Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಕನ್ನೇರಿ ಶ್ರೀಗಳು ಅಭಿವ್ಯಕ್ತಿ ಸ್ವಾತಂತ್ರ‍್ಯ ಬಳಸಿಕೊಂಡು ಮಾತಾಡಿದ್ದಾರೆ, ನಿರ್ಬಂಧ ಹೇರಿರುವುದು ಸೂಕ್ತವಲ್ಲ- ಶ್ರೀಶೈಲ ಜಗದ್ಗುರು
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | ಕನ್ನೇರಿ ಶ್ರೀಗಳು ಅಭಿವ್ಯಕ್ತಿ ಸ್ವಾತಂತ್ರ‍್ಯ ಬಳಸಿಕೊಂಡು ಮಾತಾಡಿದ್ದಾರೆ, ನಿರ್ಬಂಧ ಹೇರಿರುವುದು ಸೂಕ್ತವಲ್ಲ- ಶ್ರೀಶೈಲ ಜಗದ್ಗುರು

Districts

ಕನ್ನೇರಿ ಶ್ರೀಗಳು ಅಭಿವ್ಯಕ್ತಿ ಸ್ವಾತಂತ್ರ‍್ಯ ಬಳಸಿಕೊಂಡು ಮಾತಾಡಿದ್ದಾರೆ, ನಿರ್ಬಂಧ ಹೇರಿರುವುದು ಸೂಕ್ತವಲ್ಲ- ಶ್ರೀಶೈಲ ಜಗದ್ಗುರು

Public TV
Last updated: November 18, 2025 7:01 pm
Public TV
Share
2 Min Read
Shrishaila Shree
SHARE

– ಹಾಗಂತ ಅವರು ಬಳಸಿದ ಭಾಷೆಯನ್ನು ಸಮರ್ಥಿಸಿಕೊಳ್ಳಲ್ಲ

ವಿಜಯಪುರ: ಕನ್ನೇರಿ ಶ್ರೀಗಳು (Kanneri Shri) ತಮ್ಮ ಅಭಿವ್ಯಕ್ತಿ ಸ್ವಾತಂತ್ರ‍್ಯ ಬಳಸಿಕೊಂಡು ಮಾತಾಡಿದ್ದಾರೆ. ಹೀಗಾಗಿ ಅವರಿಗೆ ಜಿಲ್ಲೆಗೆ ನಿರ್ಬಂಧ ಹೇರಿರುವುದು ಸರಿಯಲ್ಲ. ಇನ್ನೂ ಅವರು ಮಾತನಾಡುವಾಗ ಭಾಷೆಯ ಮೇಲೆ ಹಿಡಿತವಿಟ್ಟುಕೊಂಡು ಮಾತನಾಡಬೇಕಿತ್ತು ಎಂದು ಶ್ರೀಶೈಲ ಪೀಠದ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರು ಹೇಳಿದರು.

ಜಿಲ್ಲೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕನ್ನೇರಿ ಶ್ರೀಗಳು ಅಭಿವ್ಯಕ್ತಿ ಸ್ವಾತಂತ್ರ‍್ಯ ಬಳಸಿಕೊಂಡು ತಮ್ಮ ಅಭಿಪ್ರಾಯ ಹೇಳಿದ್ದಾರೆ. ಅವರ ಮೇಲೆ ನಿರ್ಬಂಧ ಹೇರಿದ್ದು ಸೂಕ್ತವಲ್ಲ. ಹಾಗಂತ ಕನ್ನೇರಿ ಶ್ರೀ ಬಳಸಿದ ಭಾಷೆಯನ್ನು ಸಮರ್ಥಿಸಿಕೊಳ್ಳಲ್ಲ. ತಮ್ಮ ಭಾಷೆಯನ್ನು ಹಿಡಿತದಲ್ಲಿಟ್ಟುಕೊಂಡು ಮಾತನಾಡಬೇಕಿತ್ತು. ಅವರ ವಿಚಾರಧಾರೆ ಸರಿಯಿದೆ. ಆದರೆ ಭಾಷೆಯನ್ನು ಬಳಸುವಾಗ ಸ್ವಲ್ಪ ನಿಯಂತ್ರಣದಲ್ಲಿ ಬಳಸಬೇಕಿತ್ತು ಎಂದರು.ಇದನ್ನೂ ಓದಿ: ಪೋಕ್ಸೋ ಕೇಸ್ | ಡಿ.2ಕ್ಕೆ ಕೋರ್ಟ್‌ಗೆ ಹಾಜರಾಗಲು BSY ಸೇರಿ 4 ಆರೋಪಿಗಳಿಗೆ ಸಮನ್ಸ್

