tangadagi
SHARE

ಕೊಪ್ಪಳ: ಜಿಲ್ಲೆಯ ಕನಕಗಿರಿ (Kanakagiri) ವಿಧಾನಸಭೆ ಕ್ಷೇತ್ರದ ಮತದಾರರು ಅವರ ಕ್ಷೇತ್ರದ ಅಭ್ಯರ್ಥಿಗೆ ಮಣೆ ಹಾಕಿದ್ದೇ ಹೆಚ್ಚು. ಇನ್ನೂ ಕಳೆದ 2008ರಲ್ಲಿ ಕನಕಗಿರಿ ಎಸ್‌ಸಿ ಮೀಸಲು ಕ್ಷೇತ್ರ ಆದಾಗಿನಿಂದ ಹೊರ ಜಿಲ್ಲೆಯ ಅಭ್ಯರ್ಥಿಗಳ ದರ್ಬಾರ್ ಶುರುವಾಗಿದೆ.

ಹೌದು, ಕಳೆದ 1978ರಲ್ಲಿ ಕನಕಗಿರಿ ವಿಧಾನಸಭೆ ಕ್ಷೇತ್ರ ರಚನೆ ಆಗಿದೆ. ಕನಕಗಿರಿ ಪಟ್ಟಣದ ಸುತ್ತಲಿನ ಅಖಂಡ ರಾಯಚೂರು ಜಿಲ್ಲೆಯ ಗಂಗಾವತಿ, ಸಿಂಧನೂರು ಮತ್ತು ಕುಷ್ಟಗಿ ತಾಲೂಕಿನ ಗ್ರಾಮ ಒಳಗೊಂಡು ಕ್ಷೇತ್ರ ರೂಪುಗೊಂಡಿತ್ತು. ಈ ಕ್ಷೇತ್ರದಲ್ಲಿ ನಾಗಪ್ಪ ಸಾಲೋಣಿ ಹೊರತಾಗಿ ಉಳಿದವರೆಲ್ಲ ಬೇರೆ ಕಡೆಯಿಂದ ಬಂದು ವಿಜಯ ಮಾಲೆ ಧರಿಸಿಕೊಂಡಿದ್ದಾರೆ.

ಕ್ಷೇತ್ರದ ಮೊದಲ ಶಾಸಕರಾಗಿ ಗಂಗಾವತಿಯ ಎಂ ನಾಗಪ್ಪ ಕಾಂಗ್ರೆಸ್‌ನಿಂದ ಆಯ್ಕೆ ಆಗಿದ್ದಾರೆ. ನಂತರ 1983 ಮತ್ತು 1985ರಲ್ಲಿ ಅದೇ ಗಂಗಾವತಿ ಮೂಲದ ಶ್ರೀರಂಗದೇವರಾಯ ಕನಕಗಿರಿ ಕ್ಷೇತ್ರ ಪ್ರತಿನಿಧಿಸಿದ್ದರೆ, 1989ರಲ್ಲಿ ಮತ್ತದೇ ಗಂಗಾವತಿ ಮೂಲದ ಮಲ್ಲಿಕಾರ್ಜುನ ನಾಗಪ್ಪ ಕನಕಗಿರಿ ಕ್ಷೇತ್ರದಿಂದ ಗೆದ್ದಿದ್ದಾರೆ.

