ನಾಟಿಂಗ್‌ಹ್ಯಾಮ್: ಇಂಗ್ಲೆಂಡ್ (England) ವಿರುದ್ಧ ಹೀನಾಯ ಸೋಲನ್ನು ಅನುಭವಿಸಿದ ಬೆನ್ನಲ್ಲೇ ಟೀಂ ಇಂಡಿಯಾ (Team India) ಅಭಿಮಾನಿಗಳು ಸಂಜು ಸ್ಯಾಮ್ಸನ್ (Sanju Samson) ಅವರನ್ನು ಪ್ಲೇಯಿಂಗ್ ಇಲೆವೆನ್‌ನಿಂದ ಕೈಬಿಟ್ಟಿರುವುದಕ್ಕೆ ಸ್ಟೇಡಿಯಂ ಹೊರಗೆ ಜಮಾಯಿಸಿ ಪ್ರತಿಭಟನೆ ನಡೆಸಿದ್ದಾರೆ.
ಪಂದ್ಯ ಮುಗಿದ ತಕ್ಷಣ ಕ್ರೀಡಾಂಗಣದ ಹೊರಗೆ ನೂರಾರು ಭಾರತೀಯ ಅಭಿಮಾನಿಗಳು ಒಟ್ಟಾಗಿ ನಮಗೆ ಸಂಜು ಬೇಕು (We Want Sanju) ಎಂದು ಗಟ್ಟಿಯಾಗಿ ಘೋಷಣೆಗಳನ್ನು ಕೂಗುತ್ತಿರುವ ವಿಡಿಯೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿವೆ.
‘We want Sanju’ chants outside the stadium when team India leaves. pic.twitter.com/bzqljBakTG
— Mufaddal Vohra (@mufaddal_vohra) July 8, 2026
ಪಂದ್ಯ ಮುಗಿದ ಬಳಿಕ ಭಾರತದ ಆಟಗಾರರು ಸ್ಟೇಡಿಯಂ ತೊರೆದು ಬಸ್ಸಿನತ್ತ ಸಾಗುತ್ತಿದ್ದಾಗ ಅಭಿಮಾನಿಗಳು ಬಿಸಿಸಿಐ ಆಯ್ಕೆ ಸಮಿತಿ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಇದನ್ನೂ ಓದಿ: ನಮಗೆ ಅನ್ಯಾಯ, ವಿಶ್ವಕಪ್ ಫಿಕ್ಸ್ ಆಗಿದೆ: ಅರ್ಜೆಂಟೀನಾ ವಿರುದ್ಧದ ಸೋಲಿನ ಬಳಿಕ ಫಿಫಾ ವಿರುದ್ಧ ಮೋಸ್ತಫಾ ಜಿಕೊ ಆಕ್ರೋಶ
ಮೂರನೇ ಟಿ 20 ಪಂದ್ಯದಲ್ಲಿ ಮಂಗಳವಾರ ಮೊದಲು ಬ್ಯಾಟ್ ಬೀಸಿದ ಇಂಗ್ಲೆಂಡ್ 7 ವಿಕೆಟ್ ನಷ್ಟಕ್ಕೆ 201 ರನ್ ಗಳಿಸಿತ್ತು. ಕಠಿಣ ಸವಾಲು ಬೆನ್ನಟ್ಟಿದ ಭಾರತ 11.4 ಓವರ್‌ಗಳಲ್ಲಿ 76 ರನ್‌ಗಳಿಗೆ ಆಲೌಟ್ ಆಗಿತ್ತು. ಭಾರತದ ತಂಡದ ಕಳಪೆ ಪ್ರದರ್ಶನಕ್ಕೆ ನೆಟ್ಟಿಗರು ಗೌತಮ್ ಗಂಭೀರ್, ಶ್ರೇಯಸ್ ಅಯ್ಯರ್, ಬಿಸಿಸಿಐ ಆಯ್ಕೆ ಸಮತಿಯನ್ನು ತರಾಟೆಗೆ ತೆಗದುಕೊಳ್ಳುತ್ತಿದ್ದಾರೆ.
