CrimeLatestMain PostNational

ಮಾತಾಡ್ಲಿಲ್ಲ ಅಂತ ಮಲಗಿದ್ದವಳ ಮೇಲೆ ಕಿಟಕಿಯಿಂದ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ!

ರಾಂಚಿ: ಮಾತನಾಡಲಿಲ್ಲ ಎಂಬ ಕಾರಣಕ್ಕೆ ವ್ಯಕ್ತಿಯೋರ್ವ ಮಲಗಿದ್ದ ಯುವತಿಗೆ ಬೆಂಕಿ ಹಚ್ಚಿ ಹತ್ಯೆಗೈದಿರುವ ಘಟನೆ ಜಾರ್ಖಂಡ್‍ನ ದುಮ್ಕಾ ಜಿಲ್ಲೆಯಲ್ಲಿ ನಡೆದಿದೆ.

12ನೇ ತರಗತಿಯಲ್ಲಿ ಓದುತ್ತಿದ್ದ 19 ವರ್ಷದ ಯುವತಿಯನ್ನು ಮೊದಲು ದುಮ್ಕಾದ ಫುಲೋ ಜಾನೋ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಶೇಕಡಾ 90ರಷ್ಟು ದೇಹ ಸುಟ್ಟು ಆಕೆಯ ಸ್ಥಿತಿ ಗಂಭೀರವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ರಾಂಚಿಯ ರಾಜೇಂದ್ರ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಕರೆದೊಯ್ಯಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಯುವತಿ ಭಾನುವಾರ ಬೆಳಗಿನ ಜಾವ 2.30ರ ಸುಮಾರಿಗೆ ಕೊನೆಯುಸಿರೆಳೆದಿದ್ದಾಳೆ. ಇದೀಗ ಮರಣೋತ್ತರ ಪರೀಕ್ಷೆಯ ನಂತರ ಆಕೆಯ ಶವವನ್ನು ದುಮ್ಕಾಗೆ ಕಳುಹಿಸಲಾಗುತ್ತದೆ. ಇದನ್ನೂ ಓದಿ: ಮಠದಲ್ಲಿಲ್ಲ ಮುರುಘಾ ಶ್ರೀಗಳು- ಮೌನಕ್ಕೆ ಜಾರಿದ ಭಕ್ತರು

ಮಂಗಳವಾರ ಬೆಳಗ್ಗೆ ಈ ಘಟನೆ ನಡೆದಿದ್ದು, ಆರೋಪಿಯನ್ನು ಶಾರುಖ್ ಎಂದು ಗುರುತಿಸಲಾಗಿದ್ದು, ಇದೀಗ ಆತನನ್ನು ಬಂಧಿಸಲಾಗಿದೆ. ಯುವತಿ ಮಲಗಿದ್ದ ವೇಳೆ ಕಿಟಕಿಯಿಂದ ಪೆಟ್ರೋಲ್ ಸುರಿದು ಆರೋಪಿ ಬೆಂಕಿ ಹಚ್ಚಿದ್ದಾನೆ ಎಂದು ದುಮ್ಕಾ ಪಟ್ಟಣ  ಪೊಲೀಸ್ ಠಾಣೆ ಪ್ರಭಾರಿ ನಿತೀಶ್ ಕುಮಾರ್ ತಿಳಿಸಿದ್ದಾರೆ. ಇದನ್ನೂ ಓದಿ: ಆದಾಯಕ್ಕಾಗಿ ಕಮ್ಯುನಿಸ್ಟ್ ಸರ್ಕಾರ ಹಿಂದೂ ದೇಗುಲವನ್ನು ವಶಪಡಿಸಿಕೊಳ್ತಿದೆ: ಸುಪ್ರಿಂಕೋರ್ಟ್ ಮಾಜಿ ಜಡ್ಜ್ ವೀಡಿಯೋ ವೈರಲ್

10 ದಿನಗಳ ಹಿಂದೆ ಆರೋಪಿ ತನಗೆ ಕರೆ ಮಾಡಿ ತನ್ನೊಂದಿಗೆ ಸ್ನೇಹ ಬೆಳೆಸುವಂತೆ ಪೀಡಿಸಿದ್ದನು. ಆದರೆ ಸೋಮವಾರ ರಾತ್ರಿ 8 ಗಂಟೆ ಸುಮಾರಿಗೆ ನನಗೆ ಮತ್ತೆ ಕರೆ ಮಾಡಿ, ನೀನು ಮಾತನಾಡದಿದ್ದರೆ ನಿನ್ನನ್ನು ಕೊಲ್ಲುತ್ತೇನೆ ಎಂದು ಬೆದರಿಕೆಯೊಡ್ಡಿದ್ದನು. ಈ ಬಗ್ಗೆ ನನ್ನ ತಂದೆಗೆ ನಾನು ತಿಳಿಸಿದ್ದೆ. ಹೀಗಾಗಿ ನನ್ನ ತಂದೆ ಮಂಗಳವಾರ ಆರೋಪಿಯ ಕುಟುಂಬಸ್ಥರೊಂದಿಗೆ ಮಾತನಾಡುವುದಾಗಿ ಹೇಳಿದ್ದರು. ನಂತರ ಊಟ ಮಾಡಿ ಕೋಣೆಯಲ್ಲಿ ಹೋಗಿ ಮಲಗಿದ್ದೆ. ಆದರೆ ಮಂಗಳವಾರ ಬೆಳಗ್ಗೆ ನನ್ನ ಬೆನ್ನಿನ ಮೇಲೆ ಏನೋ ಬೀಳುತ್ತಿರುವ ಅನುಭವವಾಯಿತು. ನಂತರ ಸುಟ್ಟ ವಾಸನೆ ಆರಂಭವಾಯಿತು. ಕಣ್ಣು ತೆರೆದು ನೋಡಿದಾಗ ಆರೋಪಿ ಓಡಿ ಹೋಗುತ್ತಿರುವುದನ್ನು ನೋಡಿದೆ. ಈ ವೇಳೆ ನೋವಿನಿಂದ ಕಿರುಚಾಡಲು ಆರಂಭಿಸಿ, ನನ್ನ ತಂದೆಯ ಕೋಣೆಗೆ ಹೋದೆ. ತಕ್ಷಣ ನನ್ನ ಪೋಷಕರು ಬೆಂಕಿ ನಂದಿಸಿ ನನ್ನನ್ನು ಆಸ್ಪತ್ರೆಗೆ ಕರೆದೊಯ್ದರು ಎಂದು ಗಂಭೀರ ಸ್ಥಿತಿಯಲ್ಲಿದ್ದ ಯುವತಿ ಸಾಯುವ ಮುನ್ನ ಪೊಲೀಸರಿಗೆ ಹೇಳಿಕೆ ನೀಡಿದ್ದಾಳೆ.

Live Tv

Leave a Reply

Your email address will not be published.

Back to top button