ನವದೆಹಲಿ: ಇರಾನ್‌ನ (Iran) ಪರಮೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ (Ayatollah Ali Khamenei) ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ದೇಶದ ವಿವಿಧ ರಾಜಕೀಯ ಪಕ್ಷಗಳ ಪ್ರಮುಖ ನಾಯಕರಿಗೆ ಇರಾನ್ ಸರ್ಕಾರ ಅಧಿಕೃತ ಆಹ್ವಾನ ನೀಡಿದೆ. ಭಾರತ-ಇರಾನ್ ನಡುವಿನ ರಾಜತಾಂತ್ರಿಕ ಸಂಬಂಧಗಳಿಗೆ ಮಹತ್ವ ನೀಡುವ ಉದ್ದೇಶದಿಂದ ಈ ಆಹ್ವಾನ ನೀಡಲಾಗಿದೆ.
ಆಹ್ವಾನಿತರಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್, ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಮಾಜಿ ವಿದೇಶಾಂಗ ಸಚಿವ ಸಲ್ಮಾನ್ ಖುರ್ಷಿದ್ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಸೇರಿದ್ದಾರೆ. ಕಾಂಗ್ರೆಸ್ ಪರವಾಗಿ ಸಲ್ಮಾನ್ ಖುರ್ಷಿದ್ ಅಂತ್ಯಕ್ರಿಯೆಯಲ್ಲಿ (Funeral) ಪಾಲ್ಗೊಳ್ಳುವುದಾಗಿ ಈಗಾಗಲೇ ದೃಢಪಡಿಸಿದ್ದಾರೆ. ಇದನ್ನೂ ಓದಿ: ಚಾ.ನಗರ | ವಾಹನ ಅಡ್ಡಗಟ್ಟಿ ಕ್ಯಾರೆಟ್ ತಿಂದ ಕಾಡಾನೆ
ಇದರ ಜೊತೆಗೆ ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್, ಕಾಂಗ್ರೆಸ್ ವಕ್ತಾರ ಪವನ್ ಖೇರಾ, ಸಮಾಜವಾದಿ ಪಕ್ಷದ ಸಂಸದ ಅಫ್ಜಲ್ ಅನ್ಸಾರಿ, ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ, ಶ್ರೀನಗರ ಸಂಸದ ರುಹುಲ್ಲಾ ಮೆಹದಿ, ಲಡಾಖ್ ಸಂಸದ ಹಾಜಿ ಹನೀಫಾ ಹಾಗೂ ಅಂತರರಾಷ್ಟ್ರೀಯ ಸಾಮಾಜಿಕ ಸಂಘಟನೆಯಾದ ಅಹಿಂಸಾ ವಿಶ್ವ ಭಾರತಿಯನ್ನು ಸ್ಥಾಪಿಸಿದ ಭಾರತೀಯ ಜೈನ ಸನ್ಯಾಸಿ ಮತ್ತು ಆಧ್ಯಾತ್ಮಿಕ ನಾಯಕ ಆಚಾರ್ಯ ಲೋಕೇಶ್ ಮುನಿ ಅವರಿಗೂ ಆಹ್ವಾನ ಕಳುಹಿಸಿದೆ. ಇದನ್ನೂ ಓದಿ: ಮೊಟ್ಟೆ ಖರೀದಿ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ – ಮೂವರು ಆರೋಪಿಗಳು ಅರೆಸ್ಟ್, ಇನ್ನೋರ್ವ ಪರಾರಿ
ಇದಕ್ಕೂ ಮುನ್ನ ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೂ ಅಂತ್ಯಕ್ರಿಯೆಯಲ್ಲಿ ಭಾಗವಹಿಸುವಂತೆ ಆಹ್ವಾನ ನೀಡಿದ್ದರು. ಆದರೆ ಪ್ರಧಾನಿ ಮೋದಿ ಅವರ ಬದಲಿಗೆ ಭಾರತವು ಉನ್ನತ ಮಟ್ಟದ ಅಧಿಕೃತ ನಿಯೋಗವನ್ನು ಕಳುಹಿಸುವ ಸಾಧ್ಯತೆ ಇದೆ. ಬಿಹಾರ ರಾಜ್ಯಪಾಲ ಜನರಲ್ ಸಯ್ಯದ್ ಹಸ್ನೈನ್ ಹಾಗೂ ಕೇಂದ್ರ ವಿದೇಶಾಂಗ ಖಾತೆ ರಾಜ್ಯ ಸಚಿವ ಪವಿತ್ರ ಮಾರ್ಗರಿಟಾ ಅವರು ಭಾರತೀಯ ನಿಯೋಗದ ಭಾಗವಾಗುವ ಸಾಧ್ಯತೆ ಇದೆ ಎಂದು ರಾಜತಾಂತ್ರಿಕ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಚಿಕ್ಕಮಗಳೂರು ಕೋರ್ಟ್‌ಗೆ ಬಾಂಬ್ ಬೆದರಿಕೆ – ಕಲಾಪ ನಿಲ್ಲಿಸದೇ ತಪಾಸಣೆಗೆ ಸೂಚಿಸಿದ ಜಡ್ಜ್
ಖಮೇನಿ ಅವರ ಅಂತ್ಯಕ್ರಿಯೆ ಜುಲೈ 4ರಿಂದ ಟೆಹ್ರಾನ್‌ನಲ್ಲಿ ಆರಂಭವಾಗಿ, ಕ್ವೋಮ್ ಹಾಗೂ ಇರಾಕ್‌ನ ಕೆಲವು ಧಾರ್ಮಿಕ ಸ್ಥಳಗಳಲ್ಲಿ ಶ್ರದ್ಧಾಂಜಲಿ ಕಾರ್ಯಕ್ರಮಗಳ ಬಳಿಕ ಜುಲೈ 9ರಂದು ಮಶ್ಹದ್‌ನಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ. ಈ ಸಂದರ್ಭದಲ್ಲಿ ಲಕ್ಷಾಂತರ ಜನರು ಹಾಗೂ ಅನೇಕ ದೇಶಗಳ ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆಯಿದೆ. ಭದ್ರತಾ ದೃಷ್ಟಿಯಿಂದ ಇರಾನ್ ದೇಶಾದ್ಯಂತ ಕಟ್ಟೆಚ್ಚರ ವಹಿಸಲಾಗಿದ್ದು, ಪ್ರಮುಖ ನಗರಗಳಲ್ಲಿ ವಿಶೇಷ ಭದ್ರತಾ ಕ್ರಮಗಳನ್ನು ಜಾರಿಗೆ ತರಲಾಗಿದೆ. ಇದನ್ನೂ ಓದಿ: 15 ದಾಖಲೆ ಸಲ್ಲಿಸಿದರೂ `ಭಾರತೀಯ’ ಎಂದು ನಿರೂಪಿಸುವಲ್ಲಿ ವಿಫಲನಾದ ಕೂಲಿ ಕಾರ್ಮಿಕ

