ಗಾಂಧಿನಗರ: ಗಡಿ ಮೂಲಸೌಕರ್ಯ ಮತ್ತು ಭದ್ರತೆಯನ್ನು ವೇಗಗೊಳಿಸಲು ಸುವೇಂಧು ಅಧಿಕಾರಿ ನೇತೃತ್ವದ ಸರ್ಕಾರವು ಕೇವಲ 7 ದಿನಗಳಲ್ಲಿ 600 ಹೆಕ್ಟೇರ್‌ನಷ್ಟು ಭೂಮಿಯನ್ನು ಗಡಿ ಭದ್ರತಾ ಪಡೆಗೆ (BSF) ಹಸ್ತಾಂತರಿಸಿದೆ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ (Amit Shah) ತಿಳಿಸಿದರು. ಈ ಬಗ್ಗೆ ಸಿಎಂ ಸುವೇಂಧು ಅಧಿಕಾರಿ ಕೂಡ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
#WATCH | Gandhinagar, Gujarat | Union Home Minister Amit Shah says, “We have said during the elections that we will start the fencing work along the Bangladesh border once we come to power. Now, I would like to congratulate West Bengal CM Suvendu Adhikari for handing over 600… pic.twitter.com/R186isqnX0
— ANI (@ANI) May 28, 2026
ಗುಜರಾತ್‌ನ (Gujarat) ಗಾಂಧಿನಗರದಲ್ಲಿ (Gandhinagar) ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಸಚಿವರು, ಬಂಗಾಳದಲ್ಲಿ ಅಕ್ರಮ ಒಳನುಸುಳುವಿಕೆ ಕುರಿತು ಬಲವಾದ ಹೇಳಿಕೆ ನೀಡಿದರು. ಭಾರತ – ಬಾಂಗ್ಲಾ ಗಡಿಯಲ್ಲಿ ಅಕ್ರಮ ಒಳನುಸುಳುವಿಕೆ ತಡೆಯಲು ಆಕ್ರಮಣಕಾರಿ ಗಡಿಭದ್ರತಾ ಕ್ರಮಕ್ಕೆ ಕೇಂದ್ರ ಸಿದ್ಧತೆ ನಡೆಸುತ್ತಿದೆ ಎಂದು ಎಚ್ಚರಿಸಿದರು.

ಕಣ್ಗಾವಲು ಮತ್ತು ರಾಷ್ಟ್ರೀಯ ಭದ್ರತಾ ಕ್ರಮಗಳನ್ನ ಬಲಪಡಿಸುವ ಕಾರ್ಯತಂತ್ರದ ಭಾಗವಾಗಿ ʻಚಿಕನ್ ನೆಕ್ʼ ಕಾರಿಡಾರ್ ಮೇಲೆ ವಿಶೇಷ ಗಮನ ಹರಿಸಲಾಗಿದೆ. ಅಕ್ರಮ ಒಳನುಸುಳುವವರ ಮೇಲೆ ತೀವ್ರಗೊಂಡ ಕ್ರಮವು ಈಗಾಗಲೇ ಒತ್ತಡ ಸೃಷ್ಟಿಸಲು ಪ್ರಾರಂಭಿಸಿದೆ. ಅನೇಕರು ತಾವಾಗಿಯೇ ದೇಶ ಬಿಟ್ಟು ಓಡುತ್ತಿದ್ದಾರೆ ಎಂದ ಗೃಹಸಚಿವರು ಅಕ್ರಮ ವಲಸೆ ಪ್ರಕರಣಗಳನ್ನು ಹೆಚ್ಚಿ ಪರಿಣಾಮಕಾರಿಯಾಗಿ ನಿಭಾಯಿಸಲು ರಾಜ್ಯಾದ್ಯಂತ ಕೈಗೊಂಡ ಕ್ರಮಗಳ ಬಗ್ಗೆ ಎತ್ತಿತೋರಿಸಿದರು.
ಮುಂದುವರಿದು.. ಭಾರತ-ಬಾಂಗ್ಲಾದೇಶ ಗಡಿಯಲ್ಲಿ ದೀರ್ಘಕಾಲದಿಂದ ಬಾಕಿ ಇರುವ ಬೇಲಿ ಹಾಕುವ ಕೆಲಸ ಶೀಘ್ರದಲ್ಲೇ ಪುನರಾರಂಭಗೊಳ್ಳುವ ನಿರೀಕ್ಷೆಯಿದೆ. ಒಳನುಸುಳುವಿಕೆ ಮಾರ್ಗಗಳನ್ನು ಸಂಪೂರ್ಣವಾಗಿ ಮುಚ್ಚುವ ಗುರಿ ಹೊಂದಿದೆ ಎಂದು ಸ್ಪಷ್ಟಪಡಿಸಿದರು.
