ವಿಜಯಪುರ: ಸಿಎಂ ಸಿದ್ಧರಾಮಯ್ಯ (Siddaramaiah) ರಾಜೀನಾಮೆ ಕೊಟ್ಟಿದ್ದಾರೆ. ಇದರಿಂದ ಕಾಂಗ್ರೆಸ್‌ಗೆ 2028ಕ್ಕೆ ದೊಡ್ಡ ಹೊಡೆತ ಬೀಳಲಿದೆ ಎಂದು ಶಾಸಕ ಬಸನಗೌಡಾ ಪಾಟೀಲ್ ಯತ್ನಾಳ್ (Basangouda Patil Yatnal) ಭವಿಷ್ಯ ನುಡಿದಿದ್ದಾರೆ.
ವಿಜಯಪುರದಲ್ಲಿ ಮಾಧ್ಯಮಗಳ ಜೊತೆ ಅವರು ಮಾತನಾಡಿದರು. ಈ ವೇಳೆ, ಸಿದ್ದರಾಮಯ್ಯ ಅವರನ್ನ ಯಾವುದೆ ಕಾರಣ ಇಲ್ಲದೆ ಇಳಿಸಿದ್ದಾರೆ. ಇದರಿಂದ ಕುರುಬ ಸಮಾಜ ಕೋಪಗೊಂಡಿದೆ. ಹಾಲುಮತ ಕುರುಬ ಸಮಾಜಕ್ಕೆ ಮಾಡಿದ ಅನ್ಯಾಯ ಇದಾಗಿದೆ. ಇದರ ಎಫೆಕ್ಟ್ ಮುಂದಿನ ವಿಧಾನಸಭೆ ಚುನಾವಣೆಯ ವೇಳೆ ವಿರೋಧ ಪಕ್ಷಗಳಿಗೆ ಲಾಭ ಅಗಲಿದೆ ಎಂದಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ರಾಜೀನಾಮೆ ಬೆನ್ನಲ್ಲೇ ʻಪವರ್ ಹೌಸ್ʼ ಆಯ್ತು ಡಿಕೆಶಿ ನಿವಾಸ!
ರಾಹುಲ್ ಗಾಂಧಿ ಮಾತನಾಡಿದ್ರೆ ಹಿಂದುಳಿದ ವರ್ಗ ಎನ್ನುತ್ತಿದ್ದರು. ಈಗ ಎಲ್ಲಿದೆ ಹಿಂದುಳಿದ ವರ್ಗ? ಸಿದ್ದರಾಮಯ್ಯ ರಾಜೀನಾಮೆಯಿಂದ ದಲಿತರಿಗೂ ಅನ್ಯಾಯ ಆಗಿದೆ. ಸಿದ್ದರಾಮಯ್ಯ ಅವರದ್ದು ಅತೀಯಾಗಿದ್ದು ಮುಸ್ಲಿಮರ ಓಲೈಕೆ. ಕೊನೆ ಕ್ಷಣದಲ್ಲೂ ರಾಜ್ಯದಲ್ಲಿ ಮುಸ್ಲಿಂ 1 ಅಂತಾ ಘೋಷಣೆ ಮಾಡಿ ಹೋದರು. ಆದ್ರೆ ಇವತ್ತು ಯಾವೊಬ್ಬ ಮುಸ್ಲಿಂ ನಾಯಕನು ರಾಜ್ಯದಲ್ಲಿ ಒಂದು ವಿರೋಧ ವ್ಯಕ್ತಪಡಿಸಿಲ್ಲ. ಅವರ ವಿದಾಯದ ವೇಳೆ ಬಹಳ ಟೀಕೆ ಮಾಡಲ್ಲ. ಆವರಿಗೆ ಒಳ್ಳೆಯದಾಗಲಿ ಎಂದು ಹಾರೈಸುತ್ತೇನೆ ಎಂದರು. ಇದನ್ನೂ ಓದಿ: ನಮ್ಮ ಆಸೆ, ಅಭಿಲಾಷೆಯನ್ನ ಭಗವಂತ ಈಡೇರಿಸುತ್ತಿದ್ದಾನೆ: ಇಕ್ಬಾಲ್ ಹುಸೇನ್
