ಬೆಂಗಳೂರು: ಇಂದಿನಿಂದ ರಾಷ್ಟ್ರ ಮತ್ತು ರಾಜ್ಯ ಏಕಮೇವ ಸರ್ಕಾರದಲ್ಲಿ ಅಭಿವೃದ್ಧಿಯ ಸುವರ್ಣ ಯುಗ ಸ್ಥಾಪನೆಯ ಪರ್ವ ಆರಂಭವಾಗಿದೆ ಎಂದು ನಟ, ಬಿಜೆಪಿ ಮುಖಂಡ ಜಗ್ಗೇಶ್ ಉಪಚುನಾವಣೆ ಫಲಿತಾಂಶ ಕುರಿತು ಪ್ರತಿಕ್ರಿಯಿಸಿದ್ದಾರೆ.
ಸಿಎಂ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಶುಭಾಶಯ ತಿಳಿಸಿರುವ ಜಗ್ಗೇಶ್ ಫೋಟೋಗಳನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ನಮಗೆ ಶಕ್ತಿ ನೀಡಿದ ಮತದಾರ ಬಂಧುಗಳಿಗೆ ಧನ್ಯವಾದಗಳು. ರಾಜ್ಯ ಮತ್ತು ಕೇಂದ್ರದಲ್ಲಿ ಒಂದೇ ಸರ್ಕಾರ ಇರೋದರಿಂದ ಅಭಿವೃದ್ಧಿಗಳು ಕೆಲಸಗಳು ವೇಗ ಪಡೆದುಕೊಳ್ಳಲಿವೆ ಎಂದು ಜಗ್ಗೇಶ್ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.
Advertisement
ನಲ್ಮೆಯ ನಾಯಕರು ಯಡಿಯೋರಪ್ಪಜೀ ರವರ ಗೆಲುವಿನಲ್ಲಿ ಭಾಗಿಯಾಗಿ ಸಂತೋಷ ಹಂಚಿಕೊಂಡ ಕ್ಷಣ..
ಧನ್ಯವಾದಗಳು ನಮಗೆ ಶಕ್ತಿ ನೀಡಿದ ಮತದಾರ ಬಂಧುಗಳಿಗೆ..
ರಾಷ್ಟ್ರ ರಾಜ್ಯದ ಏಕಮೇವ ಸರ್ಕಾರದಲ್ಲಿ ಅಭಿವೃದ್ಧಿಯ ಸುವರ್ಣಯುಗ ಸ್ಥಾಪನೆಪರ್ವ ಇಂದಿನಿಂದ.. ಶುಭಮಸ್ತು..@BSYBJP @BYVijayendra @BJP4Karnataka pic.twitter.com/y6Wk0iEjsm
— ನವರಸನಾಯಕ ಜಗ್ಗೇಶ್ (@Jaggesh2) December 9, 2019
Advertisement
2018ರ ವಿಧಾನಸಭಾ ಚುನಾವಣೆಯಲ್ಲಿ ಯಶವಂತಪುರ ಕ್ಷೇತ್ರದಿಂದ ಎಸ್.ಟಿ.ಸೋಮಶೇಖರ್ ವಿರುದ್ಧ ಬಿಜೆಪಿ ಅಭ್ಯರ್ಥಿಯಾಗಿ ಜಗ್ಗೇಶ್ ಸ್ಪರ್ಧಿಸಿದ್ದರು. ಇಂದು ಅದೇ ಎಸ್.ಟಿ.ಸೋಮಶೇಖರ್ ಅವರಿಗೆ ಕ್ಷೇತ್ರವನ್ನು ಜಗ್ಗೇಶ್ ಬಿಟ್ಟುಕೊಟ್ಟು, ಅವರ ಪರವಾಗಿ ಪ್ರಚಾರ ನಡೆಸಿ ಮತ ಯಾಚಿಸಿದ್ದರು.