ಟೆಹ್ರಾನ್: ಭಾರತದ ಬಂದರಿಗೆ (Indian Port) ಬರುತ್ತಿದ್ದ ಹಡಗನ್ನು ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ವಶಕ್ಕೆ ಪಡೆದಿದೆ.
ಇಂದು ಒಟ್ಟು ಎರಡು ಹಡಗನ್ನು ಐಆರ್‌ಜಿಸಿ ವಶಕ್ಕೆ ಪಡೆದಿದೆ. ಈ ಹಡಗುಗಳು ಸಂಚಾರಿ ನಿಯಮಗಳನ್ನು ಉಲ್ಲಂಘಿಸಿವೆ, ಅಗತ್ಯ ಅನುಮತಿಗಳಿಲ್ಲದೆ ಕಾರ್ಯನಿರ್ವಹಿಸುತ್ತಿವೆ ಮತ್ತು ಸಂಚಾರಿ ವ್ಯವಸ್ಥೆಯಲ್ಲಿ (Navigation systems) ಹಸ್ತಕ್ಷೇಪ ಮಾಡಿ ಕಡಲ ಭದ್ರತೆಗೆ ಅಪಾಯ ತಂದಿವೆ ಎಂದು ಐಆರ್‌ಜಿಸಿ ಹೇಳಿದೆ.
ಎಪಾಮಿನೋಂಡಾಸ್ (Epaminondas) ಲೈಬೀರಿಯಾ ಧ್ವಜ ಹೊಂದಿರುವ ಈ ಕಂಟೇನರ್ ಹಡಗು ದುಬೈನ ಜೆಬೆಲ್ ಅಲಿಯಿಂದ ಗುಜರಾತ್‌ಗೆ ಬರುತ್ತಿತ್ತು. ಪನಾಮಾ ಧ್ವಜ ಹೊಂದಿದ್ದ MSC ಫ್ರಾನ್ಸೆಸ್ಕಾ (MSC Francesca) ಹಡಗನ್ನು ಇಸ್ರೇಲ್‌ನೊಂದಿಗೆ ಸಂಬಂಧ ಹೊಂದಿದೆ ಎಂಬ ಕಾರಣ ನೀಡಿ ಐಆರ್‌ಜಿಸಿ ವಶ ಪಡೆದಿದೆ. ಇದನ್ನೂ ಓದಿ: 20 ನಿಮಿಷಗಳಲ್ಲೇ ನರಮೇಧ ನಡೆದಿದ್ದು ಹೇಗೆ? – ಈಗಲೂ ಕಣ್ಣಿಗೆ ಕಟ್ಟಿದಂತಿದೆ ಬೀಭತ್ಸ ದೃಶ್ಯ!
ಐಆರ್‌ಜಿಸಿ ಪಡೆಗಳು ಮೊದಲು ಹಡಗುಗಳಿಗೆ ಎಚ್ಚರಿಕೆ ನೀಡಿ ನಂತರ ಗುಂಡಿನ ದಾಳಿ ನಡೆಸುವ ಮೂಲಕ ಅವುಗಳನ್ನು ಇರಾನ್ ಕರಾವಳಿಗೆ ಎಳೆದೊಯ್ದಿವೆ. ಈ ಘಟನೆಯಲ್ಲಿ ಮತ್ತೊಂದು ಹಡಗು ‘ಯುಫೋರಿಯಾ’ (Euphoria) ಕೂಡ ದಾಳಿಗೆ ಒಳಗಾಗಿದೆ ಎಂದು ವರದಿಯಾಗಿದೆ.
ಇತ್ತೀಚೆಗೆ ಭಾರತದ ಧ್ವಜ ಹೊಂದಿದ್ದ ಹಡಗುಗಳ ಮೇಲೆಯೂ ದಾಳಿ ನಡೆಸಿದ್ದಕ್ಕೆ ಭಾರತದ ವಿದೇಶಾಂಗ ಸಚಿವಾಲಯವು (MEA) ಇರಾನ್ ರಾಯಭಾರಿಯನ್ನು ಕರೆಸಿ ತೀವ್ರ ಕಳವಳ ವ್ಯಕ್ತಪಡಿಸಿತ್ತು.



