ಮುಂಬೈ: ಐಐಟಿ ಬಾಂಬೆ (IIT Bombay) ಕ್ಯಾಂಪಸ್‌ನ ಹಾಸ್ಟೆಲ್‌ನಲ್ಲಿ ಶವವಾಗಿ ಪತ್ತೆಯಾಗಿದ್ದ ವಿದ್ಯಾರ್ಥಿಯ ಕುರಿತು ಈ ಹಿಂದೆ ನೀಡಿದ್ದ ಹೇಳಿಕೆ ಬಗ್ಗೆ ಸಂಸ್ಥೆ ಇದೀಗ ಕ್ಷಮೆಯಾಚಿಸಿದೆ. ಸದ್ಯ ಪ್ರೊಫೆಸರ್ ಅವರನ್ನು ಅವರ ಡೀನ್ ಹುದ್ದೆಯಿಂದ ಕೆಳಗಿಳಿಸಲಾಗಿದೆ.
ಶುಕ್ರವಾರ (ಸೆ.18) ಐಐಟಿ ಬಾಂಬೆ ಕ್ಯಾಂಪಸ್‌ನ ಹಾಸ್ಟೆಲ್‌ನಲ್ಲಿ ಬಿ.ಟೆಕ್ (B.Tech) ದ್ವಿತೀಯ ವರ್ಷದ ವಿದ್ಯಾರ್ಥಿ ಸಾಹಿಲ್ ರವೀಂದ್ರ ವಾಕೋಡೆ ಶವವಾಗಿ ಪತ್ತೆಯಾಗಿದ್ದ. ಇದರ ಬೆನ್ನಲ್ಲೇ ಇದೀಗ ಪ್ರೊಫೆಸರ್ ಸೂರ್ಯನಾರಾಯಣ ದೂಳ್ಳಾ ಅವರನ್ನು ಡೀನ್ ಹುದ್ದೆಯಿಂದ ಸಂಸ್ಥೆ ತೆಗೆದುಹಾಕಿದೆ. ಇದನ್ನೂ ಓದಿ: ಪರೀಕ್ಷೆಯಲ್ಲಿ ChatGPT ಬಳಕೆ – ಪ್ರೊಫೆಸರ್‌ಗೆ ಸಿಕ್ಕಿಬಿದ್ದ ಐಐಟಿ ವಿದ್ಯಾರ್ಥಿ ಆತ್ಮಹತ್ಯೆ
ಈ ಸಂಬಂಧ ಸಂಸ್ಥೆ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ. ಸಾಹಿಲ್ ಸಾವಿನ ಬಗ್ಗೆ ನಾವು ಮೊದಲು ನೀಡಿದ್ದ ಹೇಳಿಕೆಗಳಿಗೆ ಕ್ಷಮೆಯಾಚಿಸುತ್ತೇವೆ. ಈ ಘಟನೆಯ ಬಗ್ಗೆ ಸರಿಯಾದ ತನಿಖೆ ನಡೆಯಬೇಕಿದೆ. ತನಿಖೆ ನಡೆಯುತ್ತಿರುವಾಗ ಹಿಂದಿನ ಘಟನೆಗಳ ಬಗ್ಗೆ ನಾವು ಯಾವುದೇ ತೀರ್ಮಾನಕ್ಕೆ ಬರುವುದು ಸರಿಯಲ್ಲ ಎಂದಿದೆ.
We apologise for the statements contained in our earlier communication concerning the circumstances surrounding the unfortunate demise of Sahil.
The details and circumstances leading up to the incident remain subject to investigation by the appropriate authorities. In view of…
— IIT Bombay (@iitbombay) September 21, 2026
ಇದೇ ವೇಳೆ ಐಐಟಿ ಬಾಂಬೆ ನಿರ್ದೇಶಕ ಶಿರೀಶ್ ಕೇದಾರ್ ಅವರು ರಾಜೀನಾಮೆ ನೀಡುವುದಾಗಿ ಬಂದಿರುವ ವರದಿಗಳನ್ನು ಸಂಸ್ಥೆ ತಳ್ಳಿಹಾಕಿದೆ. ನಿರ್ದೇಶಕರು ರಾಜೀನಾಮೆ ನೀಡಿಲ್ಲ, ಆ ಸುದ್ದಿಗಳು ಸುಳ್ಳು ಎಂದು ಸ್ಪಷ್ಟನೆ ನೀಡಿದೆ. ಆದರೆ, ಭಾನುವಾರ (ಸೆ.20) ರಾತ್ರಿ ಪ್ರತಿಭಟನಾಕಾರರ ಮುಂದೆ ಮಾತನಾಡಿದ್ದ ಕೇದಾರ್, ತಾವು ಹುದ್ದೆಯಿಂದ ಕೆಳಕ್ಕಿಳಿಯುವುದಾಗಿ ಹೇಳಿ, ವಿದ್ಯಾರ್ಥಿಗಳ 18 ಬೇಡಿಕೆಗಳ ಪಟ್ಟಿಗೆ ಸಹಿ ಹಾಕಿದ್ದರು.ಇದನ್ನೂ ಓದಿ: ಮಮತಾಗೆ ಮತ್ತೊಂದು ಶಾಕ್ – ರೆಜಿನಗರ ಕ್ಷೇತ್ರದ ಅಭ್ಯರ್ಥಿ ಕಣದಿಂದ ಔಟ್!
