ಬಿಸ್ಟಲ್: ಭಾರತದ (Team India) ವಿರುದ್ಧ 9 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದ ಇಂಗ್ಲೆಂಡ್ (England) ಟಿ20 ಸರಣಿಯನ್ನು ಜಯಗಳಿಸಿದೆ.
4ನೇ ಟಿ20 (T20) ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ 7 ವಿಕೆಟ್ ನಷ್ಟಕ್ಕೆ 158 ರನ್ ಹೊಡೆಯಿತು. ಸುಲಭದ ಮೊತ್ತವನ್ನು ಬೆನ್ನಟ್ಟಿದ ಇಂಗ್ಲೆಂಡ್ ಇನ್ನು 37 ಎಸೆತ ಬಾಕಿ ಇರುವಂತೆಯೇ 1 ವಿಕೆಟ್ ಕಳೆದುಕೊಂಡು 159 ರನ್ ಹೊಡೆಯಿತು.
ಈ ಮೂಲಕ 4 ಪಂದ್ಯಗಳ ಸರಣಿಯಲ್ಲಿ ಇಂಗ್ಲೆಂಡ್ 3 ಪಂದ್ಯಗಳನ್ನು ಗೆದ್ದು ಟ್ರೋಫಿ ಗೆದ್ದುಕೊಂಡಿದೆ. ಮೊದಲ ಪಂದ್ಯ ಮಳೆಯಿಂದ ರದ್ದಾಗಿತ್ತು.
Captain in full flow! 💙
Shreyas Iyer makes his intentions clear, smashing Adil Rashid for a towering six. #ENGvIND 4th T20I 👉 Streaming LIVE on JioHotstar! pic.twitter.com/2MfRMTCmpG
— Star Sports (@StarSportsIndia) July 9, 2026
ಭಾರತದ ಪರ ಶ್ರೇಯಸ್ ಅಯ್ಯರ್ ಔಟಾಗದೇ 80 ರನ್(49 ಎಸೆತ, 4 ಬೌಂಡರಿ, 5 ಸಿಕ್ಸ್), ಶಿವಂ ದುಬೆ 22 ರನ್(23 ಎಸೆತ, 2 ಬೌಂಡರಿ) ಹೊಡೆದು ಸ್ವಲ್ಪ ಪ್ರತಿರೋಧ ತೋರಿದರು. ಇದನ್ನೂ ಓದಿ: We Want Sanju – ಟೀಂ ಇಂಡಿಯಾ ಆಟಗಾರರ ಮುಂದೆ ತೀವ್ರ ಆಕ್ರೋಶ ಹೊರಹಾಕಿದ ಅಭಿಮಾನಿಗಳು
ಕೆಟ್ಟ ಸಾಧನೆ
– ಭಾರತ ತಂಡವು ಇಂಗ್ಲೆಂಡ್ ವಿರುದ್ಧ 2+ ಪಂದ್ಯಗಳ ಟಿ20 ಸರಣಿಯನ್ನು ಸೋತಿದ್ದು ಇದೇ ಮೊದಲು.
– 2019 ರ ನಂತರ ಭಾರತ ತಂಡವು ಇಂಗ್ಲೆಂಡ್ ವಿರುದ್ಧದ ಮೊದಲ ದ್ವಿಪಕ್ಷೀಯ ಸರಣಿಯನ್ನು ಸೋತಿದೆ.
– 2019 ರ ನಂತರ ಭಾರತ ತಂಡವು ಸತತವಾಗಿ 2 ಟಿ20 ಸರಣಿಯನ್ನು ಸೋತಿದೆ. ಈ ಮೊದಲು ಐರ್ಲೆಂಡ್ ವಿರುದ್ಧ ಭಾರತ ಸೋತಿತ್ತು.
