ಬೆಂಗಳೂರು: ನಗರದ ಹಲವೆಡೆ ಭಾರೀ ಮಳೆಯಾಗುತ್ತಿದೆ. ಮಳೆಯ (Rain) ಹಿನ್ನೆಲೆ ಬೆಂಗಳೂರಿಗೆ (Bengaluru) ಎಲ್ಲೋ ಅಲರ್ಟ್ ಘೋಷಿಸಲಾಗಿದೆ.
ಬನ್ನೆರುಘಟ್ಟ ರಸ್ತೆ, ಬಿಟಿಎಂ ಲೆಔಟ್ ಹಾಗೂ ಇಂದಿರಾ ನಗರದಲ್ಲಿ ಭಾರೀ ಮಳೆಯಾಗಿದ್ದು, ಕೆಲವೆಡೆ ರಸ್ತೆ ಮೇಲೆ ನೀರು ಹರಿದಿದೆ. ಇದರಿಂದ ವಾಹನ ಸವಾರರು ಕೆಲಕಾಲ ಪರದಾಡಿದ್ದಾರೆ.

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮಂಡ್ಯ, ಕಲಬುರ್ಗಿ, ರಾಯಚೂರು ಜಿಲ್ಲೆಗೆ ಎಲ್ಲೋ ಅಲರ್ಟ್ ಘೋಷಣೆಯಾಗಿದೆ.
