ಲಕ್ನೋ: ಸೆಕೆಂಡ್ ಇನ್ನಿಂಗ್ಸ್ನಲ್ಲಿ 234 ರನ್ಗಳಿಗೆ ಡಿಕ್ಲೇರ್ ಮಾಡಿಕೊಂಡ ಟೀಂ ಇಂಡಿಯಾ 283 ರನ್ಗಳ ಮುನ್ನಡೆಯೊಂದಿಗೆ ನ್ಯೂಜಿಲೆಂಡ್ಗೆ 284 ರನ್ಗಳ ಟಾರ್ಗೆಟ್ ನೀಡಿದೆ. ಇದರೊಂದಿಗೆ ಮೊದಲ ಟೆಸ್ಟ್ನ 5ನೇ ದಿನದಾಟದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.
63 ರನ್ಗಳ ಮುನ್ನಡೆಯೊಂದಿಗೆ 4ನೇ ದಿನದಾಟ ಆರಂಭಿಸಿದ ಟೀಂ ಇಂಡಿಯಾ ಆರಂಭದಿಂದಲೇ ವಿಕೆಟ್ ಕಳೆದುಕೊಂಡು ಸಾಗಿತು. ಚೇತೇಶ್ವರ ಪೂಜಾರ 22 ರನ್ (33 ಎಸೆತ, 3 ಬೌಂಡರಿ) ಸಿಡಿಸಿ ಔಟ್ ಆದರೆ. ಇವರ ಹಿಂದೆ ನಾಯಕ ಅಜಿಂಕ್ಯಾ ರಹಾನೆ 4 ರನ್ (15 ಎಸೆತ, 1 ಬೌಂಡರಿ), ಮಯಾಂಕ್ ಅರ್ಗವಾಲ್ 17 ರನ್ (53 ಎಸೆತ, 3 ಬೌಂಡರಿ) ಮತ್ತು ರವೀಂದ್ರ ಜಡೇಜಾ ಶೂನ್ಯಕ್ಕೆ ಔಟ್ ಆದರು. ಒಂದು ಹಂತದಲ್ಲಿ 51 ರನ್ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಟೀಂ ಇಂಡಿಯಾಕ್ಕೆ ಪ್ರಥಮ ಇನ್ನಿಂಗ್ಸ್ನ ಹೀರೋ ಶ್ರೇಯಸ್ ಅಯ್ಯರ್ ಮತ್ತೊಮ್ಮೆ ಆಸರೆಯಾದರು. ಇದನ್ನೂ ಓದಿ: ರಶೀದ್ ಖಾನ್ ಬೇಡಿಕೆ ಕಂಡು ದಂಗಾದ ಹೈದರಾಬಾದ್ ಫ್ರಾಂಚೈಸ್
ಶ್ರೇಯಸ್ ಅಯ್ಯರ್ ಮತ್ತು ಅಶ್ವಿನ್ ಕುಸಿದ ಭಾರತಕ್ಕೆ ಶಕ್ತಿ ತುಂಬಿದರು. ಈ ಜೋಡಿ 6ನೇ ವಿಕೆಟ್ಗೆ 52 ರನ್ (118 ಎಸೆತ) ಜೊತೆಯಾಟವಾಡಿತು. ಈ ವೇಳೆ ದಾಳಿಗಿಳಿದ ಜೇಮಿಸನ್, ಅಶ್ವಿನ್ 32 ರನ್ (62 ಎಸೆತ, 5 ಬೌಂಡರಿ) ವಿಕೆಟ್ ಕಿತ್ತರು. ಆ ಬಳಿಕ ಒಂದಾದ ಶ್ರೇಯಸ್ ಮತ್ತು ವೃದ್ಧಿಮಾನ ಸಹಾ ಮತ್ತೊಂದು ಉತ್ತಮವಾದ ಜೊತೆಯಾಟವಾಡಿದರು. ಈ ಜೋಡಿ 7ನೇ ವಿಕೆಟ್ಗೆ 64 ರನ್ (126 ಎಸೆತ) ಜೊತೆಯಾಟವಾಡಿ ತಂಡದ ಮೊತ್ತ 200 ಗಡಿ ದಾಟುವಂತೆ ನೋಡಿಕೊಂಡರು. ಅರ್ಧಶತಕವಾಡಿ ಮುನ್ನುಗ್ಗುತ್ತಿದ್ದ ಶ್ರೇಯಸ್ ಅಯ್ಯರ್ 65 ರನ್ (125 ಎಸೆತ, 8 ಬೌಂಡರಿ, 1 ಸಿಕ್ಸ್) ವಿಕೆಟ್ ಒಪ್ಪಿಸಿದರು. ಇದನ್ನೂ ಓದಿ: IND vs NZ ಟೆಸ್ಟ್ ಪಂದ್ಯದಲ್ಲಿ ಸುದ್ದಿಯಾದ ಪಾನ್ ಭಾಯ್ – ವೀಡಿಯೋ ವೈರಲ್