ಇನ್ನೂ ಬಸವ ಸಂಸ್ಕೃತಿ ರಥಯಾತ್ರೆ ಮೂಲಕ ಮತ್ತೆ ಲಿಂಗಾಯತ ಪ್ರತ್ಯೇಕ ಧರ್ಮ ಮುನ್ನೆಲೆಗೆ ಬಂದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಲಿಂಗಾಯತ ಪ್ರತ್ಯೇಕ ಧರ್ಮ ಅನ್ನೋದು 10-20 ವರ್ಷಗಳಿಂದ ಹುಟ್ಟಿಕೊಂಡಿದೆ. ಅದಕ್ಕಿಂತ ಮೊದಲು ಲಿಂಗಾಯತ ಪ್ರತ್ಯೇಕ ಧರ್ಮ ಬೇಕು ಎಂಬ ವಾದ ಎಲ್ಲಿಯೂ ಕೇಳಲು, ನೋಡಲು ಸಿಕ್ಕಿಲ್ಲ. ಅದಕ್ಕೆ ಪ್ರತ್ಯಕ್ಷ ಉದಾಹರಣೆ ಎಂದರೆ ಪ್ರತ್ಯೇಕ ಲಿಂಗಾಯತ ಧರ್ಮ ಹೇಳುವವರ ಶಾಲಾ ದಾಖಲಾತಿಯಲ್ಲಿ ವೀರಶೈವ ಇರೋದು ನೋಡ್ತೀವಿ. ವೀರಶೈವ ಲಿಂಗಾಯತ ಒಂದೇ ಅಂತ ವಾದ ಮಾಡುವವರ ಅನೇಕರ ಸರ್ಟಿಫಿಕೇಟ್‌ನಲ್ಲಿ ಲಿಂಗಾಯತ ಎಂದಷ್ಟೇ ಇರೋದು ನೋಡ್ತೀವಿ. ಇದರಿಂದ ಸ್ಪಷ್ಟವಾಗುತ್ತದೆ ಎಂದು ತಿಳಿಸಿದರು.

20 ವರ್ಷಗಳ ಹಿಂದೆ ವೀರಶೈವ ಮತ್ತು ಲಿಂಗಾಯತ ಬೇರೆ ಬೇರೆ ಎಂಬ ಭೇದಭಾವ ಕಲ್ಪನೆ ಯಾರ ತಲೆಯಲ್ಲಿ ಇರಲಿಲ್ಲ. ಇತಿಹಾಸ, ಸಾಹಿತ್ಯ, ಪುರಾವೆ ಯಾರು ತಲೆಯಲ್ಲೂ ಇರಲಿಲ್ಲ. ಲಿಂಗಾಯತ ಪ್ರತ್ಯೇಕ ಧರ್ಮ ಎಂಬ ವಿಚಾರಕ್ಕೆ ಯಾವುದೇ ತಳಹದಿ ಇಲ್ಲ. ಧರ್ಮದಲ್ಲಿ ಗೊಂದಲ, ಇಬ್ಭಾಗ, ಬೇಧವನ್ನು ಮಾಡಬಾರದು. ಲಿಂಗಾಯತ ಧರ್ಮ ಪ್ರತ್ಯೇಕ ಧರ್ಮ ಎಂದು ಹೇಳಿಕೊಂಡು ಹೊರಟಿದ್ದಾರಲ್ಲ. ಆದ್ರೆ ಬಸವಣ್ಣನವರು ಮಾಡಿರೋ ಸಮಾಜ ಸುಧಾರಣೆ ಬಗ್ಗೆ, ವೀರಶೈವ ಲಿಂಗಾಯತ ಧರ್ಮದಲ್ಲಿ ಅವರು ಮೂಡಿಸಿದ ಕ್ರಾಂತಿ ಬಗ್ಗೆ ನಾವು ಎಂದಿಗೂ ಬಹಳ ಗೌರವದಿಂದ ಅಭಿನಂದನಾ ದೃಷ್ಟಿಯಿಂದ ನೋಡುತ್ತೇವೆ. ಎಂದೂ ಕೂಡಾ ವಿರೋಧ ಮಾಡುವ ಪ್ರಶ್ನೆಯೇ ಇಲ್ಲ. ಆದ್ರೆ ಬಸವಣ್ಣನವರು ತಮ್ಮ ವಚನದಲ್ಲಿ ಲಿಂಗಾಯತ ಎಂಬ ಶಬ್ದ ಬಳಸಿಲ್ಲ. ಯಾವುದೇ ವಚನ ತೆಗೆದು ನೋಡಿ ಲಿಂಗಾಯತ ಎಂಬ ಪದ ಬಳಸಿಲ್ಲ. ಆದ್ರೆ ಒಂದು ವಚನದಲ್ಲಿ ಬಸವಣ್ಣನವರು ನಿಜ ವೀರಶೈವನಾದೆ ಎಂದು ಹೇಳಿಕೊಂಡಿದ್ದಾರೆ. ಅವರೇ ವೀರಶೈವನಾದೆ ಎಂದು ಹೇಳಿಕೊಂಡಿದ್ದಾರೆ ಅಂದ್ರೆ ಲಿಂಗಾಯತ ಪ್ರತ್ಯೇಕ ಧರ್ಮ ಸ್ಥಾಪನೆ ಬಸವಣ್ಣನವರು ಮಾಡಿದ್ದಾರೆ ಎಂದು ಹೇಳೋದು ಎಷ್ಟು ಸೂಕ್ತ ಎಂದರು.ಇದನ್ನೂ ಓದಿ: ಶಬರಿಮಲೆಯಲ್ಲಿ ಭಾರೀ ಜನಸ್ತೋಮ – ಅಯ್ಯಪ್ಪನ ದರ್ಶನಕ್ಕೆ ಬರುತ್ತಿದ್ದ ವೃದ್ಧೆ ಸಾವು!

