ದುಬೈ: ಹಾಂಗ್‌ಕಾಂಗ್ ವಿರುದ್ಧದ ಪಂದ್ಯದಲ್ಲಿ ರನ್ ಮಳೆ ಸುರಿಸುವ ಮೂಲಕ ಅಂತಾರಾಷ್ಟೀಯ ಮಹಿಳಾ ಕ್ರಿಕೆಟ್ ಇತಿಹಾಸದಲ್ಲೇ ಅತೀ ಹೆಚ್ಚು ರನ್ ಗಳಿಸಿದ ಆಟಗಾರ್ತಿಯಾಗಿ ಸ್ಮೃತಿ ಮಂಧನಾ (Smriti Mandhana) ಹೊರಹೊಮ್ಮಿದ್ದಾರೆ.
ಸದ್ಯ ದುಬೈನಲ್ಲಿ 2026ರ ಮಹಿಳಾ ಏಷ್ಯಾ ಕಪ್ (Women’s Asia Cup) ಟೂರ್ನಿ ನಡೆಯುತ್ತಿದೆ. ಇಂದು ಭಾರತ (India) ಹಾಗೂ ಹಾಂಗ್‌ಕಾಂಗ್ (Hong Kong) ವಿರುದ್ಧ ಪಂದ್ಯದಲ್ಲಿ ಸ್ಮೃತಿ ಮಂಧನಾ 64 ಎಸೆತಗಳಲ್ಲಿ ಭರ್ಜರಿ 7 ಸಿಕ್ಸ್ ಹಾಗೂ 14 ಬೌಂಡರಿ ಬಾರಿಸುವ ಮೂಲಕ 124 ರನ್ ಚಚ್ಚಿದರು. ಈ ಮೂಲಕ ಮಿಥಾಲಿ ರಾಜ್ ಹೆಸರಿನಲ್ಲಿದ್ದ ದಾಖಲೆ ಮುರಿದು ಅಂತಾರಾಷ್ಟ್ರೀಯ ಮಹಿಳಾ ಕ್ರಿಕೆಟ್ ಇತಿಹಾಸದಲ್ಲಿ ಅತೀ ಹೆಚ್ಚು ರನ್ ಗಳಿಸಿದ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದನ್ನೂ ಓದಿ: ಬೆಂಗಳೂರು-ಮಂಗಳೂರು ಮಧ್ಯೆ ಸೆ.5ಕ್ಕೆ ವಂದೇ ಭಾರತ್ ಪ್ರಾಯೋಗಿಕ ಸಂಚಾರ
🚨 Record Alert 🚨
Smriti Mandhana is now the leading run-getter in women’s internationals 🫡🫡
She surpasses former #TeamIndia captain Mithali Raj 👏👏#WomensAsiaCup | #INDvHK pic.twitter.com/qqxNYJcunz
— BCCI Women (@BCCIWomen) September 3, 2026
ಈವರೆಗೂ 10,868 ರನ್‌ಗಳಿಂದ ಮಿಥಾಲಿ ರಾಜ್ ಮೊದಲ ಸ್ಥಾನದಲ್ಲಿದ್ದರು. ಇದೀಗ ಸ್ಮೃತಿ ಮಂಧನಾ 10,880 ರನ್ ಗಳಿಸುವ ಮೂಲಕ ಅಗ್ರಸ್ಥಾನಕ್ಕೇರಿದ್ದಾರೆ. ಇನ್ನೂ ಇದೇ ಇನ್ನಿಂಗ್‌ನಲ್ಲಿ ಸ್ಮೃತಿ ಮಂಧನಾ ಅಂತಾರಾಷ್ಟ್ರೀಯ ಪಂದ್ಯವೊಂದಲ್ಲಿ ತಮ್ಮ 18ನೇ ಶತಕವನ್ನು ಬಾರಿಸಿದ್ದಾರೆ. ಅಲ್ಲದೇ ಟಿ20 ಏಷ್ಯಾ ಕಪ್‌ನಲ್ಲಿ ಅತೀ ಹೆಚ್ಚು ರನ್ ಗಳಿಸಿದ ದಾಖಲೆಯೂ ಇವರ ಹೆಸರಿನಲ್ಲಿದೆ.
ಮಹಿಳಾ ಟಿ20 ಇತಿಹಾಸದಲ್ಲಿ ಭಾರತದ ಪರ 95 ಸಿಕ್ಸ್ ಬಾರಿಸುವ ಮೂಲಕ ಅತೀ ಹೆಚ್ಚು ಸಿಕ್ಸ್ರ್ ಬಾರಿಸಿದ ಆಟಗಾರ್ತಿ ಎಂಬ ದಾಖಲೆ ಬರೆದಿದ್ದಾರೆ.ಇದನ್ನೂ ಓದಿ: ಬೆಳಗಾವಿ ನಗರ ನೂತನ ಪೊಲೀಸ್ ಆಯುಕ್ತರಾಗಿ ಪ್ರಕಾಶ್ ನಿಕ್ಕಂ ಅಧಿಕಾರ ಸ್ವೀಕಾರ
🔹 Most runs in Women’s international cricket
🔹 Highest individual score in Women’s T20 Asia Cup
🔹 Most 100s in Women’s international cricket
Talk about a record-breaking knock from Vice-captain Smriti Mandhana 🫡🫡#TeamIndia | #WomensAsiaCup | #INDvHK pic.twitter.com/oCizHtSjSz
— BCCI Women (@BCCIWomen) September 3, 2026