ಕಳೆದ ಪಂದ್ಯದಲ್ಲಿ ಕೆಟ್ಟ ಹೊಡೆತಕ್ಕೆ ಕೈ ಹಾಕಿ ವಿಕೆಟ್ ಕಳೆದುಕೊಂಡಿದ್ದ ವೃದ್ಧಿಮಾನ್ ಸಹಾ ಸೆಕೆಂಡ್ ಇನ್ನಿಂಗ್ಸ್ನಲ್ಲಿ ಎಚ್ಚರಿಕೆಯ ಆಟವಾಡಿದರು. 8ನೇ ವಿಕೆಟ್ಗೆ ಅಕ್ಷರ್ ಪಟೇಲ್ ಜೊತೆ ಮುರಿಯದ 67 ರನ್ (124 ಎಸೆತ) ಜೊತೆಯಾಟವಾಡಿದ ಸಹಾ, ಭರ್ಜರಿ ಅರ್ಧಶತಕ 61 ರನ್ (126 ಎಸೆತ, 4 ಬೌಂಡರಿ, 1 ಸಿಕ್ಸ್) ಸಿಡಿಸಿ ಅಜೇಯರಾಗಿ ಉಳಿದರು. ಇವರಿಗೆ ಉತ್ತಮ ಸಾಥ್ ನೀಡಿದ ಅಕ್ಷರ್ ಪಟೇಲ್ ಅಜೇಯ 28 ರನ್ (67 ಎಸೆತ, 2 ಬೌಂಡರಿ, 1 ಸಿಕ್ಸ್) ಕಾಣಿಕೆ ನೀಡಿದರು. 81 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 234 ರನ್ಗಳಿಸಿದ್ದಾಗ ರಹಾನೆ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡರು. ಈ ಮೂಲಕ ಭಾರತ 283 ರನ್ಗಳ ಮುನ್ನಡೆಯೊಂದಿಗೆ ನ್ಯೂಜಿಲೆಂಡ್ಗೆ 284 ರನ್ ಟಾರ್ಗೆಟ್ ನೀಡಿತು. ಇದನ್ನೂ ಓದಿ: ಐಪಿಎಲ್ ಮೆಗಾ ಹರಾಜಿಗೆ ಮುನ್ನ 8 ತಂಡಗಳು ಈ ಆಟಗಾರರನ್ನು ಉಳಿಸಿಕೊಳ್ಳಲು ನಿರ್ಧಾರ?
ನ್ಯೂಜಿಲೆಂಡ್ ಪರ ಕೈಲ್ ಜೇಮಿಸನ್ ಮತ್ತು ಟಿಮ್ ಸೌಥಿ ತಲಾ 3 ವಿಕೆಟ್ ಪಡೆದರು. ಏಜಾಜ್ ಪಟೇಲ್ 1 ವಿಕೆಟ್ ಕಿತ್ತರು.
ಭಾರತ ನೀಡಿದ 284 ರನ್ಗಳ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ ಸೆಕೆಂಡ್ ಇನ್ನಿಂಗ್ಸ್ ಆರಂಭದಲ್ಲೇ ಆರಂಭಿಕ ಆಟಗಾರ ವಿಲ್ ಯಂಗ್ 2 ರನ್ (6 ಎಸೆತ) ವಿಕೆಟ್ ಕಳೆದುಕೊಂಡು ನಿರಾಸೆ ಮೂಡಿಸಿದೆ. ದಿನದಾಟದಂತ್ಯಕ್ಕೆ ನ್ಯೂಜಿಲೆಂಡ್ ತಂಡ 1 ವಿಕೆಟ್ ಕಳೆದುಕೊಂಡು 4 ರನ್ ಗಳಿಸಿದೆ. ಟ್ಯಾಮ್ ಲ್ಯಾಥಮ್ ಅಜೇಯ 2 ರನ್ ಮತ್ತು ವಿಲಿಯಂ ಸೊಮರ್ವಿಲ್ಲೆ ಕಾತೆ ತೆರೆಯದೆ 5ನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಈ ಮೂಲಕ ನ್ಯೂಜಿಲೆಂಡ್ ಗೆಲ್ಲಲೂ ಇನ್ನೂ 280 ರನ್ ಹಿನ್ನಡೆಯಲ್ಲಿದೆ. ಹಾಗಾಗಿ 5ನೇ ದಿನದಾಟದಲ್ಲಿ ಸ್ಪಷ್ಟ ಫಲಿತಾಂಶ ಬರುವ ನಿರೀಕ್ಷೆ ಇದೆ.