ಮಂಡ್ಯ: ಮಂಡ್ಯ ಬಿಟ್ಟು ಬೇರೆ ಯಾವ ಜಿಲ್ಲೆಯಲ್ಲೂ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ಅವರ ಭರವಸೆಯ ಮೇಲೆ ಜನರಿಗೆ ನಂಬಿಕೆ ಇಲ್ಲ ಎಂದು ಮಾಜಿ ಸಚಿವ ಚಲುವರಾಯಸ್ವಾಮಿ (Chaluvaraya Swamy) ಕಾಲೆಳೆದಿದ್ದಾರೆ.
ಮಂಡ್ಯ (Mandya) ಜಿಲ್ಲೆಯ ನಾಗಮಂಗಲ (Nagamangala) ಕ್ಷೇತ್ರದಲ್ಲಿ ಪ್ರಚಾರದ ವೇಳೆ ಮಾತನಾಡಿದ ಅವರು, ನನಗೆ 123 ಸೀಟು ಬಂದರೆ ಪಂಚರತ್ನ (Pancharathna) ಯೋಜನೆ ಮಾಡುತ್ತೇನೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಹಾಗೂ 123 ಸೀಟು ಬರಲಿಲ್ಲ ಅಂದರೆ ನೀವ್ಯಾರು ನನ್ನನ್ನು ಏನೂ ಕೇಳಬಾರದು ಎಂದು ಕೂಡಾ ಹೇಳಿದ್ದಾರೆ. ಬೆಳಗಾವಿ, ಮಂಗಳೂರು, ಗುಲ್ಬರ್ಗ, ಕೋಲಾರದಲ್ಲಿ ಅವರು ಭರವಸೆ ಕೇಳಲ್ಲ. ಬರೀ ಮಂಡ್ಯದಲ್ಲಿ ಕೇಳಿದರೆ ಏನು ಪ್ರಯೋಜನ ಎನ್ನುವ ಮೂಲಕ ಈ ಬಾರಿ ಮಂಡ್ಯ ಜನರು ಜೆಡಿಎಸ್ (JDS) ಬೆಂಬಲಿಸದೆ ಕಾಂಗ್ರೆಸ್ (Congress) ಬೆಂಬಲಿಸಿ ಎಂದರು. ಇದನ್ನೂ ಓದಿ: ನನ್ನ ಹೇಳಿಕೆ ತಿರುಚಿದ್ದಾರೆ: ಡಿಕೆಶಿನ ಹೈಕಮಾಂಡ್ ಸಿಎಂ ಮಾಡಲ್ಲ ಹೇಳಿಕೆಗೆ ಸಿದ್ದು ಸ್ಪಷ್ಟನೆ
Advertisement
Advertisement
31 ಜಿಲ್ಲೆಯ ಎಲ್ಲಾ ವರ್ಗದ ಜನ ಅವರ ಭರವಸೆಯ ಬಗ್ಗೆ ನಂಬಿಕೆ ಇಟ್ಟರೆ ಜೆಡಿಎಸ್‌ಗೆ 123 ಸೀಟ್ ಬರಬಹುದು. ಆದರೆ ಮಂಡ್ಯ ಬಿಟ್ಟು ಬೇರೆ ಯಾವ ಜಿಲ್ಲೆಯಲ್ಲೂ ಅವರ ಭರವಸೆಯ ಮೇಲೆ ನಂಬಿಕೆ ಇಲ್ಲ ಎಂದು ಹೇಳಿದರು. ಇದನ್ನೂ ಓದಿ: ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಸಿಎಂ ಆಗೋ ಕನಸು ನನಸಾಗಲ್ಲ: ಬೊಮ್ಮಾಯಿ
Advertisement
ಕುಮಾರಸ್ವಾಮಿ ಅವರಿಗೆ ಯಾವ ಪಕ್ಷವೂ ಅಧಿಕಾರಕ್ಕೆ ಬರಬಾರದು. ನಮ್ಮನ್ನು ಮಧ್ಯದಲ್ಲಿ ಉಪಯೋಗಿಸಿಕೊಳ್ಳಬೇಕು ಎಂದು ಅಂದುಕೊಂಡಿದ್ದಾರೆ. ಕಳೆದ ಬಾರಿ ಮಂಡ್ಯ ಜಿಲ್ಲೆಯ ಜನರ ಆಶೀರ್ವಾದದಿಂದ 37 ಸೀಟ್ ಬಂತು. ಹೀಗಾಗಿ ಕಾಂಗ್ರೆಸ್, ಬಿಜೆಪಿ (BJP) 113 ಸೀಟ್ ದಾಟಲಿಲ್ಲ. ಆದರೆ ಕಾಂಗ್ರೆಸ್ ಪಕ್ಷ ಕುಮಾರಸ್ವಾಮಿಯವರ ಮನೆಗೆ ಹೋಗಿ ಅವರನ್ನು ಸಿಎಂ ಮಾಡಿತ್ತು. ಆದರೆ ಅವರು ಸರಿಯಾಗಿ ಅಧಿಕಾರ ಮಾಡಲಿಲ್ಲ. ಈ ಬಾರಿಯಾದರೂ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಎಂದು ಜನರಲ್ಲಿ ಮನವಿ ಮಾಡಿದರು. ಇದನ್ನೂ ಓದಿ: ಶಾಸಕ ಟಿ.ಡಿ ರಾಜೇಗೌಡ ಹಂಚಿದ್ದ ಕುಕ್ಕರ್ ಬ್ಲಾಸ್ಟ್- ರೊಚ್ಚಿಗೆದ್ದ ಹಳ್ಳಿಗರು
Advertisement