Basavaraj dadesugur MLA 1

ಸ್ಥಳೀಯ ಅಭ್ಯರ್ಥಿ ಎಂಬ ವ್ಯಾಪಕ ಪ್ರಚಾರದೊಂದಿಗೆ 1994ರಲ್ಲಿ ಕಾರಟಗಿ ಮೂಲದ ಸಾಲೋಣಿ ನಾಗಪ್ಪ ಆಯ್ಕೆಯಾಗಿದ್ದಾರೆ. ಜನತಾದಳದಿಂದ ಕನಕಗಿರಿ ಶಾಸಕರಾಗುವ ಮೂಲಕ ಕಾಂಗ್ರೆಸ್‌ನ ಹಿಡಿತ ತಪ್ಪಿಸಿದ್ದಾರೆ. ಅಷ್ಟೇ ಅಲ್ಲದೇ ಕನಕಗಿರಿ ಕ್ಷೇತ್ರದ ಮೇಲೆ ನೆರೆ ತಾಲೂಕಿನವರ ಹಿಡಿತ ತಪ್ಪಿಸಿದ ಮೊದಲಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಮುಂದೆ ನಡೆದ 1999ರ ಚುನಾವಣೆಯಲ್ಲಿಯೂ ಮತ್ತೆ ಕನಕಗಿರಿ ಮತದಾರರು ಹೊರ ಕ್ಷೇತ್ರದ ಮಲ್ಲಿಕಾರ್ಜುನ ನಾಗಪ್ಪರನ್ನು ಆಯ್ಕೆ ಮಾಡಿದ್ದಾರೆ. ಅಷ್ಟೇ ಅಲ್ಲದೇ ಮಲ್ಲಿಕಾರ್ಜುನ ನಾಗಪ್ಪ ಎಸ್‌ಎಂ ಕೃಷ್ಣ ಅವರ ಕ್ಯಾಬಿನೆಟ್‌ನಲ್ಲಿ ಮಂತ್ರಿ ಆಗಿದ್ದಾರೆ. ನಂತರ 2004ರಲ್ಲಿಯೂ ನೆರೆಯ ಗಂಗಾವತಿ ಕ್ಷೇತ್ರ ವ್ಯಾಪ್ತಿಯ ಕೇಸರಹಟ್ಟಿ ಗ್ರಾಮದ ಜಿ ವೀರಪ್ಪ ಕನಕಗಿರಿ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ.

Shivaraj Tangadagi

ನೆರೆ ಜಿಲ್ಲೆ ದರ್ಬಾರ್: ಪಕ್ಕದ ಕ್ಷೇತ್ರದ ನಾಯಕ ಹಿಡಿತದಲ್ಲಿದ್ದ ಕನಕಗಿರಿ ಕ್ಷೇತ್ರ 2008ರ ನಂತರ ನೆರೆ ಜಿಲ್ಲೆಯ ನಾಯಕರ ವಶವಾಗಿದೆ. ಕ್ಷೇತ್ರ ಪುನರ್ ವಿಂಗಡಣೆಯಾಗಿ 2008ರಲ್ಲಿ ಕನಕಗಿರಿ ವಿಧಾನಸಭೆ ಕ್ಷೇತ್ರ ಎಸ್‌ಸಿ ಮೀಸಲು ಕ್ಷೇತ್ರವಾಗಿದೆ.

2008ರ ಚುನಾವಣೆ ವೇಳೆ ಮತದಾನಕ್ಕೆ ಕೇವಲ 2 ತಿಂಗಳು ಬಾಕಿ ಇರುವಾಗ ಕ್ಷೇತ್ರಕ್ಕೆ ಕಾಲಿಟ್ಟಿದ್ದು ಶಿವರಾಜ್ ತಂಗಡಗಿ. ಬಾಗಲಕೋಟೆ ಜಿಲ್ಲೆ ಇಳಕಲ್‌ನಿಂದ ಬಂದು, ಬಿಜೆಪಿ ಟಿಕೆಟ್‌ಗೆ ಪೈಪೋಟಿ ಮಾಡಿದ್ದ ತಂಗಡಗಿ, ಬಿಜೆಪಿ ಟಿಕೆಟ್ ಸಿಗದಿದ್ದರಿಂದ ಕೊನೆ ಕ್ಷಣದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿ ಶಾಸಕರಾಗಿ ಆಯ್ಕೆಯಾಗಿದ್ದರು.

ಕೊಪ್ಪಳ ಜಿಲ್ಲೆಯವರೇ ಆದ ಶ್ಯಾಮಣ್ಣ ನಾರಿನಾಳ ಬಿಜೆಪಿಯಿಂದ, ಮುಕುಂದ್ ರಾವ್ ಭವಾನಿಮಠ ಕಾಂಗ್ರೆಸ್‌ನಿಂದ ಕಣದಲ್ಲಿದ್ದರೂ ಕನಕಗಿರಿ ಮತದಾರರು ಆಯ್ಕೆ ಮಾಡಿದ್ದು ಮಾತ್ರ ನೆರೆ ಜಿಲ್ಲೆಯ ಶಿವರಾಜ್ ತಂಗಡಗಿ (Shivaraj Tangadagi) ಅವರನ್ನು. ಇದನ್ನೂ ಓದಿ: ಜಾತಿ ಬಲ ಇಲ್ಲದಿದ್ದರೂ, ಅಭಿವೃದ್ಧಿ ನಂಬಿ ಗೆದ್ದು ಸಚಿವರಾದ ಬಿ.ಸಿ. ನಾಗೇಶ್

 

