Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: AI ಕಾಲದಲ್ಲಿ ನಾಳೆ ಏನಾಗುತ್ತೆ ಅಂತ ಹೇಳೋದೇ ಕಷ್ಟ, ಜೋತಿಷ್ಯಿಗಳಂತೆ ಭವಿಷ್ಯವನ್ನು ಊಹೆ ಮಾಡ್ಬೇಕು: ಹೆಚ್.ಆರ್ ರಂಗನಾಥ್
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | AI ಕಾಲದಲ್ಲಿ ನಾಳೆ ಏನಾಗುತ್ತೆ ಅಂತ ಹೇಳೋದೇ ಕಷ್ಟ, ಜೋತಿಷ್ಯಿಗಳಂತೆ ಭವಿಷ್ಯವನ್ನು ಊಹೆ ಮಾಡ್ಬೇಕು: ಹೆಚ್.ಆರ್ ರಂಗನಾಥ್

Bengaluru City

AI ಕಾಲದಲ್ಲಿ ನಾಳೆ ಏನಾಗುತ್ತೆ ಅಂತ ಹೇಳೋದೇ ಕಷ್ಟ, ಜೋತಿಷ್ಯಿಗಳಂತೆ ಭವಿಷ್ಯವನ್ನು ಊಹೆ ಮಾಡ್ಬೇಕು: ಹೆಚ್.ಆರ್ ರಂಗನಾಥ್

Public TV
Last updated: April 25, 2026 12:20 pm
Public TV
Share
3 Min Read
HR Ranganath
SHARE

ಬೆಂಗಳೂರು: AI ಹಾವಳಿಯಲ್ಲಿ ನಾಳೆ ಏನಾಗಲಿದೆ ಎಂದು ಹೇಳುವುದೇ ಕಷ್ಟವಾಗಿದೆ. ಹೀಗಾಗಿ ಜೋತಿಷ್ಯಿಗಳ ರೀತಿ ಭವಿಷ್ಯವನ್ನು ಊಹೆ ಮಾಡಬೇಕಿದೆ ಎಂದು ಎಂದು ಪಬ್ಲಿಕ್ ಟಿವಿ (Public Tv) ಮುಖ್ಯಸ್ಥ ಹೆಚ್.ಆರ್ ರಂಗನಾಥ್ (HR Ranganath) ಅವರು ಹೇಳಿದರು.

ಬೆಂಗಳೂರಿನ ಅರಮನೆ ಮೈದಾನದ (Palace Ground) ಗಾಯತ್ರಿ ವಿಹಾರದಲ್ಲಿ ನಡೆಯುತ್ತಿರುವ 9ನೇ ಆವೃತ್ತಿಯ `ಪಬ್ಲಿಕ್ ಟಿವಿ’ಯ ವಿದ್ಯಾಪೀಠ-2026 ಎಜುಕೇಶನ್ ಎಕ್ಸ್‌ಪೋದಲ್ಲಿ (Vidhya Peeta Education Expo) ಮಾತನಾಡಿದ ಅವರು, ಮೊದಲು ನಾವು ಮಕ್ಕಳನ್ನು ಮುಂದಿನ 10-15 ವರ್ಷಗಳಲ್ಲಿ ಏನಾಗುತ್ತೋ ಅದನ್ನು ಯೋಚಿಸಿ, ಒಳ್ಳೆಯ ಕೋರ್ಸ್ ಹಾಗೂ ಒಳ್ಳೆಯ ಕಾಲೇಜು ಆಯ್ಕೆ ಮಾಡಿಕೊಳ್ಳಿ, ನಿಮ್ಮ ಭವಿಷ್ಯ ರೂಪಿಸಿಕೊಳ್ಳಿ ಎಂದು ಹೇಳುತ್ತಿದ್ದೆವು. ಆದರೆ ಇದೀಗ ಎಐನಿಂದಾಗಿ ಶಿಕ್ಷಣ ಸಂಸ್ಥೆಗಳ ಹಾಗೂ ವಿದ್ಯಾರ್ಥಿಗಳ ಜವಾಬ್ದಾರಿ ದುಪ್ಪಟ್ಟಾಗಿದೆ ಎಂದು ಅಭಿಪ್ರಾಯಪಟ್ಟರು. ಇದನ್ನೂ ಓದಿ: ಪಬ್ಲಿಕ್‌ ಟಿವಿ ವಿದ್ಯಾಪೀಠ ಎಕ್ಸ್‌ಪೋಗೆ ಚಾಲನೆ

ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಹೆಚ್ಚಿನ ಸಂಸ್ಥೆಗಳೊಂದಿಗೆ ಹೆಚ್ಚಿನ ಉತ್ಸಾಹದೊಂದಿಗೆ ವಿದ್ಯಾಪೀಠ ನಡೆಯುತ್ತಿದೆ. ಆದರೆ ವರ್ಷದಿಂದ ವರ್ಷಕ್ಕೆ ಇಷ್ಟು ಬೇಗ ಸವಾಲುಗಳು ಬದಲಾಗುತ್ತವೆಂದು ನಾನು ಅಂದುಕೊಂಡಿರಲಿಲ್ಲ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ವಿದ್ಯಾರ್ಥಿಗಳು ಎದುರಿಸುತ್ತಿರುವ ಸವಾಲುಗಳು ಸಂಬಂಧವೇ ಇಲ್ಲದಂತೆ ಹೊಸ ಸವಾಲುಗಳು ಬಂದಿವೆ ಎಂದರು.

ತಂತ್ರಜ್ಞಾನದ ಪರಿಣಾಮ ನಮ್ಮನ್ನ ಎಲ್ಲಿಗೆ ಕೊಂಡೊಯ್ಯುತ್ತದೆ ಎನ್ನುವುದು ಯಾರಿಗೂ ಅರಿವಿಲ್ಲ. ಈ ವರ್ಷ ಇಲ್ಲಿಗೆ ಬಂದಿರುವ ಮಕ್ಕಳಿಗೆಲ್ಲ ರಿಸರ್ಚ್ ಮಾಡುವ ಅರಿವಿದೆ. ಎಲ್ಲವನ್ನೂ ಯೋಚನೆ ಮಾಡಿಯೇ ಆಯ್ಕೆ ಮಾಡಬೇಡಿ ಅಥವಾ ಯಾರೋ ಹೇಳಿದರೂ ಅಂತ ಯಾವುದೋ ಕಾಲೇಜಿಗೆ ಹೋಗಬೇಡಿ, ನಿಮಗೆ ಸರಿಯಿದಾ ಅಂತ ನೋಡಿ ಆಯ್ಕೆ ಮಾಡಿಕೊಳ್ಳಿ ಎಂದು ಸಲಹೆ ನೀಡಿದರು.

ಇಲ್ಲಿಗೆ ಬಂದಿರುವ ಸಂಸ್ಥೆಗಳಿಗೆ ಹೆಚ್ಚಿನ ಅನುಭವ, ತಾಳ್ಮೆಯಿಂದ, ಉತ್ಸಾಹದಿಂದ ಕಲಿಸುವ ಶಕ್ತಿಯಿದೆ. ಹೀಗಾಗಿ ಅವರೆಲ್ಲ ನಿಮಗೆ ದಾರಿತೋರಿಸುತ್ತಾರೆ ಎಂಬ ನಂಬಿಕೆಯಿದೆ. ಮುಂದೊಂದು ದಿನ ಸಿಕ್ಕಾಗ ನಿಮ್ಮ ವಿದ್ಯಾಪೀಠಕ್ಕೆ ಬಂದು ನಾನು ಇದನ್ನು ಓದಿದೆ ಅಂತ ಹೇಳಿ ಖುಷಿಯಾಗುತ್ತೆ. ಒಳ್ಳೆಯ ಕಾಲೇಜನ್ನು ಆಯ್ಕೆ ಮಾಡಿಕೊಳ್ಳಿ. ನಿಮ್ಮ ಭವಿಷ್ಯವನ್ನು ಚೆನ್ನಾಗಿ ರೂಪಿಸಿಕೊಳ್ಳಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಗಾರ್ಡನ್ ಸಿಟಿ ಯೂನಿವರ್ಸಿಟಿ ಚಾನ್ಸಲರ್ ಡಾ. ವಿ ಜಿ ಜೋಸೆಫ್, ಸಿಎಂಆರ್ ಯೂನಿವರ್ಸಿಟಿಯ ಚೇರ್ಮನ್ ಡಾ.ಕೆ ಸಿ ರಾಮಮೂತಿ, ರೇವಾ ಯೂನಿವರ್ಸಿಯ ಡೈರೆಕ್ಟರ್ ಡಾ. ಧನಂಜಯ್ ಮತ್ತು ಕೇಂಬ್ರಿಡ್ಜ್ ಶೈಕ್ಷಣಿಕ ಸಂಸ್ಥೆಯ ಚೇರ್ಮನ್ ಡಾ. ಡಿಕೆ ಮೋಹನ್ ಉಪಸ್ಥಿತರಿದ್ದರು.ಇದನ್ನೂ ಓದಿ: ವಿದ್ಯಾರ್ಥಿಗಳಿಗೆ ಪಬ್ಲಿಕ್ ವಿದ್ಯಾಪೀಠ ದಾರಿದೀಪ – ಇಂದು, ನಾಳೆ ಬನ್ನಿ… ಆಕರ್ಷಕ ಬಹುಮಾನ ಗೆಲ್ಲಿ