Director IIT Bombay has NOT resigned.
We categorically state that the related news is false. https://t.co/Prxomzm7Ux— IIT Bombay (@iitbombay) September 21, 2026
ಇಂದು (ಸೆ.21) ನಿರ್ದೇಶಕರು ಮತ್ತು ವಿದ್ಯಾರ್ಥಿಗಳು ಮತ್ತೊಮ್ಮೆ ಸಭೆ ನಡೆಸಿದ್ದು, ಒಟ್ಟು 18 ಬೇಡಿಕೆಗಳಲ್ಲಿ ಎರಡು ಬೇಡಿಕೆಗಳು ಈಡೇರಿವೆ. ಇಂದು ಸಂಜೆ ನಿರ್ದೇಶಕರು ಸುದ್ದಿಗೋಷ್ಠಿ ನಡೆಸುವ ಸಾಧ್ಯತೆಯಿದೆ.
ಇನ್ನೂ ಪ್ರೊಫೆಸರ್ ದೂಳ್ಳಾ ಅವರು ಕೇವಲ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಿದ್ದು, ಅವರ ಮೇಲಿನ ಟೀಕೆಗಳು ಅವರನ್ನು ಚಿಂತೆಗೀಡು ಮಾಡಿವೆ. ಸದ್ಯ ಮುಂಬೈ ಅಪರಾಧ ವಿಭಾಗದ ಪೊಲೀಸರು ತನಿಖೆ ಕೈಗೊಂಡಿದ್ದು, ವಿದ್ಯಾರ್ಥಿಯ ಕೊಠಡಿಯಲ್ಲಿ ಯಾವುದೇ ಡೆತ್‌ನೋಟ್ ಸಿಗದ ಕಾರಣ ಮೊಬೈಲ್ ಫೋನ್ ಪರಿಶೀಲಿಸುತ್ತಿದ್ದಾರೆ. ಪ್ರೊಫೆಸರ್ ದೂಳ್ಳಾ ಸೇರಿದಂತೆ ಇತರ ವ್ಯಕ್ತಿಗಳಿಗೆ ವಿಚಾರಣೆಗೆ ಬರುವಂತೆ ನೋಟಿಸ್ ನೀಡುವ ಸಾಧ್ಯತೆಯಿದೆ.ಇದನ್ನೂ ಓದಿ: ಅಯೋಗ್ಯ, ನಾಲಾಯಕ್, ಮುಠ್ಠಾಳ, ಬಾಯಿ ತೆವಲಿಗೆ ಮಾತು : ಪ್ರತಾಪ್ ವಿರುದ್ಧ ಪ್ರದೀಪ್ ಆಕ್ರೋಶ
ಏನಿದು ಪ್ರಕರಣ?
ಪರೀಕ್ಷೆಯೊಂದರ ವೇಳೆ ಸಾಹಿಲ್ ಮೊಬೈಲ್ ಮತ್ತು ಚಾಟ್‌ಜಿಪಿಟಿ ಬಳಸುತ್ತ ಸಿಕ್ಕಿಬಿದ್ದ ಕೆಲವೇ ಗಂಟೆಗಳಲ್ಲಿ ಕ್ಯಾಂಪಸ್‌ನ ಹಾಸ್ಟೆಲ್‌ನಲ್ಲಿ ಶವವಾಗಿ ಪತ್ತೆಯಾಗಿದ್ದ. ವಿದ್ಯಾರ್ಥಿಯು ಅನಧಿಕೃತವಾಗಿ ಫೋನ್ ಬಳಸಿದ್ದರಿಂದ ಪರೀಕ್ಷಾ ಮೇಲ್ವಿಚಾರಕ ಸೂರ್ಯನಾರಾಯಣ ದೂಳ್ಳಾ ಅವರು ನಿಯಮದಂತೆ ಮೇಲಧಿಕಾರಿಗಳಿಗೆ ವರದಿ ಮಾಡಿದ್ದರು.ಇದನ್ನೂ ಓದಿ: ಬಿಡದಿ ಟೌನ್‌ಶಿಪ್ ವಿರುದ್ಧ ಮುಂದುವರಿದ ಹೋರಾಟ – ಉಪವಾಸ ಸತ್ಯಾಗ್ರಹ ಆರಂಭಿಸಿದ ರೈತರು

