ಬೆಂಗಳೂರು: ನಮ್ಮನ್ನು ರಕ್ಷಿಸಲು ಕೊರೊನಾ ಹಿಮ್ಮೆಟ್ಟಿಸಲು ಪ್ರಾಣವನ್ನೇ ಪಣಕ್ಕಿಟ್ಟು ಹೋರಾಟ ನಡೆಸುತ್ತಿರುವ ಹೆಲ್ತ್ ವಾರಿಯರ್ಸ್‌ಗೆ ಈಗಾಗಲೇ ಚಪ್ಪಾಳೆ ತಟ್ಟುವ ಮೂಲಕ ಜನರು ಗೌರವ ಸಲ್ಲಿಸಿದ್ದಾರೆ. ಇದೀಗ ಇಡೀ ದೇಶದಲ್ಲಿ ಆಸ್ಪತ್ರೆಗಳ ಮೇಲೆ ಹೂಮಳೆ ಸುರಿಸುವ ಮೂಲಕ ಕೊರೊನಾ ವಾರಿಯರ್ಸ್‌ಗೆ ವಾಯು ಸೇನೆ ಗೌರವ ಸಲ್ಲಿಸಿದೆ.
ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಮೇಲೆ ಭಾರತೀಯ ಸೇನೆಯಿಂದ ಹೂ ಮಳೆ ಸುರಿಸಿ ಗೌರವ ಸಮರ್ಪಣೆ ಮಾಡಿದೆ. ವಾಯು ಪಡೆಯ ಸಿ 130 ಜೆ ಹರ್ಕ್ಯುಲೆಸ್ ಮತ್ತು ಎಮ್ ಐ 17 ಹೆಲಿಕಾಪ್ಟರ್ ವಿಕ್ಟೋರಿಯಾ ಆಸ್ಪತ್ರೆಯ ಹೆಲ್ತ್ ವಾರಿಯರ್ಸ್‌ಗೆ ಮೇಲೆ ಹೂ ಮಳೆ ಸುರಿದಿದೆ.
Advertisement
Advertisement
ವಾಯು ಸೇನೆ ಬರುವ ಮೊದಲು ಡಾಕ್ಟರ್‌ಗಳು, ನರ್ಸ್‌ಗಳು ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿ ಆಸ್ಪತ್ರೆ ಬಿಲ್ಡಿಂಗ್‍ನಿಂದ ಹೊರಭಾಗದಲ್ಲಿ ನಿಂತಿದ್ದರು. ಈ ವೇಳೆ ಹೂ ಮಳೆ ಸುರಿಯಲಾಗಿದೆ. ಇತ್ತ ವೈದ್ಯರು ಹಾಗೂ ದಾದಿಯರು ಕೂಡ ಚಪ್ಪಾಳೆ ತಟ್ಟಿ ವಾಯುಸೇನೆಯನ್ನು ಸ್ವಾಗತಿಸಿದ್ದು, ಆಸ್ಪತ್ರೆ ಹೂವಿನಿಂದ ತುಂಬಿದೆ.
Advertisement
ಈ ವಿಶೇಷ ಗೌರವದಿಂದ ಕೊರೊನಾ ವಾರಿಯರ್ಸ್ ಮಂದಹಾಸ ಬೀರಿದ್ದಾರೆ. ಹೂ ಮಳೆ ಗೌರವ ಮುಗಿದ ಮೇಲೆ ಸಿಬ್ಬಂದಿ ಹಿಪ್ ಹಿಪ್ ಹುರೇ ಎಂದು ಘೋಷಣೆ ಕೂಗಿದ್ದಾರೆ. ಪುಷ್ಪ ಮಳೆಯಿಂದ ಆರೋಗ್ಯ ಸಿಬ್ಬಂದಿ ಖುಷಿಯಾಗಿದ್ದಾರೆ. ಇನ್ನೂ ಕಮಾಂಡ್ ಆಸ್ಪತ್ರೆ ಮೇಲೂ ಸುಮಾರು 8 ನಿಮಿಷಗಳ ಕಾಲ ವಾಯು ಸೇನೆ ಹೂ ಮಳೆ ಸುರಿಸಿದೆ.
Advertisement
#WATCH Indian Air Force aircraft showers flower petals on Victoria Hospital in Bengaluru to express gratitude towards health workers for their contribution in the fight against #COVID19 pandemic. #Karnataka pic.twitter.com/bkBfj80kqk
— ANI (@ANI) May 3, 2020
ಇಡೀ ದೇಶವನ್ನು ಫುಲ್ ಟೈಂ ಕಾಯುವ ಮೂರು ಸೇನೆಗಳು ಹೆಲ್ತ್ ವಾರಿಯರ್ಸ್‌ಗೆ ಗೌರವ ಸಲ್ಲಿಸಲು ಮುಂದಾಗಿದೆ. ಭೂಸೇನೆ, ವಾಯುಸೇನೆ ಹಾಗೂ ನೌಕಾ ಸೇನೆ ಇಂದು ದೇಶದ ಎಲ್ಲ ಹೆಲ್ತ್ ವಾರಿಯರ್ಸ್ ಗೌರವ ಸಲ್ಲಿಸುತ್ತಿದೆ. ಶ್ರೀನಗರದಿಂದ ತಿರುವನಂತಪುರಂವರೆಗೆ ಹಾಗೂ ಅಸ್ಸಾಂನ ದಿಬ್ರುಗಡ್‍ದಿಂದ ಗುಜರಾತ್‍ನ ಕಛ್‍ವರೆಗೆ ಹೆಲಿಕಾಪ್ಟರ್‌ನಿಂದ ಹೂವಿನ ಮಳೆ ಸುರಿಯುವ ಮೂಲಕ ವಾಯುಸೇನೆ ಗೌರವ ಸಲ್ಲಿಸುತ್ತಿದೆ. ಇನ್ನೂ ಎಲ್ಲ ನೌಕಾ ನೆಲೆಗಳಲ್ಲಿ ದೀಪ ಹಚ್ಚಿ ಮೌಂಟೇನ್ ಬ್ಯಾಂಡ್ ನುಡಿಸುವ ಮೂಲಕ ಗೌರವ ಸಲ್ಲಿಸಲು ಭಾರತೀಯ ಸೇನೆ ಸಿದ್ಧವಾಗಿದೆ.