ಅಟ್ಲಾಂಟಾ: 2026ರ ಫಿಫಾ ವಿಶ್ವಕಪ್ (FIFA World Cup) ಫಿಕ್ಸ್ ಆಗಿದೆ ಎಂದು ಈಜಿಪ್ಟ್(Egypt) ತಂಡದ ಫಾರ್ವರ್ಡ್ ಆಟಗಾರ ಮೋಸ್ತಫಾ ಜಿಕೊ(Mostafa Ziko) ಆಕ್ರೋಶ ಆಕ್ರೋಶ ಹೊರಹಾಕಿದ್ದಾರೆ.
ಪ್ರಿ ಕ್ವಾರ್ಟರ್ ಪಂದ್ಯದಲ್ಲಿ ಅರ್ಜೆಂಟೀನಾ ವಿರುದ್ಧ 2-3 ಅಂತರದ ರೋಚಕ ಸೋಲು ಕಂಡ ಬಳಿಕ ಪಂದ್ಯದ ರೆಫರಿಗಳು ಹಾಗೂ ಫಿಫಾ (FIFA) ವಿರುದ್ಧ ಸಿಟ್ಟು ಹೊರಹಾಕಿದ ಅವರು, ಟೂರ್ನಿಯು ಸಂಪೂರ್ಣವಾಗಿ ಫಿಕ್ಸ್ ಆಗಿದೆ ಮತ್ತು ಇದನ್ನು ಅರ್ಜೆಂಟೀನಾಗೆ ನೀಡಲಾಗುತ್ತಿದೆ ಎಂದು ದೂರಿದ್ದಾರೆ.
ಪಂದ್ಯ ಮುಗಿದ ಬಳಿಕ ಭಾವುಕರಾಗಿ ಮಾತನಾಡಿದ ಜಿಕೊ, ಇದು ನ್ಯಾಯವಲ್ಲ, ರೆಫರಿ ಮಾಡಿದ್ದು ಸ್ಪಷ್ಟ ಅನ್ಯಾಯ. ಅವರು ಇಡೀ ದೇಶದ ಶ್ರಮವನ್ನು ವ್ಯರ್ಥ ಮಾಡಿದ್ದಾರೆ. ಪಂದ್ಯದ ಆರಂಭದಿಂದಲೂ ರೆಫರಿ ನಮ್ಮ ವಿರುದ್ಧವೇ ಇದ್ದರು. ಅರ್ಜೆಂಟೀನಾ ವಿರುದ್ಧ ನಾವು 2-0 ಇಂದ ಗೆದ್ದು ಹೊರಹೋಗಲು ಅವರಿಗೆ ಇಷ್ಟವಿರಲಿಲ್ಲ. ವಿಶ್ವಕಪ್ ಟೂರ್ನಿಯು ಮೊದಲೇ ಫಿಕ್ಸ್ ಆಗಿದೆ, ಅರ್ಜೆಂಟೀನಾಗೆ ಕಪ್ ನೀಡಲಾಗುತ್ತದೆ ಎನ್ನುವುದು ಎಲ್ಲರಿಗೂ ಸ್ಪಷ್ಟವಾಗಿ ತಿಳಿಯುತ್ತದೆ ಎಂದು ಸಿಟ್ಟು ಹೊರಹಾಕಿದರು.
Mostafa Ziko’s interview after the match against Messi’s Argentina
🚨🗣️ Mostafa Ziko: “Congratulations to Argentina on the World Cup; the tournament was rigged, they didn’t need anything else.”
“The referee was unfair, unfair, unfair, unfair.” https://t.co/qqk2GXGniW pic.twitter.com/3H91CnTpt7
— Someone’s Son 💎🇬🇭 (@bigfred6ix9) July 7, 2026
ಅರ್ಜೆಂಟೀನಾ ಈ ಗೆಲುವಿನೊಂದಿಗೆ ಕ್ವಾರ್ಟರ್ ಫೈನಲ್ ಹಂತಕ್ಕೆ ಪ್ರವೇಶಿಸಿದ್ದರೆ, ಈಜಿಪ್ಟ್ ತಂಡವು ತೀವ್ರ ನಿರಾಶೆಯೊಂದಿಗೆ ಟೂರ್ನಿಯಿಂದ ಹೊರಬಿದ್ದಿದೆ.
ಪಂದ್ಯದ 15ನೇ ನಿಮಿಷದಲ್ಲಿ ಯಾಸರ್ ಇಬ್ರಾಹಿಂ ಮತ್ತು 67ನೇ ನಿಮಿಷದಲ್ಲಿ ಮೋಸ್ತಫಾ ಜಿಕೊ ಗೋಲು ಬಾರಿಸುವ ಮೂಲಕ ಈಜಿಪ್ಟ್ ತಂಡ 2-0 ರ ಭರ್ಜರಿ ಮುನ್ನಡೆ ಸಾಧಿಸಿ ಇತಿಹಾಸ ನಿರ್ಮಿಸುವ ಹಾದಿಯಲ್ಲಿತ್ತು.
ಪಂದ್ಯದ ದ್ವಿತೀಯಾರ್ಧದ ಆರಂಭದಲ್ಲಿ ಜಿಕೊ ಬಾರಿಸಿದ ಮತ್ತೊಂದು ಗೋಲನ್ನು ವಿಎಆರ್ ಪರಿಶೀಲನೆ ನಡೆಸಿ ಫೌಲ್ ಕಾರಣ ನೀಡಿ ರೆಫರಿ ರದ್ದುಗೊಳಿಸಿದರು. ಇದು ಪಂದ್ಯದ ಪ್ರಮುಖ ತಿರುವಿಗೆ ಕಾರಣವಾಯಿತು.
Mostafa Ziko goal cancelled in Argentina vs Egypt FIFA World Cup Round of 16 game pic.twitter.com/H5UY33iSKo
— Daily Foot Vibes (@dailyfootvibes) July 7, 2026
ಪಂದ್ಯದ ಕೊನೆಯ ಹಂತದಲ್ಲಿ ಅರ್ಜೆಂಟೀನಾ ಪರ ಕ್ರಿಸ್ಟಿಯನ್ ರೊಮೆರೊ (79′), ಲಿಯೋನೆಲ್ ಮೆಸ್ಸಿ (83′) ಮತ್ತು ಎಂಜೊ ಫೆರ್ನಾಂಡಿಸ್ (90′) ಕೇವಲ 13 ನಿಮಿಷಗಳ ಅಂತರದಲ್ಲಿ ಸರಣಿ ಗೋಲುಗಳನ್ನು ಬಾರಿಸಿ 3-2 ಅಂತರದ ಜಯ ತಂದುಕೊಟ್ಟರು. ಇದಕ್ಕೂ ಮುನ್ನ ಅರ್ಜೆಂಟೀನಾಗೆ ಸಿಕ್ಕ ಪೆನಾಲ್ಟಿ ಅವಕಾಶದಲ್ಲಿ ಮೆಸ್ಸಿ ಅವರ ಶಾಟ್ ಅನ್ನು ಈಜಿಪ್ಟ್ ಗೋಲ್‌ಕೀಪರ್ ಮೋಸ್ತಫಾ ಶೋಬೀರ್ ತಡೆದಿದ್ದರು.
