Connect with us

Belgaum

ಪ್ರಿಯಕರನ ಜೊತೆ ರೆಡ್ ಹ್ಯಾಂಡಾಗಿ ಸಿಕ್ಕ ಪತ್ನಿ ಪತಿಯಿಂದಲೇ ಕೊಲೆ

Published

on

Share this

ಬೆಳಗಾವಿ: ಪ್ರಿಯಕರನ ಜೊತೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಪತ್ನಿಯನ್ನು ಪತಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ದಾರುಣವಾಗಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಸದಲಗಾ ಪಟ್ಟಣದ ಗೌಂಡಿ ಫ್ಲಾಟ್‍ನಲ್ಲಿ ನಡೆದಿದೆ.

ಸುನಿತಾ ನಾನಾಸಾಬ ಕೋಗಲೆ (35) ಕೊಲೆಯಾದ ಮಹಿಳೆ. ಸುನಿತಾ ಚಹಾಪುಡಿ ವ್ಯಾಪಾರ ಮಾಡುತ್ತಿದ್ದ ನಾನಾಸಾಬ ಎಂಬುವರನ್ನು ಮದುವೆಯಾಗಿದ್ದಳು. ಆದರೆ ಸುನಿತಾ ರಾಹುಲ್ ಮರಜ ಎಂಬುವನ ಜೊತೆ ಅನೈತಿಕ ಸಂಬಂಧವನ್ನು ಇಟ್ಟುಕೊಂಡಿದ್ದಳು.

ಇಂದು ಚಹಾಪುಡಿ ವ್ಯಾಪಾರ ಮಾಡಲು ಪತಿ ಹೋಗಿದ್ದರು. ಇದೇ ಸಂದರ್ಭದಲ್ಲಿ ಮನೆಯಲ್ಲಿ ಯಾರೂ ಇಲ್ಲದ ಕಾರಣ ಪ್ರಿಯಕರ ರಾಹುಲ್ ಅನ್ನು ಮನೆಗೆ ಕರೆಸಿದ್ದಾಳೆ. ಆದರೆ ನಾನಾಸಾಬ ಬೇಗನೇ ಮನೆಗೆ ಬಂದಿದ್ದಾರೆ. ತನ್ನ ಪತ್ನಿ ಪ್ರಿಯಕರನ ಜೊತೆ ಅನೈತಿಕ ಸಂಬಂಧ ಬೆಳೆಸಿದ್ದನ್ನು ನೋಡಿ ಕೋಪಗೊಂಡು ಕಲ್ಲನ್ನು ತಂದು ಸುನಿತಾಳ ತಲೆಯ ಮೇಲೆ ಎತ್ತಿ ಹಾಕಿದ್ದಾರೆ. ತಲೆಗೆ ಗಂಭೀರವಾಗಿ ಏಟು ಬಿದ್ದ ಪರಿಣಾಮ ಸುನಿತಾ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ.

ನಾನಾಸಾಬ ಸ್ಥಳದಲ್ಲೇ ಇದ್ದ ಪ್ರಿಯಕರ ರಾಹುಲ್ ಗೂ ಹಿಗ್ಗಾ ಮುಗ್ಗಾ ಥಳಿಸಿದ್ದು, ಸದ್ಯಕ್ಕೆ ಗಾಯಾಳು ರಾಹುಲ್ ನನ್ನು ಸಮೀಪದ ಚಿಕ್ಕೋಡಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಸದಲಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Click to comment

Leave a Reply

Your email address will not be published. Required fields are marked *

Advertisement