ಲಕ್ನೋ: ಪ್ರವಾಸಿ ಶ್ರೀಲಂಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್‌ಮ್ಯಾನ್ ಇಶಾನ್ ಕಿಶನ್ ಅಬ್ಬರಿಸಿದ ಪರಿಣಾಮ ಲಂಕಾ ವಿರುದ್ಧ ಭಾರತ ತಂಡ 62 ರನ್‌ಗಳ ಅಂತರದ ಭರ್ಜರಿ ಜಯ ದಾಖಲಿಸಿದೆ.
Advertisement
ಭಾರತ ನೀಡಿದ 200 ರನ್‍ಗಳ ಟಾರ್ಗೆಟ್ ಬೆನ್ನಟ್ಟಿದ ಶ್ರೀಲಂಕಾ 20 ಓವರ್‌ಗಳ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 137 ರನ್ ಗಳಿಸಲಷ್ಟೇ ಶಕ್ತವಾಯಿತು. ಇದರೊಂದಿಗೆ 62 ರನ್ ಸೋಲು ಅನುಭವಿಸಿದೆ. ಭಾರತ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿದೆ. ಇದನ್ನೂ ಓದಿ: ಕ್ರಿಕೆಟ್ ದಂತಕಥೆಗಳೊಂದಿಗೆ ಬಾಲಿವುಡ್ ತಾರೆಗಳ ಕ್ರಿಕೆಟ್ ಪಂದ್ಯ
Advertisement
Advertisement
ಬೌಲರ್‌ಗಳ ಕಮಾಲ್
ಭಾರತ ನೀಡಿದ ಬೃಹತ್ ಮೊತ್ತ ಬೆನ್ನಟ್ಟಿದ ಶ್ರೀಲಂಕಾಗೆ ಭಾರತದ ಬೌಲಿಂಗ್ ಪಡೆ ಎಲ್ಲಾ ಕೂಡ ಮೇಲುಗೈ ಸಾಧಿಸಲು ಅವಕಾಶ ನೀಡಲಿಲ್ಲ. ಪರಿಣಾಮ ಚಾಮಿಕಾ ಕರುಣಾರತ್ನೆ 21 ರನ್ (14 ಎಸೆತ, 2 ಸಿಕ್ಸ್) ಸಿಡಿಸಿ ಔಟ್ ಆದರು. ನಂತರ ದುಷ್ಮಂತ ಚಮೀರ ಅಜೇಯ 24 ರನ್ (14 ಎಸೆತ, 2 ಬೌಂಡರಿ 1 ಸಿಕ್ಸ್) ಮತ್ತು ಚರಿತ್ ಅಸಲಂಕಾ 53 ರನ್ (5 ಬೌಂಡರಿ) ಸಿಡಿಸಿದನ್ನು ಹೊರತು ಪಡಿಸಿ ಉಳಿದ ಯಾವೊಬ್ಬ ಬ್ಯಾಟ್ಸ್‌ಮ್ಯಾನ್ ಕೂಡ ಮಿಂಚಲಿಲ್ಲ. ಭಾರತದ ಪರ ಭುವನೇಶ್ವರ್ ಕುಮಾರ್ ಮತ್ತು ವೆಂಕಟೇಶ್ ಅಯ್ಯರ್ ತಲಾ 2 ವಿಕೆಟ್ ಪಡೆದರೆ, ಜಡೇಜಾ ಮತ್ತು ಚಹಲ್ ತಲಾ 1 ವಿಕೆಟ್ ಕಿತ್ತು ಮಿಂಚಿದರು. ಇದನ್ನೂ ಓದಿ: ಅಂಪೈರ್ ಮೇಲೆ ವಿಶ್ವದ ನಂ.3 ಆಟಗಾರನಿಂದ ಹಲ್ಲೆಗೆ ಯತ್ನ
Advertisement
ಈ ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಪರ ಆರಂಭಿಕ ಆಟಗಾರರಾದ ನಾಯಕ ರೋಹಿತ್ ಶರ್ಮಾ ಮತ್ತು ಇಶಾನ್ ಕಿಶನ್ ಅಬ್ಬರಿಸಿ ಬೊಬ್ಬಿರಿದರು. ಆರಂಭದಿಂದಲೂ ಈ ಜೋಡಿ ಲಂಕಾ ಬೌಲರ್‌ಗಳನ್ನು ಬೆಂಡೆತ್ತಿತ್ತು. ಇಶಾನ್ ಕಿಶನ್ ಅಂತೂ ಬೌಂಡರಿ, ಸಿಕ್ಸರ್‌ಗಳ ಮಳೆ ಸುರಿಸಿದರು. ಈ ಜೋಡಿ ಮೊದಲ ವಿಕೆಟ್‍ಗೆ 111 ರನ್ (71 ಎಸೆತ) ಗಳ ಜೊತೆಯಾಟ ವಾಡಿತು. ರೋಹಿತ್ ಶರ್ಮಾ 44 ರನ್ (32 ಎಸೆತ, 2 ಬೌಂಡರಿ, 1 ಸಿಕ್ಸ್) ಸಿಡಿಸಿ ಔಟ್ ಆದರೆ. ಕಿಶನ್ 89 ರನ್ (56 ಎಸೆತ, 10 ಬೌಂಡರಿ, 3 ಸಿಕ್ಸ್) ಚಚ್ಚಿ ಪೆವಿಲಿಯನ್ ಸೇರಿಕೊಂಡರು.
ಪಂದ್ಯದ ಕೊನೆಯ ಹಂತದಲ್ಲಿ ಶ್ರೇಯಸ್ ಅಯ್ಯರ್ ಸ್ಫೋಟಕ ಬ್ಯಾಟಿಂಗ್‍ಗೆ ಮುಂದಾಗಿ ಅಜೇಯ 57 ರನ್ ( 28 ಎಸೆತ, 5 ಬೌಂಡರಿ, 2 ಸಿಕ್ಸ್) ಬಾರಿಸಿ ಮಿಂಚಿದರು. ಅಂತಿಮವಾಗಿ ಟೀಂ ಇಂಡಿಯಾ 20 ಓವರ್‌ಗಳ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 199 ರನ್ ಗಳಿಸಿತು.