ದುಬೈ: ಹಾಂಕಾಂಗ್ ವಿರುದ್ಧ ಭರ್ಜರಿ 137 ರನ್‌ಗಳ ಜಯದೊಂದಿಗೆ ಏಷ್ಯಾಕಪ್‌ನಲ್ಲಿ(Asia Cup) ಭಾರತ ಸೆಮಿಫೈನಲ್ (Semi Final) ಪ್ರವೇಶಿಸಿದೆ.
ಸ್ಮೃತಿ ಮಂಧನಾ(Smriti Mandhana) ಅವರ ಸ್ಫೋಟಕ ಶತಕ ಶತಕದ ನೆರವಿನಿಂದ ಭಾರತ(India) 5 ವಿಕೆಟ್ ನಷ್ಟಕ್ಕೆ 193 ರನ್ ಹೊಡೆಯಿತು. ಕಠಿಣ ಸವಾಲನ್ನು ಬೆನ್ನಟ್ಟಿದ ಹಾಂಕಾಂಗ್ 16.2 ಓವರ್‌ಗಳಲ್ಲಿ 56 ರನ್‌ಗಳಿಗೆ ಆಲೌಟ್ ಆಯ್ತು.
ಈ ಗೆಲುವಿನೊಂದಿಗೆ ಪಾಕ್ ವಿರುದ್ಧ ಪಂದ್ಯ ಬಾಕಿ ಇರುವಂತೆಯೇ ಭಾರತ ಎ ಗುಂಪಿನಲ್ಲಿ ಅಗ್ರಸ್ಥಾನಿಯಾಗಿ ಸೆಮಿ ಪ್ರವೇಶಿಸಿದೆ. ಇದಕ್ಕೂ ಮೊದಲು ಥಾಯ್ಲೆಂಡ್ ವಿರುದ್ಧ 94 ರನ್‌ಗಳ ಅಂತರದಿಂದ ಗೆದ್ದುಕೊಂಡಿತು.
Smriti Mandhana becomes the first Indian woman to score two T20I centuries — with Vivek Razdan’s call adding that little extra magic. 🎙️✨
Watch India vs Hong Kong, China LIVE on Sony Sports Network TV channels & Sony LIV.#SonySportsNetwork #SonyLIV #DPWorldWomensAsiaCup2026… pic.twitter.com/8vU13SOpg8
— Sony Sports Network (@SonySportsNetwk) September 3, 2026
ಭಾರತದ ಬಿಗು ಬೌಲಿಂಗ್ ದಾಳಿಗೆ ಆರಂಭದಲ್ಲೇ ಪಲ್ಟಿ ಹೊಡೆದ ಹಾಂಕಾಂಗ್ ಪರ ನಾಯಕಿ ನತಾಶಾ ಮೈಲ್ಸ್ 15 ರನ್, ಮರೀನಾ ಲ್ಯಾಂಪ್ಲೌ 14 ರನ್ ಹೊಡೆದು ಔಟಾದರು.
ಭಾರತದ ಪರ ದೀಪ್ತಿ ಶರ್ಮಾ 3 ವಿಕೆಟ್ ಕಿತ್ತರೆ ನಂದಿನಿ ಶರ್ಮಾ, ಶ್ರೀ ಚರಣಿ, ಪ್ರೇಮಾ ರಾವತ್ ತಲಾ 2 ವಿಕೆಟ್ ಪಡೆದರು. ಇದನ್ನೂ ಓದಿ: ಶತಕ ಬಾರಿಸಿ ವಿಶ್ವ ದಾಖಲೆ ಬರೆದ ಸ್ಮೃತಿ ಮಂಧನಾ
Nandni Sharma gets India on the board! 🔥
Watch India vs Hong Kong, China LIVE on Sony Sports Network TV channels & Sony LIV.#SonySportsNetwork #SonyLIV #DPWorldWomensAsiaCup2026 #NotAGentlemansGame pic.twitter.com/ozFdv4pGnM
— Sony Sports Network (@SonySportsNetwk) September 3, 2026
ಟಾಸ್ ಸೋತು ಮೊದಲು ಬ್ಯಾಟ್ ಬೀಸಿದ ಭಾರತದ ಪರ ಮೊದಲ ವಿಕೆಟಿಗೆ ಶಫಾಲಿ ವರ್ಮಾ ಮತ್ತು ಸ್ಮೃತಿ ಮಂಧಾನ 74 ರನ್‌ಗಳ ಜೊತೆಯಾಟವಾಡಿದರು. ಶಫಾಲಿ ವರ್ಮಾ 28 ರನ್ ಗಳಿಸಿ ಔಟಾದರು.
ಭಾರತ ವಿಕೆಟ್ ಬಿದ್ದರೂ ಬಂಡೆಯಂತೆ ಆಟವಾಡಿದ ಸ್ಮೃತಿ ಮಂಧನಾ 40 ಎಸೆತಗಳಲ್ಲಿ ಶತಕ ಹೊಡೆದರೆ ನಂತರ 17 ಎಸೆತಗಳಲ್ಲಿ 50 ರನ್ ಹೊಡೆದು ಶತಕ ಬಾರಿಸಿದರು. ಅಂತಿಮವಾಗಿ 20ನೇ ಓವರ್‌ನ ಮೂರನೇ ಎಸೆತದಲ್ಲಿ 124 ರನ್(64 ಎಸೆತ, 14 ಬೌಂಡರಿ, 7 ಸಿಕ್ಸ್) ಸಿಡಿಸಿ ರನೌಟ್ ಆದರು.
Smriti Mandhana cooked up an absolute storm in Dubai tonight! 💯
Watch India vs Hong Kong, China LIVE on Sony Sports Network TV channels & Sony LIV.#SonySportsNetwork #SonyLIV #DPWorldWomensAsiaCup2026 #NotAGentlemansGame pic.twitter.com/v4GjX9dY7B
— Sony Sports Network (@SonySportsNetwk) September 3, 2026
