ಟಾಲಿವುಡ್ ಸೂಪರ್ ಸ್ಟಾರ್ ವಿಜಯ್ ಸೇತುಪತಿ ಮತ್ತು ಟಾಲಿವುಡ್ ಕ್ವಿನ್ಸ್ ನಯನತಾರಾ ಮತ್ತು ಸಮಂತಾ ರುತ್ ಪ್ರಭು ನಟಿಸಿರುವ ‘ಕಾತು ವಾಕುಲಾ ರೆಂಡು ಕಾದಲ್’ ಸಿನಿಮಾ ಸಿನಿರಸಿಕರನ್ನು ತನ್ನತ್ತ ಸೆಳೆಯುತ್ತಿದೆ. ಈ ಸಿನಿಮಾ ಪ್ರೋಮೋ ಸಹ ರಿಲೀಸ್ ಆಗಿದ್ದು, ಅಭಿಮಾನಿಗಳನ್ನು ನಗುವಿನ ಅಲೆಯಲ್ಲಿ ಚಿತ್ರತಂಡ ತೇಲಿಸಿದೆ.
Advertisement
‘ಕಾತು ವಾಕುಲಾ ರೆಂಡು ಕಾದಲ್’ ಸಿನಿಮಾವನ್ನು ವಿಘ್ನೇಶ್ ಶಿವನ್ ನಿರ್ದೇಶನ ಮಾಡಿದ್ದು, ಈ ಕಾಮಿಡಿ ರೊಮ್ಯಾಂಟಿಕ್ ಸಿನಿಮಾ ಏಪ್ರಿಲ್ 28 ರಂದು ಅಭಿಮಾನಿಗಳ ಮುಂದೆ ಬರುತ್ತಿದೆ. ಇದಕ್ಕು ಮುನ್ನ ಚಿತ್ರರಸಿಕರನ್ನು ತಮ್ಮ ಸಿನಿಮಾದಂತ ಆಕರ್ಷಿಸಲು ಚಿತ್ರತಂಡ ಕೆಲವು ವೀಡಿಯೋ, ಪ್ರೋಮೋವನ್ನು ಬಿಡುಗಡೆ ಮಾಡುತ್ತಿದೆ. ಮೊದಲು ಈ ಸಿನಿಮಾ ಟ್ರೇಲರ್ ರಿಲೀಸ್ ಆಗಿದ್ದು, ಇದನ್ನು ನೋಡಿ ಅಭಿಮಾನಿಗಳು ಹೆಚ್ಚು ಕಾತುರತೆಯನ್ನು ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಸೂರ್ಯ- ಚಂದ್ರ ಇರೋವರೆಗೂ ಸಂವಿಧಾನ ಬದಲಾವಣೆ ಅಸಾಧ್ಯ: ಆನಂದ್ ಸಿಂಗ್
Advertisement
View this post on Instagram
Advertisement
ಈ ಕ್ಲಿಪ್ನಲ್ಲಿ ವಿಜಯ್ ಸೇತುಪತಿ, ನಯನತಾರಾ ಮತ್ತು ಸಮಂತಾ ರುತ್ ಪ್ರಭು ಕಾಣಿಸಿಕೊಂಡಿದ್ದು, ಇದು ತ್ರಿಕೋನ ಪ್ರೇಮಕಥೆ ಹೊಂದಿರುವ ಸಿನಿಮಾವಾ ಎನ್ನುವ ಅನುಮಾನ ಕೂಡ ಮೂಡಿದೆ. ನಾಯಕ ರಾಂಬೋ(ವಿಜಯ್ ಸೇತುಪತಿ) ಕಣ್ಮಣಿ(ನಯನತಾರಾ) ಮತ್ತು ಖತೀಜಾ(ಸಮಂತಾ) ಇಬ್ಬರನ್ನೂ ಪ್ರೀತಿಸುತ್ತೇನೆ. ಈ ತ್ರೀಕೊನ ಪ್ರೇಮವನ್ನು ಹೇಗೆ ನಾಯಕ ಉಳಿಸಿಕೊಳ್ಳುತ್ತಾನೆ ಎಂಬ ಸಣ್ಣ ಝಲಕ್ ಪ್ರೊಮೋದಲ್ಲಿದೆ. ಈ ಸಿನಿಮಾದಲ್ಲಿ ಮಾಜಿ ಕ್ರಿಕೆಟಿಗ ಶ್ರೀಶಾಂತ್ ಕೂಡ ನಟಿಸಿದ್ದಾರೆ.
Advertisement
ಇದೇ ಮೊದಲು ಸಮಂತಾ ಮತ್ತು ನಯನತಾರಾ ಒಂದೇ ಮೊದಲಬಾರಿಗೆ ತೆರೆ ಹಂಚಿಕೊಳ್ಳುತ್ತಿದ್ದು, ಮೂರು ಸ್ಟಾರ್ ಕಾಂಬಿನೇಷನ್ನಲ್ಲಿ ಸಿನಿಮಾ ಹೇಗೆ ಮೂಡಿಬಂದಿದೆ ಎಂಬುದನ್ನು ತೆರೆಮೇಲೆ ನೋಡಲು ಚಿತ್ರತಂಡ ಸಹ ಕಾಯುತ್ತಿದೆ. ಈ ಸಿನಿಮಾ ತಮಿಳು ಮತ್ತು ತೆಲುಗು ದ್ವಿಭಾಷೆಯಲ್ಲಿ ಮೂಡಿಬಂದಿದ್ದು, ಅನಿರುದ್ಧ್ ರವಿಚಂದರ್ ಈ ಸಿನಿಮಾಗೆ ಸಂಗೀತ ನೀಡಿದ್ದಾರೆ. ವಿಜಯ್ ಕಾರ್ತಿಕ್ ಕಣ್ಣನ್ ಚಿತ್ರದ ಛಾಯಾಗ್ರಹಣವನ್ನು ವಹಿಸಿಕೊಂಡಿದ್ದಾರೆ. ಇದನ್ನೂ ಓದಿ: ಪೋಸ್ಟ್‌ಮ್ಯಾನ್‍ನಿಂದಲೇ ಬಡ ಜನರ ಲಕ್ಷ, ಲಕ್ಷ ಹಣ ಗುಳುಂ