Bollywood
100 ದಿನಗಳ ನಂತ್ರ ಮುಂಬೈಗೆ ಎಂಟ್ರಿ – ನನಗೆ ಯಾರ ಪರ್ಮಿಷನ್ ಬೇಕಿಲ್ಲ ಅಂದ ಕಂಗನಾ

ಮುಂಬೈ: ಬಾಲಿವುಡ್ ಕ್ವೀನ್ ನಟಿ ಕಂಗನಾ ರಣಾವತ್ 104 ದಿನಗಳ ಬಳಿಕ ಮುಂಬೈಗೆ ಬಂದಿದ್ದು, ಇಂದು ನಗರದ ಪ್ರಸಿದ್ಧ ಸಿದ್ಧಿವಿನಾಯಕ ದೇವಸ್ಥಾನಕ್ಕೆ ತೆರಳಿ ಗಜಾನನ ದರ್ಶನ ಪಡೆದರು. ದೇವಾಲಯದಿಂದ ಹೊರ ಬಂದು ಮಾಧ್ಯಮಗಳ ಜೊತೆ ಮಾತನಾಡಿದ ಕಂಗನಾ ರಣಾವತ್, ನನಗೆ ಇಲ್ಲಿ ಬರಲು ಯಾರ ಅನುಮತಿಯೂ ಬೇಕಿಲ್ಲ. ಕೇವಲ ಗಣಪತಿ ಬಪ್ಪಾನ ಪರ್ಮಿಷನ್ ಬೇಕೆಂದು ಹೇಳುವ ಮೂಲಕ ಶಿವಸೇನೆ ನಾಯಕರಿಗೆ ಟಾಂಗ್ ಕೊಟ್ಟರು.
ಇಂದು ಬೆಳಗ್ಗೆ ಸೋದರಿ ರಂಗೋಲಿ ಸಿದ್ಧಿವಿನಾಯಕ ಮಂದಿರಕ್ಕೆ ಆಗಮಿಸಿದ ಕಂಗನಾ ಪಕ್ಕಾ ಮರಾಠಿ ಮಹಿಳೆಯಂತೆ ಸೀರೆ ತೊಟ್ಟಿದ್ದರು. ಮೂಗಿಗೊಂದು ದೊಡ್ಡದಾದ ನತ್ತು, ಕೇಶಕ್ಕೆ ಪರಿಮಳ ಭರಿತ ಮಲ್ಲಿಗೆಯ ಸುತ್ತು, ಹಣೆಗೆ ಅಗಲವಾದ ಕುಂಕುಮ, ಪೈಥಾನಿ ಸೀರೆ ತೊಟ್ಟು ಬಂದಿದ್ದ ಕಂಗನಾ ಎಲ್ಲರ ಗಮನ ಸೆಳೆದರು. ದೇವಾಸ್ಥಾನದಿಂದ ಹೊರ ಬರುತ್ತಿದ್ದಂತೆ ಗಣಪತಿ ಬಪ್ಪಾ ಮೋರಾಯ, ಜೈ ಮಹಾರಾಷ್ಟ್ರ ಎಂದು ಘೋಷಣೆ ಕೂಗಿದರು.
ಸೋಮವಾರ ಮನಾಲಿಯಿಂದ ಸೋದರಿ ಜೊತೆ ಮುಂಬೈಗೆ ಬಂದಿಳಿದಿದ್ದ ಕಂಗನಾ ಇಂದು ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು. ದೇವಸ್ಥಾನಕ್ಕೆ ಕಂಗನಾ ಭೇಟಿ ನೀಡಿರುವ ವೀಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.
View this post on Instagram
ಸೆಪ್ಟೆಂಬರ್ 9ರಂದು ವೈ ಪ್ಲಸ್ ಭದ್ರತೆಯೊಂದಿಗೆ ಕಂಗನಾ ಮುಂಬೈಗೆ ಬಂದಿದ್ದರು. ಈ ವೇಳೆ ಬಿಎಂಸಿ ಕಂಗನಾ ಕಚೇರಿಯನ್ನ ಧ್ವಂಸಗೊಳಿಸಿತ್ತು. ನಂತರ ಐದು ದಿನಗಳ ಬಳಿಕ ಸೆಪ್ಟೆಂಬರ್ 14ರಂದು ಕಂಗನಾ ಮನಾಲಿಗೆ ಹಿಂದಿರುಗಿದ್ದರು. ತಮಿಳುನಾಡಿನ ಮಾಜಿ ಸಿಎಂ ಜಯಲಲಿತಾ ಜೀವನಾಧರಿಸಿ ಸಿನಿಮಾ ತಲೈವಿಯಲ್ಲಿ ಕಂಗನಾ ನಟಿಸಿದ್ದು, ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ತಲೈವಿ ಹಿಂದಿ, ತಮಿಳು ಮತ್ತು ತೆಲಗು ಭಾಷೆಯಲ್ಲಿ ರಿಲೀಸ್ ಆಗಲಿದೆ.
View this post on Instagram
