ಕೋಲಾರ: ಹೆಲ್ಮೆಟ್ ಯಾಕೆ ಧರಿಸಿಲ್ಲ ಎಂದು ಪ್ರಶ್ನಿಸಿದ್ದಕ್ಕೆ ನ್ಯಾಯಾಧೀಶರ (Judge) ಕಾರು (Car) ತಡೆದು ಗಲಾಟೆ ಮಾಡಿದ ಮೂವರನ್ನು ಮಾಲೂರು ಪೊಲೀಸರು ಬಂಧಿಸಿದ್ದಾರೆ.
ಮಾಲೂರು (Maluru) ನಗರದ ಕೆ.ಎಂ.ವಿನಯ್ (24), ಅವರ ತಾಯಿ ಕವಿತಾ (47) ಹಾಗೂ ತಾತ ವೆಂಕಟೇಶ್ (69) ಬಂಧಿತರು. ಜು.19 ರಂದು ವಿನಯ್ ಅಜಾಗರೂಕತೆಯಿಂದ ಬೈಕ್ ಚಲಾಯಿಸಿಕೊಂಡು ಮಾಲೂರು ಜೆಎಂಎಫ್‌ಸಿ ಕೋರ್ಟ್‌ನ ನ್ಯಾಯಾಧೀಶೆ ಗಾಯತ್ರಿ ಅವರ ಕಾರಿಗೆ ಅಡ್ಡ ಬಂದಿದ್ದ. ಆತ ಹೆಲ್ಮೆಟ್ ಸಹ ಧರಿಸಿರಲಿಲ್ಲ. ಇದನ್ನು ನ್ಯಾಯಾಧೀಶರು ಪ್ರಶ್ನಿಸಿದ್ದರು. ಇದಕ್ಕೆ ವಿನಯ್ ಕಾರು ತಡೆದು ಗಲಾಟೆ ಮಾಡಿದ್ದ. ಇದನ್ನೂ ಓದಿ: ಪ್ರಜ್ವಲ್‌ಗೆ ಪೆರೋಲ್ ನೀಡಲು ಆಗಲ್ಲ – ಕಾರಾಗೃಹ ಇಲಾಖೆ
ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ನ್ಯಾಯಾಧೀಶರು ದೂರು ದಾಖಲಿಸಿದ್ದರು. ದೂರಿನ ಅನ್ವಯ ನ್ಯಾಯಾಧೀಶರ ಕೆಲಸಕ್ಕೆ ಅಡ್ಡಿ, ಸಂಚಾರ ನಿಯಮ ಉಲ್ಲಂಘನೆ, ವಾಹನಕ್ಕೆ ಧಕ್ಕೆ, ಅಸಭ್ಯ ವರ್ತನೆ ಹಾಗೂ ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ.
ಪೊಲೀಸರು ಮೂವರನ್ನೂ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ದ್ವಿಚಕ್ರ ವಾಹನ ಚಾಲಕನಿಗೆ 6000 ರೂ. ದಂಡ ವಿಧಿಸಿದ್ದಾರೆ. ಇದನ್ನೂ ಓದಿ: ಸಿಜೆಪಿ ಪ್ರತಿಭಟನೆಯಲ್ಲಿ ಹಿಂಸಾಚಾರ: ಆರೋಪಿಗಳ ಪಾಸ್‌ಪೋರ್ಟ್ ರದ್ದು – ದೆಹಲಿ ಪೊಲೀಸರು ಹೇಳಿದ್ದೇನು?

