ಸಾವಿರಾರು ಕಾರ್ಯಕರ್ತರು ಭಾಗಿ
INDIA ಒಕ್ಕೂಟದ ಪ್ರತಿಭಟನಾ ರ್ಯಾಲಿಯಲ್ಲಿ ಭಾಗಿಯಾಗಲು ಸಾವಿರಾರು ಸಂಖ್ಯೆಯಲ್ಲಿ ಸೇರಿದ ಕಾರ್ಯಕರ್ತರು
ಬಿಗಿ ಭದ್ರತೆ
ಲಕ್ಷಕ್ಕೂ ಅಧಿಕ ಸಂಖ್ಯೆಯ ಜನರು ಸೇರುವ ನಿರೀಕ್ಷೆಯಿರುವುದರಿಂದ ದೆಹಲಿ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ. 4,000ಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಇಡೀ ಕಾರ್ಯಕ್ರಮದ ಮೇಲೆ ನಿಗಾ ಇಡಲು 200ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.
“ರ್ಯಾಲಿಯಲ್ಲಿ ಭಾಗವಹಿಸುವವರು ಇಲ್ಲಿಯೇ ತಮ್ಮ ಖರೀದಿಯನ್ನು ಮಾಡಬೇಕೆಂದು ನಾವು ಮನವಿ ಮಾಡಿದ್ದೆವು, ಇದರಿಂದ ಅಂಗಡಿಕಾರರಿಗೆ ಅನುಕೂಲವಾಗುತ್ತಿತ್ತು. ಆದರೆ ಕನ್ನಾಟ್ ಪ್ಲೇಸ್ಗೆ ತಲುಪಿದಾಗ, ಬಿಜೆಪಿ ಬಲವಂತವಾಗಿ ಎಲ್ಲಾ ಅಂಗಡಿಗಳನ್ನು ಮುಚ್ಚಿಸಿದೆ ಎಂದು ನಮಗೆ ತಿಳಿಯಿತು.ಬಿಜೆಪಿಯು ಅಂಗಡಿಕಾರರಿಗೆ ಹೇಗೆ ನಷ್ಟವನ್ನು ಉಂಟುಮಾಡುತ್ತಿದೆ ಎಂಬುದನ್ನು ದೇಶವೇ ನೋಡುತ್ತಿದೆ” – ರಾಹುಲ್ ಗಾಂಧಿ
ತೆರೆದ ಬಸ್ಸಿನಲ್ಲಿ ತೆರಳುತ್ತಿರುವ ಶಶಿ ತರೂರ್ ಮತ್ತು ಕಾಂಗ್ರೆಸ್ ನಾಯಕರು
ತೆರೆದ ವಾಹನದಲ್ಲಿ ರಾಮಲೀಲಾ ಮೈದಾನಕ್ಕೆ ತೆರಳುತ್ತಿರುವ ರಾಹುಲ್ ಗಾಂಧಿ ಮತ್ತು ಇತರ ನಾಯಕರು
ಇಂಡಿಯಾ ಒಕ್ಕೂಟದ ವತಿಯಿಂದ ಎಸ್ಐಆರ್, ಮತಗಳ್ಳತನ ವಿರುದ್ಧ ಬೃಹತ್ ಪ್ರತಿಭಟನೆ ಆರಂಭವಾಗಿದೆ. ಕನ್ನಾಟ್ ಪ್ಲೇಸ್ನಿಂದ `ಚಲೋ ದಿಲ್ಲಿ’ ಮೆರವಣಿಗೆ ಆರಂಭವಾಗಿದೆ. ಐತಿಹಾಸಿಕ ರಾಮಲೀಲಾ ಮೈದಾನದವರೆಗೆ ಮೆರವಣಿಗೆ ಸಾಗಿದ ಬಳಿಕ ಸಭಾ ಕಾರ್ಯಕ್ರಮ ನಡೆಯಲಿದೆ.
