ಬೆಂಗಳೂರು: ಮೇ 10 ರಂದು ನಡೆಯುವ ರಾಜ್ಯ ಸಾರ್ವತ್ರಿಕ ಚುನಾವಣೆಗೆ (Karnataka Election 2023) ಮತದಾರರನ್ನು ಆಕರ್ಷಿಸಲು ರಾಜಧಾನಿಯ ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಮತಗಟ್ಟೆಗಳಲ್ಲಿ ರಚಿಸಿ ಅಲಂಕಾರಗೊಳಿಸಲಾಗಿದೆ. ಮತದಾನ ಹೆಚ್ಚಳ ಮಾಡಲು ಥೀಮ್ ಆಧಾರಿತ ಮತಗಟ್ಟೆ ನಿರ್ಮಿಸಲಾಗಿದೆ.
Advertisement
ಜಿಲ್ಲಾ ಚುನಾವಣಾಧಿಕಾರಿ – ಬೆಂಗಳೂರು (Bengaluru) ವ್ಯಾಪ್ತಿಯಲ್ಲಿರುವ ನಾಲ್ಕು ಅಪರ ಜಿಲ್ಲಾ ಚುನಾವಣಾಧಿಕಾರಿ (ಬೆಂಗಳೂರು ಕೇಂದ್ರ, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ನಗರ)ಗಳ ವ್ಯಾಪ್ತಿಯಲ್ಲಿ ವಿಶೇಷ ವಿನ್ಯಾಸಗಳ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಇದನ್ನೂ ಓದಿ: ಬಿರು ಬೇಸಿಗೆ ಮಧ್ಯೆ ಭಾರೀ ಮಳೆ- ಸಿಲಿಕಾನ್ ಸಿಟಿಯಲ್ಲಿ 5 ಮನೆಗಳು ಕುಸಿತ, ಕಾರುಗಳು ಜಖಂ
Advertisement
Advertisement
ಈ ವಿನೂತನ ಥೀಮ್ ಆಧಾರಿತ ಮತಗಟ್ಟೆಗಳಲ್ಲಿ ಮಹಿಳೆಯರಿಗಾಗಿ ಪಿಂಕ್ ಮತಗಟ್ಟೆ, ಯುವ ಮತದಾರರ ಮತಗಟ್ಟೆ, ಸಿರಿಧಾನ್ಯ ಮತಗಟ್ಟೆ, ವಿಶೇಷ ಚೇತನ ಮತಗಟ್ಟೆ, ಸಂಸ್ಕೃತಿ ಮತಗಟ್ಟೆ, ಪರಿಸರ (ಹಸಿರು ಬಣ್ಣದ) ಮತಗಟ್ಟೆ, ವಿಜ್ಞಾನ ಮತ್ತು ತಂತ್ರಜ್ಞಾನ ಮತಗಟ್ಟೆ, ಮಾಜಿ ಸೈನಿಕ ಮತಗಟ್ಟೆ, ತೃತೀಯಲಿಂಗಿ ಮತಗಟ್ಟೆ, ಕ್ರೀಡಾ ಮತಗಟ್ಟೆಗಳೆಂಬ ವಿಶೇಷ ವಿನ್ಯಾಸದ ಮತಗಟ್ಟೆಗಳಿರಲಿವೆ.
Advertisement
264 ಥೀಮ್ ಮತಗಟ್ಟೆಗಳ ನಿರ್ಮಾಣ ಮಾಡಲಾಗಿದೆ. ಇದುವರೆಗೂ ಬೆಂಗಳೂರಿನಲ್ಲಿ 55% ಮತದಾನ ದಾಟುತ್ತಿಲ್ಲ. 75% ಮತದಾನ ಸಾಧಿಸಲು ಚುನಾವಣಾ ಆಯೋಗದಿಂದ ವಿವಿಧ ಮಾದರಿಯ ಮತಗಟ್ಟೆಗಳ ನಿರ್ಮಾಣವಾಗಿದೆ. ಇದನ್ನೂ ಓದಿ: ಚುನಾವಣಾ ಬಹಿರಂಗ ಪ್ರಚಾರಕ್ಕೆ ತೆರೆ – ಇನ್ನೇನಿದ್ದರೂ ಮನೆಮನೆ ಪ್ರಚಾರ
ಥೀಮ್ ಮತಗಟ್ಟೆಗಳು ಎಷ್ಟೆಷ್ಟು?
ಒಟ್ಟು ಮತಗಟ್ಟೆಗಳು – 264
ಸಖಿ – 140 ಮತಗಟ್ಟೆ (ಮಹಿಳೆಯರಿಗಾಗಿ ಮಹಿಳಾ ಸಿಬ್ಬಂದಿಗಳೇ ಇರುತ್ತಾರೆ)
ಯುವ ಮತಗಟ್ಟೆ – 24
ಅಂಗವಿಕಲರಿಗೆ – 36
ನಿವೃತ್ತ ಸೇನಾ ಸಿಬ್ಬಂದಿ – 5
ಹಸಿರು ಮತ್ತು ಪರಿಸರ – 12
ವಿಜ್ಞಾನ ಮತ್ತು ತಂತ್ರಜ್ಞಾನ – 5
ಕ್ರೀಡಾ ಮತಗಟ್ಟೆ – 2