Connect with us

Crime

5ರ ಬಾಲಕಿಯನ್ನು ಕಾಂಪ್ಲೆಕ್ಸ್‌ಗೆ ಕರೆದೊಯ್ದು ಅತ್ಯಾಚಾರಕ್ಕೆ ಯತ್ನ

Published

on

– ಕಿಡಿಗೇಡಿಗೆ ಧರ್ಮದೇಟು

ಕಲಬುರಗಿ: ಐದು ವರ್ಷದ ಬಾಲಕಿಯನ್ನು ಪಕ್ಕದ ಕಾಂಪ್ಲೆಕ್ಸ್‍ಗೆ ಕರೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ ಯುವಕನೊಬ್ಬನಿಗೆ ಜನರು ಧರ್ಮದೇಟು ನೀಡಿದ ಘಟನೆ ಕಲಬುರಗಿಯ ಗೋವಾ ಹೋಟೆಲ್ ಬಳಿ ನಡೆದಿದೆ.

ಇಂದು ಬೆಳಗ್ಗೆ ಬಾಲಕಿಯನ್ನು ಕರೆದೊಯ್ದ ಯುವಕ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಯತ್ನಿಸಿದ್ದಾನೆ. ಈ ವೇಳೆ ಬಾಲಕಿ ಚೀರಾಡಿದ್ದಾಳೆ. ಇದರಿಂದ ಎಚ್ಚೆತ್ತುಕೊಂಡ ಸ್ಥಳೀಯರು ತಕ್ಷಣ ಕಟ್ಟಡದೊಳಗೆ ಓಡಿ ಹೋಗಿ ಬಾಲಕಿಯನ್ನು ರಕ್ಷಿಸಿದ್ದಲ್ಲದೆ ಕಿಡಿಗೇಡಿಯನ್ನು ವಿದ್ಯುತ್ ಕಂಬಕ್ಕೆ ಕಟ್ಟಿಹಾಕಿ ಮನಸೋ ಇಚ್ಛೆ ಥಳಿಸಿದ್ದಾರೆ.

ನಂತರ ಬ್ರಹ್ಮಪುರ ಪೊಲೀಸ್ ಠಾಣೆಗೆ ಕರೆ ಮಾಡಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಕಾಮುಕ ಕಲಬುರಗಿಯ ಶ್ರೀ ಶರಣಬಸವೇಶ್ವರ ದೇವಸ್ಥಾನಕ್ಕೆ ಬಂದ ಭಕ್ತರ ಮಗಳನ್ನು ಕಿಡ್ನಾಪ್ ಮಾಡಿ ಅತ್ಯಾಚಾರಕ್ಕೆ ಯತ್ನಿಸಿರುವುದಾಗಿ ಪೊಲೀಸ್ ತನಿಖೆ ವೇಳೆ ಬಾಯಿಬಿಟ್ಟಿದ್ದಾನೆ.

ಅಪ್ರಾಪ್ತ ಬಾಲಕಿಯನ್ನು ಹುಡುಕಿಕೊಂಡು ಬಂದ ಪೋಷಕರು ತಮ್ಮ ಮಗಳನ್ನು ಕರೆದುಕೊಂಡು ಹೋಗಿದ್ದು, ಪೊಲೀಸ್ ಠಾಣೆಯಲ್ಲಿ ಯಾವುದೇ ದೂರು ನೀಡಿಲ್ಲ.

Click to comment

Leave a Reply

Your email address will not be published. Required fields are marked *