ಇಂದು ಮತ್ತು ನಾಳೆ ಬೆಳಗ್ಗೆ 9 ರಿಂದ ಸಂಜೆ 6 ಗಂಟೆಯವರೆಗೆ ಶಿಕ್ಷಣ ಮೇಳ ನಡೆಯಲಿದೆ. ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶವಿರುವ ಈ ವಿದ್ಯಾಪೀಠ ಕಾರ್ಯಕ್ರಮದಲ್ಲಿ ಪ್ರಖ್ಯಾತ 125ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳು ಭಾಗವಹಿಸಿವೆ. ಪಿಯುಸಿ ನಂತರ ಮುಂದೇನು ಎಂಬ ಗೊಂದಲದಲ್ಲಿರುವ ವಿದ್ಯಾರ್ಥಿಗಳಿಗೆ ಇದು ಸೂಕ್ತ ವೇದಿಕೆಯಾಗಿದೆ.

ಶಿಕ್ಷಣ ತಜ್ಞರು ಮಾತ್ರವಲ್ಲದೆ, ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಏಇಂ) ಅಧಿಕಾರಿಗಳು ಎಕ್ಸ್ಪೋದಲ್ಲಿ ಭಾಗವಹಿಸುತ್ತಾರೆ. ಅಇಖಿ ಮತ್ತು ಅಔಒಇಆ-ಏ, ಓಇಇಖಿ ಆಕಾಂಕ್ಷಿಗಳಿಗೆ ವಿಶೇಷ ಮಾರ್ಗದರ್ಶನ ಸಿಗಲಿದೆ. ವಿದ್ಯಾರ್ಥಿಗಳು ಮತ್ತು ಪೋಷಕರು ನೇರವಾಗಿ ಅಧಿಕಾರಿಗಳೊಂದಿಗೆ ಸಂವಾದ ನಡೆಸಿ ತಮ್ಮ ಅನುಮಾನಗಳನ್ನು ಬಗೆಹರಿಸಿಕೊಳ್ಳಬಹುದು. ಬಂದವರಿಗೆ ಕೇವಲ ಮಾಹಿತಿ ಮಾತ್ರವಲ್ಲ, ಅದೃಷ್ಟ ಖುಲಾಯಿಸುವ ಅವಕಾಶವೂ ಇದೆ. ಭಾಗವಹಿಸುವ ವಿದ್ಯಾರ್ಥಿಗಳಿಗೆ ಪ್ರತಿ ಗಂಟೆಗೊಮ್ಮೆ ಆಕರ್ಷಕ ಬಹುಮಾನಗಳನ್ನು ಗೆಲ್ಲಬಹುದು. ಅದೃಷ್ಟವಂತ ವಿಜೇತರಿಗೆ ಬೈಸಿಕಲ್, ಲ್ಯಾಪ್‌ಟಾಪ್ ಸೇರಿದಂತೆ ಮೌಲ್ಯಯುತ ಬಹುಮಾನಗಳನ್ನು ನೀಡಲಾಗುವುದು. ವಿದ್ಯಾರ್ಥಿಗಳೇ ನಿಮ್ಮ ಉಜ್ವಲ ಭವಿಷ್ಯಕ್ಕಾಗಿ ಆಯೋಜಿಸಲಾಗಿರುವ ಈ ಸುವರ್ಣ ಅವಕಾಶವನ್ನು ಮಿಸ್ ಮಾಡಿಕೊಳ್ಳಬೇಡಿ. ಕೂಡಲೇ ಅರಮನೆ ಮೈದಾನಕ್ಕೆ ಭೇಟಿ ನೀಡಿ ಸದುಪಯೋಗಪಡಿಸಿಕೊಳ್ಳಿ.ಇದನ್ನೂ ಓದಿ: ಪಬ್ಲಿಕ್ ಟಿವಿ ‘ವಿದ್ಯಾಪೀಠʼದಲ್ಲಿ ಪಿಯುಸಿ 90% ಗಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ವಿಶೇಷ ಉಡುಗೊರೆ