TAGGED:Kanneri ShriShrishaila jagadguruvijayapuraಕನ್ನೇರಿ ಶ್ರೀಗಳುಬಸವ ಸಂಸ್ಕೃತಿವಿಜಯಪುರಶ್ರೀಶೈಲ ಜಗದ್ಗುರುಗಳು
Share This Article
Facebook Whatsapp Whatsapp Telegram

Cinema news

Sanjay Dutt
ಸರ್ಸೆ ಸೆರಗ ಸರ್ಸೆ ಹಾಡಿನ ವಿವಾದ – ಕ್ಷಮೆಯಾಚಿಸಿದ ಸಂಜಯ್ ದತ್, ಬುಡಕಟ್ಟು ಜನಾಂಗದ 50 ಹುಡುಗಿಯರ ಶಿಕ್ಷಣಕ್ಕೆ ಹಣದ ಭರವಸೆ
Bollywood Cinema Latest National Sandalwood Top Stories
ChetanKumar Ahimsa
ರಾಜ್‌ಕುಮಾರ್‌ ಸಮಾಧಿ ಬಗ್ಗೆ ವಿವಾದಾತ್ಮಕ ಪೋಸ್ಟ್‌ – ಅಭಿಮಾನಿಗಳು ಮುತ್ತಿಗೆ ಹಾಕುತ್ತಿದ್ದಂತೆ ಕ್ಷಮೆಯಾಚಿಸಿದ ಚೇತನ್‌
Cinema Karnataka Latest Top Stories
chetan 13 5
ರಾಜ್‌ಕುಮಾರ್‌ ಸಮಾಧಿಗೆ 2.5 ಎಕರೆ ಜಾಗ ನೀಡಿದ್ದು ಸರಿಯೇ? – ನಟ‌ ಚೇತನ್ ವಿರುದ್ಧ ಡಾಕ್ಟರ್ ರಾಜ್‌ ಅಭಿಮಾನಿಗಳಿಂದ ದೂರು
Bengaluru City Cinema Latest Sandalwood Top Stories
Akshay Kumar 1
ನಟ ಅಕ್ಷಯ್ ಕುಮಾರ್ ಅಪ್ರಾಪ್ತ ಪುತ್ರಿಯ ಬೆತ್ತಲೆ ಫೋಟೋಗೆ ಬೇಡಿಕೆಯಿಟ್ಟಿದ್ದ ವ್ಯಕ್ತಿ ಅರೆಸ್ಟ್
Bollywood Cinema Crime Latest Top Stories

You Might Also Like

adugodi women death
Bengaluru City

ಬೆಂಗಳೂರಲ್ಲಿ ಯುವತಿ ಅನುಮಾನಾಸ್ಪದ ಸಾವು – ಬೆತ್ತಲೆ, ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆ

Public TV
By Public TV
25 minutes ago
RCB 1
Cricket

ಬೆಂಗಳೂರು ಹೊಡೆತಕ್ಕೆ ಮಕಾಡೆ ಮಲಗಿದ ಡೆಲ್ಲಿ – ಆರ್‌ಸಿಬಿಗೆ 9 ವಿಕೆಟ್‌ಗಳ ಭರ್ಜರಿ ಜಯ 

Public TV
By Public TV
60 minutes ago
Panchamasali Peetha 1
Davanagere

ಹರಿಹರ ಪಂಚಮಸಾಲಿ ಗುರುಪೀಠದಲ್ಲಿ ಭಾರಿ ಹೈಡ್ರಾಮಾ – ಚಪ್ಪಲಿ, ಬಾಟೆಲ್ ತೂರಾಟ, ಕರೆಂಟ್ ಕಟ್

Public TV
By Public TV
1 hour ago
ramanath rai team mangaluru
Dakshina Kannada

ಬ್ರಹ್ಮರಕೊಟ್ಲು ಟೋಲ್‌ಗೇಟ್‌ ಬಂದ್‌: ನಾಳೆ ಬೃಹತ್‌ ಜನಾಂದೋಲನ ನಡಿಗೆ

Public TV
By Public TV
3 hours ago
pm modi 5
Latest

ಭಯದಲ್ಲಿ ಬದುಕಿದ್ದು ಸಾಕು.. ನಮಗಿನ್ನು ನಂಬಿಕೆ ಬೇಕು: ಬಂಗಾಳ ಜನತೆಗೆ ಮೋದಿ ಪತ್ರ

Public TV
By Public TV
4 hours ago
4 Of Mumbai Family Die Of Suspected Food Poisoning After Eating Biryani Watermelon
Crime

ಬಿರಿಯಾನಿ, ಕಲ್ಲಂಗಡಿ ತಿಂದ ಒಂದೇ ಕುಟುಂಬದ ನಾಲ್ವರು ಸಾವು

Public TV
By Public TV
4 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?