ಕೇಪ್‌ಟೌನ್: ಟಿ20 ವಿಶ್ವಕಪ್ (T20 Cricket) ಟೂರ್ನಿಯ ಎರಡನೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್ (West Indies) ವಿರುದ್ಧ ಭಾರತ (Team India) 6 ವಿಕೆಟ್‌ಗಳ ಸುಲಭ ಜಯ ಸಾಧಿಸಿದೆ.
ಗೆಲ್ಲಲು 118 ರನ್‌ಗಳ ಗುರಿಯನ್ನು ಪಡೆದ ಭಾರತ 18.1 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 119 ರನ್ ಹೊಡೆಯುವ ಮೂಲಕ ಸತತ ಎರಡನೇ ಜಯ ಗಳಿಸಿತು.
Advertisement
Advertisement
ವಿಕೆಟ್ ನಷ್ಟವಿಲ್ಲದೇ 32 ರನ್ ಗಳಿಸಿ ಉತ್ತಮ ಸ್ಥಿತಿಯಲ್ಲಿದ್ದ ಭಾರತ 43 ರನ್‌ಗಳಿಸುವಷ್ಟರಲ್ಲಿ ಮೊದಲ ಮೂರು ವಿಕೆಟ್ ಕಳೆದುಕೊಂಡಿತ್ತು. ಈ ಹಂತದಲ್ಲಿ ಜೊತೆಯಾದ ನಾಯಕಿ ಹರ್ಮನ್‌ಪ್ರೀತ್ ಕೌರ್ (Harmanpreet Kaur) ಮತ್ತು ರಿಚಾ ಘೋಷ್ (Richa Ghosh) 4ನೇ ವಿಕೆಟಿಗೆ 65 ಎಸೆತಗಳಲ್ಲಿ 72 ರನ್ ಜೊತೆಯಾಟವಾಡಿ ತಂಡವನ್ನು ಗೆಲುವಿನದ ದಡಕ್ಕೆ ತಂದರು. ಇದನ್ನೂ ಓದಿ: WPL Auction 2023 ಹರಾಜು ನಡೆಸಿಕೊಟ್ಟ ಮಲ್ಲಿಕಾಗೆ ಬೇಷ್ ಎಂದ ಡಿಕೆ
Advertisement
ಹರ್ಮನ್ ಪ್ರೀತ್ ಕೌರ್ 33 ರನ್(42 ಎಸೆತ, 3 ಬೌಂಡರಿ) ರಿಚಾ ಘೋಷ್ ಔಟಾಗದೇ 44 ರನ್(32 ಎಸೆತ, 5 ಬೌಂಡರಿ) ಹೊಡೆದರು. ಶಫಾಲಿ ವರ್ಮಾ 28 ರನ್, ಸ್ಮೃತಿ ಮಂಧಾನ 10 ರನ್ ಹೊಡೆದು ಔಟಾದರು.
Advertisement
A big milestone for Indian spinner Deepti Sharma ????
She becomes the first India international to reach the landmark in T20Is.
Follow LIVE ????: https://t.co/SB27Oahkfj #WIvIND | #T20WorldCup | #TurnItUp pic.twitter.com/B1JyC9RDKp
— T20 World Cup (@T20WorldCup) February 15, 2023
ವಿಂಡೀಸ್ ಪರ ಸ್ಟಾಫಾನಿ ಟೇಲರ್ 42 ರನ್, ಶೆಮೈನ್ ಕ್ಯಾಂಪ್ಬೆಲ್ಲೆ 30 ರನ್ ಹೊಡೆದು ಔಟಾದರು. ದೀಪ್ತಿ ಶರ್ಮಾ (Deepti Sharma) 3 ವಿಕೆಟ್ ಕಿತ್ತರೆ ರೇಣುಕಾ ಸಿಂಗ್ ಮತ್ತು ಪೂಜಾ ವಸ್ತ್ರಕರ್ ತಲಾ ಒಂದೊಂದು ವಿಕೆಟ್ ಪಡೆದರು.ಈ ಪಂದ್ಯದ ಮೂಲಕ ದೀಪ್ತಿ ಶರ್ಮಾ 100 ವಿಕೆಟ್ ಸಾಧನೆ ಮಾಡಿದರು. ಮಹಿಳೆಯರ ಟಿ20 ಕ್ರಿಕೆಟ್‌ನಲ್ಲಿ 100 ವಿಕೆಟ್ ಕಿತ್ತ ಏಕೈಕ ಬೌಲರ್ ಎಂಂಬ ಹೆಗ್ಗಳಿಕೆಗೆ ದೀಪ್ತಿ ಶರ್ಮಾ ಪಾತ್ರರಾಗಿದ್ದಾರೆ.
ಗ್ರೂಪ್ 2 ಅಂಕಪಟ್ಟಿಯಲ್ಲಿ 2 ಜಯ, 2.497 ನೆಟ್ ರನ್ ರೇಟ್‌ನೊಂದಿಗೆ 4 ಅಂಕ ಪಡೆದಿರುವ ಇಂಗ್ಲೆಂಡ್ ಮೊದಲ ಸ್ಥಾನದಲ್ಲಿದ್ದರೆ 2 ಜಯ, 0.590 ನೆಟ್ ರನ್ ರೇಟ್, 4 ಅಂಕದೊಂದಿಗೆ ಭಾರತ ಎರಡನೇ ಸ್ಥಾನದಲ್ಲಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k