– ಒಂದೇ ಪ್ರಕಾರದ 5 ಜಾನಪದ ಕಲಾವಿದರಿಗೆ ಅವಕಾಶವಿಲ್ಲ
– ಬರದ ನೆಪದಲ್ಲಿ ಸರಳ ದಸರಾ ಮಾಡಲು ಸಾಧ್ಯವಿಲ್ಲ
ಮೈಸೂರು: ಈ ಬಾರಿಯ ದಸರಾವನ್ನು (Mysuru Dasara) ಅದ್ಧೂರಿಯಾಗಿ ಮತ್ತು ಬಹಳ ವಿಭಿನ್ನವಾಗಿ ಮಾಡುತ್ತೇವೆ ಎಂದು ಮೈಸೂರಿನಲ್ಲಿ ಸಿಎಂ ಡಿ.ಕೆ ಶಿವಕುಮಾರ್ (DK Shivakumar) ಹೇಳಿದ್ದಾರೆ.
ಈ ಕುರಿತು ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದಸರಾದ ಮೆರವಣಿಗೆಯ ರೂಪವನ್ನೇ ಬದಲಾಯಿಸುತ್ತೇವೆ. ಮಿಲಿಟರಿ, ಸೇನಾ ಪಡೆ ಮೆರವಣಿಗೆಯಲ್ಲಿ ಬರಲಿದೆ. ಕನ್ನಡದ ಚಿತ್ರ ನಟ, ನಟಿಯರು ಕೂಡ ಮೆರವಣಿಗೆಯಲ್ಲಿ ಸಾಗಲಿದ್ದಾರೆ. ಒಂದೇ ಪ್ರಕಾರದ 5 ಜಾನಪದ ಕಲಾವಿದರಿಗೆ ಈ ಬಾರಿ ಅವಕಾಶ ಇಲ್ಲ. ಬದಲಾದ ಕಾಲಕ್ಕೆ ತಕ್ಕಂತೆ ಮೆರವಣಿಗೆಯ ರೂಪವನ್ನ ಬದಲಾಯಿಸುತ್ತೇನೆ ಎಂದು ತಿಳಿಸಿದರು. ಇದನ್ನೂ ಓದಿ: ಹೊಸೂರು ಹೆದ್ದಾರಿಯಲ್ಲಿ ಧಗಧಗನೇ ಹೊತ್ತಿ ಉರಿದ ಕಾರು
ಇದೇ ವೇಳೆ, ದಸರಾ ಕಂಬಳ ನಡೆಸುವುದನ್ನು ನಾನು ಪ್ರತಿಷ್ಟೆಯಾಗಿ ತೆಗೆದುಕೊಂಡಿಲ್ಲ. ಕಂಬಳದ ಬಗ್ಗೆ ಚರ್ಚೆ ಮಾಡುತ್ತಿದ್ದೇನೆ. ಪರಿಸರ ಹಾನಿ ಎನ್ನುವುದೆಲ್ಲಾ ಸುಮ್ಮನೆ ನೆಪ. ನೀರು ಕೂಡ ಹೆಚ್ಚಾಗಿ ಬೇಕಾಗಿಲ್ಲ. ಸುಮ್ಮನೆ ಕೆಲವರು ವಿರೋಧ ಮಾಡುತ್ತಿದ್ದಾರೆ. ನಾನು ಈ ಬಗ್ಗೆ ಅಂತಿಮ ತೀರ್ಮಾನ ಮಾಡುತ್ತೇವೆ ಹೇಳಿದ್ದಾರೆ. ದಸರಾ ಉದ್ಘಾಟಕರ ವಿಚಾರದಲ್ಲೂ ಹಲವರ ಜೊತೆ ಚರ್ಚೆ ಮಾಡಿದ್ದೇನೆ. ಅಂತಿಮ ನಿರ್ಣಯ ನಾನೇ ಮಾಡುತ್ತೇನೆ ಎಂದರು. ಇದನ್ನೂ ಓದಿ: Delhi Blast; 12 ಆರೋಪಿಗಳ ವಿರುದ್ಧ NIA ಚಾರ್ಜ್‌ಶೀಟ್ – ನ್ಯಾಯಾಲಯದಿಂದ ಪರಿಗಣನೆ
