– ಎಷ್ಟೇ ಬುಲೆಟ್ ಪ್ರೂಫ್ ಗಾಜು ಬಳಸಿದ್ರೂ ಗುಂಡಿಕ್ಕಿ ಕೊಲ್ಲುವುದಾಗಿ ಎಚ್ಚರಿಕೆ
ಮುಂಬೈ: ದೆಹಲಿ ಪೊಲೀಸರು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ (Lawrence Bishnoi Gang) ಜೊತೆ ಲಿಂಕ್ ಹೊಂದಿದ ಇಬ್ಬರನ್ನು ಅರೆಸ್ಟ್ ಮಾಡಿದ ಬೆನ್ನಲ್ಲೇ ಗ್ಯಾಂಗ್ಸ್ಟರ್ ಗೋಲ್ಡಿ ಧಿಲ್ಲೋನ್ (Gangster Goldy Dhillon) ಎಂಬಾತ ಬಾಲಿವುಡ್ ನಟರಾದ ಅಮಿತಾಬ್ ಬಚ್ಚನ್ (Amitabh Bachchan) ಹಾಗೂ ಅವರ ಮಗ ಅಭಿಷೇಕ್ ಬಚ್ಚನ್ಗೆ (Abhishek Bachchan) ಜೀವ ಬೆದರಿಕೆ ಹಾಕಿದ್ದಾನೆ.
ಬೆದರಿಕೆ ಹಾಕಿ ಗ್ಯಾಂಗ್ಸ್ಟರ್ ಗೋಲ್ಡಿ ಧಿಲ್ಲೋನ್ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಜೊತೆಗೆ ಲಿಂಕ್ ಹೊಂದಿದ ಇಬ್ಬರು ಶೂಟರ್ಗಳಾದ ವಿಕಾಸ್ ಠಾಕೂರ್ ಮತ್ತು ದೀಪಕ್ ಸಿಂಗ್ ಬಂಧನದಿಂದ ನಮ್ಮ ಪ್ಲ್ಯಾನ್ನಲ್ಲಿ ಏನೂ ಬದಲಾವಣೆಯಾಗಲ್ಲ. ಮುಂಬೈನಲ್ಲಿ 200 ಜನ ರೆಡಿಯಾಗಿದ್ದಾರೆ ಎಂದು ಎಚ್ಚರಿಸಿದ್ದಾನೆ. ಇದನ್ನೂ ಓದಿ: ಮೇಕೆದಾಟು ಯೋಜನೆ ನಮ್ಮ ಹಕ್ಕು, ಹೆಚ್ಡಿಕೆ ನೇತೃತ್ವದಲ್ಲೇ ದೆಹಲಿಗೆ ಹೋಗೋಣ, ಅನುಮತಿ ಕೊಡಿಸಲಿ: ಡಿ.ಕೆ.ಸುರೇಶ್
1984ರ ಸಿಖ್ ವಿರೋಧಿ ಗಲಭೆಗಳನ್ನು ಉಲ್ಲೇಖಿಸಿದ ಧಿಲ್ಲಾನ್, ಆ ಹಿಂಸಾಚಾರಕ್ಕೆ ಜವಾಬ್ದಾರರಾದವರನ್ನು ಎಂದಿಗೂ ಕ್ಷಮಿಸುವುದಿಲ್ಲ. ಜಗತ್ತಿನ ಯಾವುದೇ ಮೂಲೆಯಲ್ಲಿದ್ದರೂ, ಸಿಖ್ ಸಮುದಾಯದ ವಿರುದ್ಧ ಹೇಳಿಕೆ ನೀಡುವವರನ್ನು ಬಿಡುವುದಿಲ್ಲ. ಇದರ ಜೊತೆಗೆ ಅಮಿತಾಬ್ ಮತ್ತು ಅಭಿಷೇಕ್ ಬಚ್ಚನ್ ಅವರು ಎಷ್ಟೇ ಬುಲೆಟ್ ಪ್ರೂಫ್ ಗಾಜು ಅಥವಾ ಭದ್ರತೆ ಬಳಸಿದರೂ ಅವರನ್ನು ಗುಂಡಿಕ್ಕಿ ಕೊಲ್ಲುವುದಾಗಿ ವಾರ್ನಿಂಗ್ ನೀಡಿದ್ದಾನೆ.
ಈ ಹಿಂದೆ ಜಲ್ಸಾ ಮನೆಗೆ ಮೂರು ಬಾಂಬ್ ಬೆದರಿಕೆ ಇಮೇಲ್ಗಳು ಬಂದಿದ್ದವು. ಇದಕ್ಕೂ ಮುನ್ನ ಅಮಿತಾಬ್ ಬಚ್ಚನ್ ಅವರ ಜಲ್ಸಾ ಮನೆ ಹೊರಗೆ ಗುಂಡು ಹಾರಿಸಲು ಸಂಚು ರೂಪಿಸಿದ್ದರು ಎಂಬ ಆರೋಪದ ಮೇಲೆ ದೆಹಲಿ ಪೊಲೀಸರು ಇಬ್ಬರನ್ನು ಬಂಧಿಸಿದ್ದರು.ಇದನ್ನೂ ಓದಿ: 29 ಎಸೆತಗಳಲ್ಲಿ ಸ್ಫೋಟಕ 82 ರನ್ ಚಚ್ಚಿದ ಸೂರ್ಯ – ಮುಂಬೈಗೆ 8 ವಿಕೆಟ್ಗಳ ಭರ್ಜರಿ ಜಯ
