CricketLatestLeading NewsMain PostSports

ಭಾರತ Vs ಇಂಗ್ಲೆಂಡ್ ಟೆಸ್ಟ್ – ಮತ್ತೆ ಸುದ್ದಿಯಾದ ಜಾರ್ವೋ 69

Advertisements

ಲಂಡನ್: ಭಾರತ ಹಾಗೂ ಇಂಗ್ಲೆಂಡ್ ನಡುವಿನ 5ನೇ ಟೆಸ್ಟ್ ಪಂದ್ಯ ಆರಂಭವಾಗಿದೆ. ಇತ್ತ ಸಾಮಾಜಿಕ ಜಾಲತಾಣದಲ್ಲಿ ಪಂದ್ಯದ ಜೊತೆಗೆ ಜಾರ್ವೋ 69 ಎಂಬಾತನ ಬಗ್ಗೆ ಭಾರೀ ಚರ್ಚೆ ಆರಂಭವಾಗಿದೆ.

ಕಳೆದ ವರ್ಷ 5 ಪಂದ್ಯಗಳ ಟೆಸ್ಟ್ ಸರಣಿಗಾಗಿ ಭಾರತ ತಂಡ ಇಂಗ್ಲೆಂಡ್ ಪ್ರವಾಸ ಕೈಗೊಂಡಾಗ ಇಂಗ್ಲೆಂಡ್ ಪ್ರೇಕ್ಷಕ ಭಾರತದ ಅಭಿಮಾನಿ ಜಾರ್ವೋ 69 ನಂಬರ್‌ನ ಜೆರ್ಸಿ ಧರಿಸಿ ಮೈದಾನಕ್ಕೆ ಆಗಮಿಸಿ ತರ್ಲೆ ಮಾಡಿದ್ದ. ಆ ಬಳಿಕ ಕೋವಿಡ್ ಹೆಚ್ಚಾದ ಬಳಿಕ 5ನೇ ಪಂದ್ಯ ನಡೆಸದೆ ಸರಣಿಯನ್ನು ಅರ್ಧಕ್ಕೆ ಮೊಟಕುಗೊಳಿಸಲಾಗಿತ್ತು. ಇದೀಗ ಈ ಪಂದ್ಯವನ್ನು ಮುಂದುವರಿಸುತ್ತಿದ್ದು, ಇಂದು 5ನೇ ಟೆಸ್ಟ್ ಪಂದ್ಯ ಆರಂಭವಾಗಿದೆ. ಪಂದ್ಯ ಆರಂಭವಾಗುತ್ತಿದ್ದಂತೆ ಜಾರ್ವೋ ಹೆಸರು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ: ರೋಹಿತ್ ಶರ್ಮಾ ಔಟ್ ಆಗ್ತಿದ್ದಂತೆ 4ನೇ ಕ್ರಮಾಂಕದಲ್ಲಿ ಬ್ಯಾಟ್ ಹಿಡಿದು ಮೈದಾನಕ್ಕಿಳಿದ ‘ಜಾರ್ವೋ’!

ಭಾರತ ಹಾಗೂ ಇಂಗ್ಲೆಂಡ್ ನಡುವಿನ 2ನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಪ್ರೇಕ್ಷಕ ಜಾರ್ವೋ 69 ಜೆರ್ಸಿ ಧರಿಸಿದಾತ ಭಾರತದ ಪರ ಫೀಲ್ಡಿಂಗ್ ಮಾಡಲು ಮುಂದಾಗಿದ್ದ. ಈ ವೇಳೆ ಭದ್ರತಾ ಸಿಬ್ಬಂದಿ ಹಿಡಿದು ಹೊರ ಹಾಕಲು ಪ್ರಯತ್ನಿಸಿದಾಗ ಬಿಸಿಸಿಐ ಲಾಂಛನವನ್ನು ತನ್ನ ಜೆರ್ಸಿಯಲ್ಲಿ ತೋರಿಸಿ ತಾನು ಭಾರತ ತಂಡದ ಆಟಗಾರ ಎಂಬಂತೆ ವರ್ತಿಸಿದ್ದ. ಇದನ್ನೂ ಓದಿ: ಕೇವಲ 40ರೂ.ನಲ್ಲಿ ಧೋನಿ ಮಂಡಿ ನೋವು ಗುಣಪಡಿಸಿದ ಹಳ್ಳಿ ವೈದ್ಯ!

ನಂತರ 3ನೇ ಟೆಸ್ಟ್ ಪಂದ್ಯದಲ್ಲಿ ಜಾರ್ವೋ ಪ್ಯಾಡ್ ಧರಿಸಿ, ಬ್ಯಾಟ್ ಹಿಡಿದು ಬ್ಯಾಟಿಂಗ್ ಮಾಡಲು ಮೈದಾನಕ್ಕೆ ಬಂದಿದ್ದ. ಬಳಿಕ ಇದನ್ನು ಗಮನಿಸಿದ ಭದ್ರತಾ ಸಿಬ್ಬಂದಿ ಅವರನ್ನು ಹಿಡಿದು ಹೊರಹಾಕಿದ್ದರು.

ಇದೀಗ ನಡೆಯುತ್ತಿರುವ 5ನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡಿದೆ. ಡಬ್ಲ್ಯೂಟಿಸಿ ಫೈನಲ್‍ಗೇರಲು ಈ ಪಂದ್ಯ ಭಾರತ ಹಾಗೂ ಇಂಗ್ಲೆಂಡ್ ಎರಡೂ ತಂಡಗಳಿಗೂ ಮಹತ್ವದ್ದಾಗಿದೆ.

Live Tv

Leave a Reply

Your email address will not be published.

Back to top button