ಶಿವರಾಜ್ ತಂಗಡಗಿ ಭೋವಿ ಸಮುದಾಯಕ್ಕೆ ಸೇರಿದ್ದು, ಕನಕಗಿರಿ ಕ್ಷೇತ್ರದಲ್ಲಿ ಸ್ವ ಜಾತಿ ಮತ ಇರೋದು ಕೇವಲ 4 ಸಾವಿರ ಮಾತ್ರ. ಆದಾಗ್ಯೂ 2 ಬಾರಿ ಸತತವಾಗಿ ಆಯ್ಕೆ ಆಗಿದ್ದಲ್ಲದೇ ಎರಡೂ ಅವಧಿಯಲ್ಲಿ ಕ್ಯಾಬಿನೆಟ್ ಮಂತ್ರಿ ಆಗಿದ್ದು ಶಿವರಾಜ್ ತಂಗಡಗಿ ಹೆಚ್ಚುಗಾರಿಕೆ.

ಹಾಲಿ ಶಾಸಕರದ್ದು ನೆರೆ ಜಿಲ್ಲೆ: 2018ರಲ್ಲಿ ಶಾಸಕರಾಗಿ ಆಯ್ಕೆ ಆಗಿರೋ ಬಸವರಾಜ ದಡೆಸುಗೂರ (Basavaraj Dadesugur) ಕೂಡಾ ರಾಯಚೂರು ಜಿಲ್ಲೆಯವರು. ಸದ್ಯ ನಡೆಯುತ್ತಿರುವ 2023ರ ವಿಧಾನಸಭೆ ಚುನಾವಣೆಯಲ್ಲೂ ಕನಕಗಿರಿ ಕ್ಷೇತ್ರದಲ್ಲಿ ಬೇರೆ ಜಿಲ್ಲೆಯವರದ್ದೇ ದರ್ಬಾರ್ ನಡೆಯುತ್ತಿದೆ. ಬಾಗಲಕೋಟೆ ಜಿಲ್ಲೆಯ ಶಿವರಾಜ್ ತಂಗಡಗಿ ಕಾಂಗ್ರೆಸ್ ಅಭ್ಯರ್ಥಿ ಆಗಲಿದ್ದಾರೆ. ಬಿಜೆಪಿಯಿಂದ ಹಾಲಿ ಶಾಸಕ ಬಸವರಾಜ ದಡೆಸುಗೂರ ಸೇರಿ ಸಾಕಷ್ಟು ಆಕಾಂಕ್ಷಿಗಳಿದ್ದಾರೆ. ಬಿಜೆಪಿ ಟಿಕೆಟ್‌ಗೆ ಕ್ಷೇತ್ರದಲ್ಲಿ ಹೆಚ್ಚು ಸದ್ದು ಮಾಡುತ್ತಿರುವ ಬಹುತೇಕರು ಮತ್ತದೇ ನೆರೆ ಜಿಲ್ಲೆಯವರು.

ರಾಯಚೂರು ಜಿಲ್ಲೆಯ ಗಾಯಿತ್ರಿ ಛಲವಾದಿ, ಹಾಲಿ ಬೆಂಗಳೂರಿನಲ್ಲಿರೋ ಯಾದಗಿರಿ ಜಿಲ್ಲೆಯ ಡಿಎಂ ಧರ್ಮಣ್ಣ, ಬಳ್ಳಾರಿ ಜಿಲ್ಲೆಯ ರಾಜಗೋಪಾಲ ಬಿಜೆಪಿ ಟಿಕೆಟ್ ಪ್ರಬಲ ಆಕಾಂಕ್ಷಿಗಳು.

ಕೆಆರ್‌ಪಿಪಿ ಘೋಷಿತ ಅಭ್ಯರ್ಥಿ ಡಾ. ಚಾರುಲ್ ದಾಸರಿ ಬಳ್ಳಾರಿ ಜಿಲ್ಲೆಯವರು. ಜೆಡಿಎಸ್ ಕೂಡ ರಾಯಚೂರು ಜಿಲ್ಲೆಯ ಉಮೇಶ್ ಉಮಲೂಟಿ ಅವರನ್ನು ಅಭ್ಯರ್ಥಿ ಅಂತಾ ಹೇಳಿಕೊಂಡಿತ್ತು. ಆದರೆ ಕಳೆದ 15 ದಿನದಿಂದ ಕನಕಗಿರಿ ವಿಧಾನಸಭೆ ಕ್ಷೇತ ವ್ಯಾಪ್ತಿಯ ಹುಲಿಹೈದರ ಗ್ರಾಮದ ಹನುಮೇಶ ಹುಳ್ಕಿಹಾಳ ಜೆಡಿಎಸ್ ಅಭ್ಯರ್ಥಿಯಾಗುವ ಸಾಧ್ಯತೆಯಿದೆ. ಇದನ್ನೂ ಓದಿ: ಬಿಜೆಪಿ ಮಾಜಿ ಸಂಸದ ಮಂಜುನಾಥ್ ಕುನ್ನೂರು, ಪುತ್ರ ಶೀಘ್ರವೇ ಕಾಂಗ್ರೆಸ್‌ಗೆ ಸೇರ್ಪಡೆ

