ಬೆಂಗಳೂರು: ಟಾಟಾ ಐಪಿಎಲ್‌ನ ಕ್ರಿಕೆಟ್ ಪಂದ್ಯಗಳು ಏ.15, ಏ.18 ಹಾಗೂ ಏ.24ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಹಿನ್ನೆಲೆ ಏ.15, 24ರಂದು ರಾತ್ರಿ 2 ಗಂಟೆವರೆಗೆ `ನಮ್ಮ ಮೆಟ್ರೋ’ (Namma Metro) ಕಾರ್ಯನಿರ್ವಹಿಸಲಿದೆ.
ಪ್ರಯಾಣಿಕರಿಗೆ ಸುರಕ್ಷಿತೆ ಹಾಗೂ ಅನುಕೂಲಕರ ಸಂಚಾರವನ್ನು ಕಲ್ಪಿಸುವ ಉದ್ದೇಶದಿಂದ ಬಿಎಂಆರ್‌ಸಿಎಲ್ ಏ.15 ಮತ್ತು 24ರ ರಾತ್ರಿ ಮೆಟ್ರೋ ರೈಲಿನ ಸೇವಾ ಅವಧಿಯನ್ನು ವಿಸ್ತರಿಸಲಾಗುತ್ತಿದೆ. ಈ ದಿನಗಳಲ್ಲಿ, ಎಲ್ಲಾ ಟರ್ಮಿನಲ್ ನಿಲ್ದಾಣಗಳಿಂದ ಕೊನೆಯ ಮೆಟ್ರೋ ರೈಲು ಸೇವೆಗಳು ರಾತ್ರಿ 11:00 ಗಂಟೆಯಿಂದ ಮುಂದಿನ ದಿನದ ಮುಂಜಾನೆ 2:00 ಗಂಟೆಯವರೆಗೆ ವಿಸ್ತರಿಸಲಾಗಿದೆ. ಇದನ್ನೂ ಓದಿ: ನೋಯ್ಡಾ ಕಾರ್ಮಿಕರ ಪ್ರತಿಭಟನೆಗೆ ರಾತ್ರೋ ರಾತ್ರಿ ಪ್ಲ್ಯಾನ್ – ಪಾಕಿಸ್ತಾನ ಲಿಂಕ್ ಬಗ್ಗೆ ತನಿಖೆ, 300 ಜನ ಅರೆಸ್ಟ್
Extension of Metro Services for IPL 2026 Match in Bengaluru. / ಬೆಂಗಳೂರಿನಲ್ಲಿ ನಡೆಯುವ ಐಪಿಎಲ್ 2026 ಪಂದ್ಯದ ಪ್ರಯುಕ್ತ ಮೆಟ್ರೋ ಸೇವೆ ವಿಸ್ತರಣೆ.ಹೆಚ್ಚಿನ ವಿವರಗಳಿಗೆ ಮಾಧ್ಯಮ ಪ್ರಕಟಣೆ ಯನ್ನು ವೀಕ್ಷಿಸಿ. pic.twitter.com/LAobmD1IT3
— ನಮ್ಮ ಮೆಟ್ರೋ (@OfficialBMRCL) April 13, 2026
ಎಲ್ಲಾ ಟರ್ಮಿನಲ್ ನಿಲ್ದಾಣಗಳಿಂದ ಕೊನೆಯ ರೈಲುಗಳು ಕೆಳಗಿನ ವೇಳಾಪಟ್ಟಿಯಂತೆ ಹೊರಡಲಿವೆ:
ವೈಟ್‌ಫೀಲ್ಡ್ಯಿಂದ (ಕಾಡುಗೋಡಿ) ರಾತ್ರಿ 12:30ಕ್ಕೆ ಹಾಗೂ ಚಲ್ಲಘಟ್ಟದಿಂದ ರಾತ್ರಿ 12:45ಕ್ಕೆ.
ರೇಷ್ಮೆ ಸಂಸ್ಥೆ ಹಾಗೂ ಮಾದಾವರದಿಂದ ರಾತ್ರಿ 12:45ಕ್ಕೆ
ಬೊಮ್ಮಸಂದ್ರದಿಂದ ರಾತ್ರಿ 12:30ಕ್ಕೆ ಹಾಗೂ ಆರ್.ವಿ ರಸ್ತೆಯಿಂದ ರಾತ್ರಿ 02:00ಕ್ಕೆ.
ನಾಡಪ್ರಭು ಕೆಂಪೇಗೌಡ ನಿಲ್ದಾಣ ಮಜೆಸ್ಟಿಕ್‌ನಿಂದ ನಾಲ್ಕು ದಿಕ್ಕುಗಳಿಗೆ ಮಧ್ಯರಾತ್ರಿ 01:30ಕ್ಕೆ ಕೊನೆಯ ರೈಲು ಹೊರಡಲಿದೆ.
ಇನ್ನೂ ಏ.18ರಂದು ನಡೆಯಲಿರುವ ಪಂದ್ಯದ ದಿನದಂದು ಮೆಟ್ರೋ ರೈಲು ಸೇವೆಗಳ ಅವಧಿಯಲ್ಲಿ ಯಾವುದೇ ವಿಸ್ತರಣೆ ಇರುವುದಿಲ್ಲ. ರೈಲುಗಳು ನಿಗದಿತ ವೇಳಾಪಟ್ಟಿಯಂತೆ ಸಂಚರಿಸಲಿವೆ.ಇದನ್ನೂ ಓದಿ: ವಚನಾನಂದ ಸ್ವಾಮೀಜಿ ಸತ್ಯಹರಿಶ್ಚಂದ್ರರಲ್ಲ, ಎರಡೂ ಟ್ರಸ್ಟ್‌ಗಳನ್ನು ಖಾಸಗಿ ಆಸ್ತಿ ಮಾಡ್ಕೊಂಡಿದ್ದಾರೆ – ಯತ್ನಾಳ್

