ನವದೆಹಲಿ: ಲಕ್ಷದ್ವೀಪದಿಂದ ದೋಣಿ ಮೂಲಕ ತಮಿಳುನಾಡಿಗೆ ಮಾದಕವಸ್ತುಗಳನ್ನು ಸಾಗಿಸುತ್ತಿದ್ದವರನ್ನು ಲಕ್ಷದ್ವೀಪ ಕರಾವಳಿಯಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯ ಮತ್ತು ಭಾರತೀಯ ಕರಾವಳಿ ಕಾವಲು ಪಡೆ ಚೇಸಿಂಗ್ ಮಾಡಿ ಬಂಧಿಸಿದ ರೋಚಕ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಸುಮಾರು 1 ನಿಮಿಷ 30 ಸೆಕೆಂಡ್ ಇರುವ ವೀಡಿಯೋದಲ್ಲಿ ಕಗ್ಗತ್ತಲಿನಲ್ಲಿ ಸಾಗುತ್ತಿದ್ದ ಬೆಂಬಿಡದೇ ಹಿಂಬಾಲಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವುದನ್ನು ಕಾಣಬಹುದಾಗಿದೆ. ಇದನ್ನೂ ಓದಿ: ಕುಕ್ಕೆ ಸುಬ್ರಹ್ಮಣ್ಯದಲ್ಲಿ ತಾರಕಕ್ಕೇರಿದ ಆಡಳಿತಮಂಡಳಿ, ಕಾರ್ಯನಿರ್ವಹಣಾಧಿಕಾರಿ ಜಟಾಪಟಿ
Advertisement
#WATCH | Indian Coast Guard ships chased two boats named Prince and Little Jesus off the coast of Lakshadweep and intercepted them with drugs worth over Rs 1,520 crores. Operation ‘Khojbeen’ was launched jointly with the Directorate of Revenue Intelligence: ICG officials pic.twitter.com/5drXSLrQqg
— ANI (@ANI) May 21, 2022
Advertisement
ಅರಬ್ಬಿ ಸಮುದ್ರದಲ್ಲಿ ದೋಣಿ ಮೂಲಕ ತಮಿಳುನಾಡಿಗೆ ಮಾದಕವಸ್ತುಗಳನ್ನು ಸಾಗಿಸುತ್ತಿದ್ದವರನ್ನು ಲಕ್ಷದ್ವೀಪ ಕರಾವಳಿಯಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯ ಮತ್ತು ಭಾರತೀಯ ಕರಾವಳಿ ಕಾವಲು ಪಡೆ ಶುಕ್ರವಾರ ದಾಳಿ ನಡೆಸಿತ್ತು. ಈ ವೇಳೆ ಆರೋಪಿಗಳನ್ನು ಬಂಧಿಸಿ ಅವರ ಬಳಿ ಇದ್ದ ಸುಮಾರು 1,526 ಕೋಟಿ ಮೌಲ್ಯದ 218 ಕೆಜಿ ಹೆರಾಯಿನ್ ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ಜೂನ್ 21ರಂದು ಮೈಸೂರಿಗೆ ಬರಲಿದ್ದಾರೆ ಪ್ರಧಾನಿ ಮೋದಿ
Advertisement
Specific intelligence lead to recovery of a large consignment of narcotics from two IFBs off #Lakshadweep on 18 May, in a joint operation by @IndiaCoastGuard and DRI. Ops khojbeen resulted in recovery of 218 kg of heroin. #ArabianSea pic.twitter.com/HthDpP3Rbw
— Indian Coast Guard (@IndiaCoastGuard) May 21, 2022
Advertisement
‘ಲಿಟಲ್ ಜೀಸಸ್’ ಮತ್ತು ‘ಪ್ರಿನ್ಸ್’ ಎಂಬ ದೋಣಿಯಲ್ಲಿ ಡ್ರಗ್ ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಅಧಿಕಾರಿಗಳು ದಾಳಿ ನಡೆಸಿದ್ದು, ಸದ್ಯ ಈ ಕುರಿತಂತೆ ತನಿಖೆ ನಡೆಸಲಾಗುತ್ತಿದೆ ಎಂದು ಕಂದಾಯ ಗುಪ್ತಚರ ನಿರ್ದೇಶನಾಲಯ ತಿಳಿಸಿದೆ.