ಬಾಲಿವುಡ್ ನಟಿ ಕಂಗನಾ ರಣಾವತ್ (Kangana Ranaut) ಅವರು ಸಿನಿಮಾ ಶೂಟಿಂಗ್‌ಗೆ ಬ್ರೇಕ್ ಹಾಕಿ ಕೇದರನಾಥ್‌ಗೆ (Kedarnath) ಭೇಟಿ ನೀಡಿದ್ದಾರೆ. ಈ ಕುರಿತ ಫೋಟೋ, ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.
ಕಂಗನಾ, Emergency Film ಸಿನಿಮಾ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿ ಬ್ಯುಸಿಯಾಗಿದ್ದಾರೆ. ಆಗಾಗ ವಿವಾದಗಳ ಮೂಲಕ ಸುದ್ದಿಯಾಗುವ ನಟಿ ಇದೀಗ ಆಧ್ಯಾತ್ಮಿಕ ಪ್ರವಾಸದಲ್ಲಿದ್ದಾರೆ. ಸದ್ಯ ಕೈಲಾಶನಂದ ಜಿ ಮಹಾರಾಜ್, ರಾಜಮೌಳಿ(Rajamouli) ತಂದೆ ವಿಜೇಂದ್ರ ಪ್ರಸಾದ್ (Vijendra Prasad) ಅವರ ಜೊತೆ ಕೇದರನಾಥ್‌ಗೆ ಭೇಟಿ ನೀಡಿದ್ದಾರೆ. ಈ ಕುರಿತು ನಟಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ:60ನೇ ವಯಸ್ಸಿಗೆ 2ನೇ ಮದುವೆಯಾದ ನಟ ಆಶಿಶ್ ವಿದ್ಯಾರ್ಥಿ
View this post on Instagram
ಕೇದರನಾಥ್‌ರ ಪವಿತ್ರ ಕ್ಷೇತ್ರಗಳಿಗೆ ನಟಿ ಕಂಗನಾ ಅವರು ‘ಆರ್‌ಆರ್‌ಆರ್’ ಬರಹಗಾರ ವಿಜೇಂದ್ರ ಪ್ರಸಾದ್ ಜೊತೆಗೆ ದೇವರ ಸನ್ನಿಧಿಗೆ ಭೇಟಿ ನೀಡಿ, ವಿಶೇಷ ಪೂಜೆ ಮಾಡಿಸಿದ್ದಾರೆ. ಈ ವೇಳೆ ಶಾಸಕ ಉಮೇಶ್ ಕುಮಾರ್ ಕೂಡ ಉಪಸ್ಥತರಿದ್ದರು.