TAGGED:assembly electionBasavaraj dadesugurkanakagirikoppalaShivaraj Tangadagiಕನಕಗಿರಿಕೊಪ್ಪಳಬಸವರಾಜ ದಡೆಸುಗೂರವಿಧಾನಸಭಾ ಚುನಾವಣೆಶಿವರಾಜ್ ತಂಗಡಗಿ
Share This Article
Facebook Whatsapp Whatsapp Telegram

Cinema news

Karen Kshiti Suvarna September 21 set for Cannes market premiere
ಕೇನ್ಸ್‌ನಲ್ಲಿ ಕನ್ನಡ ನಿರ್ದೇಶಕಿ ಕರೆನ್ ಕ್ಷಿತಿ ಸುವರ್ಣಗೆ ಗೌರವ
Cinema Latest Sandalwood
Daali Dhananjaya
ಮೊದಲ ಮಗುವಿನ ನಿರೀಕ್ಷೆಯಲ್ಲಿ ಡಾಲಿ ಧನಂಜಯ್‌ ದಂಪತಿ
Cinema Latest Main Post Sandalwood
Darshan
ಜಾಮೀನಿಗಾಗಿ ಎರಡನೇ ಬಾರಿ ಸುಪ್ರೀಂ ಕದ ತಟ್ಟಿದ ದರ್ಶನ್‌
Cinema Court Latest Main Post Sandalwood
yash toxic
ಜಾಗತಿಕ ಮಟ್ಟದಲ್ಲಿ ಅಬ್ಬರಿಸಲು ಸಜ್ಜಾದ ಯಶ್ – ಟಾಕ್ಸಿಕ್ ಬಿಡುಗಡೆ ದಿನಾಂಕ ಮತ್ತೆ ಮುಂದಕ್ಕೆ
Cinema Latest Main Post

You Might Also Like

d.k.shivakumar aisshwarya dks hegde
Bengaluru City

ಡಿಸಿಎಂ ಡಿಕೆಶಿ ಪುತ್ರಿ ಐಶ್ವರ್ಯ ಹೆಗ್ಡೆಗೆ ಹೆಣ್ಣು ಮಗು ಜನನ

Public TV
By Public TV
59 seconds ago
accident death
Bengaluru City

ಚಿಕನ್ ತರಲು ಹೋಗುತ್ತಿದ್ದವನಿಗೆ ಖಾಸಗಿ ಬಸ್ ಡಿಕ್ಕಿ – ಬಾಲಕ ಸಾವು

Public TV
By Public TV
1 hour ago
Nepal Accident
Latest

ನೇಪಾಳದ ರೋಲ್ಪಾದಲ್ಲಿ ಪ್ರಪಾತಕ್ಕೆ ಬಿದ್ದ ಜೀಪ್ – 20 ಮಂದಿ ಸಾವು, ರಕ್ಷಣಾ ಕಾರ್ಯಾಚರಣೆಗೆ ಮಳೆ ಅಡ್ಡಿ

Public TV
By Public TV
2 hours ago
siddaramaiah
Bengaluru City

ಇದು ಆಡಳಿತವಲ್ಲ, ಸಂಘಟಿತ ಲೂಟಿ – ಗ್ಯಾಸ್ ಬೆಲೆ ಏರಿಕೆಗೆ ಕೇಂದ್ರದ ವಿರುದ್ಧ ಸಿಎಂ ವಾಗ್ದಾಳಿ

Public TV
By Public TV
2 hours ago
IndiGo Flight
Districts

ಶಿವಮೊಗ್ಗ – ಬೆಂಗಳೂರು ನಡುವಿನ ಹಾರಾಟ ನಿಲ್ಲಿಸಿದ ಇಂಡಿಗೋ ವಿಮಾನ

Public TV
By Public TV
2 hours ago
Hajj
Latest

ಹಜ್‌ ಯಾತ್ರೆಯ ವಿಮಾನ ದರ 10,000 ರೂ. ಹೆಚ್ಚಳ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?