ಮಂಗಳೂರು: ಭಾರತೀಯ ಐಸ್ ಸ್ಕೇಟಿಂಗ್ ಅಸೋಸಿಯೇಶನ್ ವತಿಯಿಂದ ಡೆಹ್ರಾಡೂನ್‌ನಲ್ಲಿ ನಡೆದ 21ನೇ ರಾಷ್ಟ್ರೀಯ ಐಸ್ ಸ್ಕೇಟಿಂಗ್ (Ice Skating) ಚಾಂಪಿಯನ್‌ಶಿಪ್‌ನಲ್ಲಿ ಮಂಗಳೂರಿನ (Mangaluru) ಡ್ಯಾಶಿಯಲ್ ಕಾನ್ಸೆಸ್ಸೊ (Dashiel Concesso) ವಿಶಿಷ್ಟ ಸಾಧನೆ ಮೆರೆದಿದ್ದಾರೆ.
ಹಿರಿಯರ ವಿಭಾಗದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ ಡ್ಯಾಶಿಯಲ್ ಅವರು ಮಿಕ್ಸ್ಡ್ ರಿಲೇ ವಿಭಾಗದಲ್ಲಿ 1 ಚಿನ್ನ ಮತ್ತು 500 ಮೀ., 1000 ಮೀ. ಮತ್ತು 1500 ಮೀಟರ್‌ನಲ್ಲಿ 3 ಬೆಳ್ಳಿ ಪದಕಗಳನ್ನು ಪಡೆದಿದ್ದಾರೆ. ಇದನ್ನೂ ಓದಿ: FIFA ವಿಶ್ವಕಪ್: ಟೂರ್ನಮೆಂಟ್‌ನ ನಾಕೌಟ್ ಹಂತದಲ್ಲಿ ಅತಿ ಹೆಚ್ಚು ಗೋಲ್ – ರೊನಾಲ್ಡೊ ದಾಖಲೆ ಮುರಿದ ಎಂಬಾಪೆ
ಡ್ಯಾಶಿಯಲ್ ಕಾನ್ಸೆಸ್ಸೊ ಪ್ರಸ್ತುತ ಮಂಗಳೂರಿನ ಎಸ್‌ಡಿಎಂ ಸಂಸ್ಥೆಯಲ್ಲಿ ಪದವಿ ವ್ಯಾಸಂಗವನ್ನು ಪಡೆಯುತ್ತಿದ್ದಾರೆ. ಇವರು ಮಂಗಳೂರಿನ ದೇರೆಬೈಲ್ ನಿವಾಸಿ ಫ್ರಾನ್ಸಿಸ್ ಮತ್ತು ಡೋರಿಸ್ ಕಾನ್ಸೆಸ್ಸೊ ಅವರ ಪುತ್ರಿಯಾಗಿದ್ದಾರೆ.