TAGGED:Education Expohr ranganathPublic TVVidhyapeetaಅರಮನೆ ಮೈದಾನಗಾಯತ್ರಿ ವಿಹಾರಪಬ್ಲಿಕ್ ಟಿವಿಬೆಂಗಳೂರುವಿದ್ಯಾಪೀಠ-2026ಶಿಕ್ಷಣ ಮೇಳಹೆಚ್.ಆರ್.ರಂಗನಾಥ್
Share This Article
Facebook Whatsapp Whatsapp Telegram

Cinema news

ranveer singh 2
ದೈವಕ್ಕೆ ಅಪಮಾನ – ಇನ್ಮುಂದೆ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲ್ಲ: ಕ್ಷಮೆಯಾಚಿಸಿದ ರಣವೀರ್ ಸಿಂಗ್
Cinema Court Latest South cinema Top Stories
Monalisa
ಕುಂಭಮೇಳದ ವೈರಲ್ ಹುಡುಗಿ ಮೊನಾಲಿಸಾ ಈಗ ಗರ್ಭಿಣಿ
Cinema Latest Main Post National
Ranya Rao
ಇಂದಿಗೆ ಕಾಫಿಫೋಸಾ ಅವಧಿ ಅಂತ್ಯ – ಜೈಲಿನಿಂದ ರನ್ಯಾರಾವ್‌ ಬಿಡುಗಡೆ
Cinema Crime Karnataka Latest Main Post
ranya rao 2 1
ಗೋಲ್ಡ್ ಸ್ಮಗ್ಲಿಂಗ್ ಕೇಸ್ – ಇಂದು ರನ್ಯಾ ರಾವ್ ಜೈಲಿನಿಂದ ರಿಲೀಸ್
Bengaluru City Cinema Districts Karnataka Latest Top Stories

You Might Also Like

CET Exam Staff who cut Janavara and threw it dustbin Chikkaballapura
Chikkaballapur

CET Exam| ಜನಿವಾರ ಕತ್ತರಿಸಿ ಕಸದ ಬುಟ್ಟಿಗೆ ಎಸೆದ ಸಿಬ್ಬಂದಿ

Public TV
By Public TV
40 seconds ago
Delhi Capitals Net Bowler Sahil Parakh injured
Cricket

ಪ್ರಾಕ್ಟೀಸ್ ವೇಳೆ ಚೆಂಡು ಬಡಿದು ಡೆಲ್ಲಿ ಕ್ಯಾಪಿಟಲ್ಸ್ ಆಟಗಾರನಿಗೆ ಗಂಭೀರ ಗಾಯ – ಆಸ್ಪತ್ರೆಗೆ ರವಾನೆ

Public TV
By Public TV
19 minutes ago
Vinay Kulkarni 1 1
Bengaluru City

ಯೋಗೇಶ್ ಗೌಡ ಕೊಲೆ ಕೇಸ್ – ಜೀವಾವಧಿ ಶಿಕ್ಷೆ ತೀರ್ಪಿಗೆ ತಡೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ ವಿನಯ್ ಕುಲಕರ್ಣಿ

Public TV
By Public TV
35 minutes ago
Mallikarjun Kharge DK Shivakumar DK Suresh
Bengaluru City

ದೆಹಲಿ ಅಂಗಳದಲ್ಲಿ ಡಿಕೆ ಬ್ರದರ್ಸ್ ಪವರ್ ಗೇಮ್ – ಹೈಕಮಾಂಡ್ ಮುಂದೆ 2 ದಿನ, 2 ಭೇಟಿ, 2 ಖಡಕ್ ಷರತ್ತು!

Public TV
By Public TV
1 hour ago
Condom
Latest

ಇರಾನ್‌ ಯುದ್ಧ- ಕಾಂಡೋಮ್‌ ಬೆಲೆ ಭಾರೀ ಏರಿಕೆಯಾಗುವ ಸಾಧ್ಯತೆ

Public TV
By Public TV
2 hours ago
Kavitha K
Latest

ತಂದೆ ಕೆಸಿಆರ್‌ಗೆ ಸೆಡ್ಡು – ಹೊಸ TRS ಪಕ್ಷ ಸ್ಥಾಪಿಸಿದ ಕವಿತಾ

Public TV
By Public TV
2 hours ago

Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?