ಜಮ್ಮುಕಾಶ್ಮೀರ: ದೇಶಕ್ಕಾಗಿ ಸೇವೆ ಸಲ್ಲಿಸುತ್ತಿದ್ದ ಪತಿ ಕರ್ತವ್ಯದ ವೇಳೆಯೇ ಹುತಾತ್ಮದರಾದರು ಎದೆಗುಂದದ ಪತ್ನಿ ಕಠಿಣ ತರಬೇತಿ ಪಡೆದು ಸೇನೆ ಸೇರಿ ಆದರ್ಶ ಮೆರೆದಿರುವ ಘಟನೆ ಜಮ್ಮು ಕಾಶ್ಮೀರದಲ್ಲಿ ನಡೆದಿದೆ.
ಪತಿ ಹುತಾತ್ಮರಾದ ಬಳಿಕ ಸೇನೆಗೆ ಆಯ್ಕೆ ಆಗಿರುವ ದಿಟ್ಟ ಮಹಿಳೆಯ ಹೆಸರು ನೀರು ಸಂಬ್ಯಾಲ್. ಅವರ ಪತಿ ರವೀಂದರ್ ಸಿಂಗ್ ಸಂಬ್ಯಾಲ್ ಸೇನೆಯಲ್ಲಿ ಲೆಫ್ಟಿನೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. 2013 ಇಬ್ಬರ ಮದುವೆಯಾಗಿತ್ತು. ಆದರೆ ಮದುವೆಯಾದ 2 ವರ್ಷಗಳಲ್ಲಿ ಪತಿ ಕರ್ತವ್ಯದಲ್ಲಿದ್ದ ವೇಳೆಯೇ ಹುತಾತ್ಮರಾಗಿದ್ದರು. ಆ ವೇಳೆಗೆ ಅವರಿಗೆ ಮುದ್ದಾದ 1 ವರ್ಷದ ಮಗುವಿತ್ತು. ಆದರೆ ಅಂತಕ ಕಠಿಣ ಸಮಯದಲ್ಲಿ ದಿಟ್ಟ ನಿರ್ಧಾರ ಮಾಡಿ ಸೇನೆಗೆ ಸೇರಿ ಪತಿಯಂತೆ ದೇಶ ಸೇವೆ ಮಾಡುವ ಕನಸು ಕಂಡಿದ್ದರು. ಪ್ರಸ್ತುತ ನೀರು ಅವರ ತರಬೇತಿ ಅವಧಿ ಪೂರ್ಣಗೊಂಡಿದ್ದು, ಸೇನೆಯಲ್ಲಿ ಲೆಫ್ಟಿನೆಂಟ್ ಹುದ್ದೆ ಪಡೆದಿದ್ದಾರೆ.
Advertisement
Advertisement
ಈ ವೇಳೆ ತಮ್ಮ ಜೀವನದ ಕುರಿತು ಮಾತನಾಡಿರುವ ಅವರು, ಲೆಫ್ಟಿನೆಂಟ್ ರೈಫಲ್‍ಮೆನ್ ರವೀಂದರ್ ಸಿಂಗ್‍ರನ್ನು ಮದುವೆಯಾದ ಬಳಿಕ 2 ವರ್ಷಕ್ಕೆ ಅವರು ನನ್ನನ್ನು ಬಿಟ್ಟು ಹೋದರು. ಆ ವೇಳೆ ದಿಕ್ಕು ತೋಚದ ಸ್ಥಿತಿಯಲ್ಲಿದೆ. ಆದರೆ ನನ್ನ ಮಗಳು ನನಗೆ ಸ್ಫೂರ್ತಿಯಾದಳು. ನನ್ನ ಮಗಳು ತಂದೆಯ ಬಗ್ಗೆ ಹೆಮ್ಮೆ ಪಡುವಂತೆ ಮಾಡಲು ಅಂದು ನಿರ್ಧರಿಸಿದ್ದೇ. ಸದ್ಯ ನಾನು 49 ವಾರಗಳ ಕಾಲ ಸೇನೆಯ ತರಬೇತಿ ಅವಧಿಯನ್ನು ಪೂರ್ಣಗೊಳಿಸಿದ್ದೇನೆ. ಸೆಪ್ಟೆಂಬರ್ 8 ರಂದು ಕರ್ತವ್ಯಕ್ಕೆ ಹಾಜರಾಗುವ ಆದೇಶ ಪತ್ರ ಸಿಕ್ಕಿದೆ. ಸೇನೆಯಲ್ಲಿ ಇರಲು ಮಾನಸಿಕವಾಗಿ ಹಾಗೂ ದೈಹಿಕವಾಗಿ ಸದೃಡರಾಗಿರಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
Advertisement
ಲೆ. ನೀರು ಸಂಬ್ಯಾಲ್ ಅವರಿಗೆ ಅವರ ನಿರ್ಧಾರದ ಹಾಗೂ ಸಾಧನೆಯ ಹಿಂದೆ ಕುಟುಂಬಸ್ಥರ ಬೆಂಬಲವೂ ಇದ್ದು, ಅವರ ಕನಸಿಗೆ ಬೆಂಬಲ ನೀಡಿದ್ದಾರೆ. ಈ ಕುರಿತು ಪತ್ರಿಕ್ರಿಯೆ ನೀಡಿರುವ ಲೆ. ನೀರು ಅವರ ತಂದೆ ದರ್ಶನ್ ಸಿಂಗ್, ನನ್ನ ಮಗಳ ನಿರ್ಧಾರಕ್ಕೆ ಬೇಕಾದ ಎಲ್ಲಾ ಬೆಂಬಲವನ್ನ ನೀಡಿದ್ದು, ಆಕೆ ಸೇನೆಗೆ ಸೇರುವ ತೀರ್ಮಾನ ಹಾಗೂ ಸಾಧನೆಯಿಂದ ಸಂತಸದೊಂದಿಗೆ ಹೆಮ್ಮೆ ಅನಿಸುತ್ತಿದೆ. ಮಗಳ ಪತಿಯ ಕುಟುಂಬಸ್ಥರು ಆಕೆಯ ನಿರ್ಧಾರವನ್ನು ಬೆಂಬಲಿಸಿದ್ದಾರೆ. ಅವರು ಈ ಸಾಧನೆ ಹಿಂದಿದ್ದಾರೆ ಎಂದು ತಿಳಿಸಿದ್ದಾರೆ.
Advertisement
ನನ್ನ ಪುತ್ರಿಯೊಂದಿಗೆ 26 ಮಂದಿ ಮಹಿಳೆಯರು ಶಸ್ತ್ರ ಸೇವಾ ದಳ (ಎಸ್‍ಎಸ್‍ಬಿ) ಪರೀಕ್ಷೆಯಲ್ಲಿ ಆಯ್ಕೆ ಆಗಿದ್ದಾರೆ. ಅವರ ಶ್ರಮ ಹಾಗೂ ದಿಟ್ಟ ಹೋರಾಟ ನಮಗೆ ಸಂತಸ ತಂದಿದೆ. ಒಬ್ಬ ತಂದೆಯಾಗಿ ನನಗೆ ಇದಕ್ಕಿಂತ ಬೇರೆ ಏನು ಬೇಕಿದೆ ಎಂದು ತಿಳಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv