ನವದೆಹಲಿ: ಕಾಂಗ್ರೆಸ್ (Congress) ನಾಯಕ ರಾಹುಲ್ ಗಾಂಧಿಯವರು (Rahul Gandhi) ತಮ್ಮ ವೈಯಕ್ತಿಕ ಜೀವನದ ಅಪರೂಪದ ನೆನಪೊಂದನ್ನು ಹಂಚಿಕೊಂಡಿದ್ದಾರೆ. ಹಿಂದೆ ಅವರ ತಂದೆ, ತಾಯಿ ಭೇಟಿ ನೀಡಿದ್ದ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ರೆಸ್ಟೋರೆಂಟ್ಗೆ ತಮ್ಮ ಗೆಳತಿಯ (Girlfriend) ಜೊತೆ ಹೋಗಿದ್ದ ಕ್ಷಣಗಳನ್ನು ನೆನಪಿಸಿಕೊಂಡಿದ್ದಾರೆ.
ಸೋನಿಯಾ ಗಾಂಧಿಯವರ (Sonia Gandhi) ಆತ್ಮಕಥೆ (Belonging: A Journey of Love) ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ತಾವು ಚಿಕ್ಕವರಿದ್ದಾಗ ಕೇಂಬ್ರಿಡ್ಜ್ನಲ್ಲಿ ತೆಗೆದ ಫೋಟೋವೊಂದರಲ್ಲಿ ಅಮ್ಮ ಉಯ್ಯಾಲೆ ಆಡುತ್ತಿದ್ದರು ಎಂದು ನೆನಪಿಸಿಕೊಂಡಿದ್ದಾರೆ. ಮುಂದುವರಿದು, ತಮ್ಮ ತಂದೆ-ತಾಯಿ ಮೊದಲ ಬಾರಿಗೆ ಭೇಟಿಯಾದ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ರೆಸ್ಟೋರೆಂಟ್ಗೆ ಹಲವು ವರ್ಷಗಳ ನಂತರ ತಾವು ಗೆಳತಿಯೊಂದಿಗೆ ಹೋದ ಸವಿನೆನಪನ್ನು ಮೆಲುಕು ಹಾಕಿದ್ದಾರೆ. ಇದನ್ನೂ ಓದಿ: ಸಿನಿಮಾ ಆಗಿ ಬರಲಿದೆ ಸೋನಿಯಾ ಗಾಂಧಿ ಆತ್ಮಚರಿತ್ರೆ
ರೆಸ್ಟೋರೆಂಟ್ ಒಳಗೆ ಹೋದಾಗ, ಅಲ್ಲಿದ್ದ ಸಿಬ್ಬಂದಿಯೊಬ್ಬರು ಮೆನ್ಯೂ ತಂದರು. ಅವರ ಬಳಿ, ‘ನನ್ನ ಹೆತ್ತವರು ಈ ರೆಸ್ಟೋರೆಂಟ್ನಲ್ಲೇ ಭೇಟಿಯಾಗಿದ್ದರು’ ಎಂದು ಹೇಳಿದೆ. ಅವರು ನನ್ನತ್ತ ನೋಡಿ, ‘ಓಹ್, ಅವರು ನನಗೆ ಗೊತ್ತು’ ಎಂದರು. ಆಗ ನಾನು, ‘ಅವರ ಬಗ್ಗೆ ನಿನಗೆ ಏನು ಗೊತ್ತು?’ ಎಂದು ಕೇಳಿದೆ. ಅದಕ್ಕೆ, ನೀವು ಯಾರ ಬಗ್ಗೆ ಮಾತನಾಡುತ್ತಿದ್ದೀರಿ ಎಂಬುದು ನನಗೆ ಗೊತ್ತಾಯ್ತು ಎಂದು ಹೇಳಿದ್ದ ಆ ನೆನಪುಗಳನ್ನು ತೆರದಿಟ್ಟಿದ್ದಾರೆ.
ಈ ಬಗ್ಗೆ ವರದಿಗಾರರು ಕೇಳಿದ ಪ್ರಶ್ನೆಗೆ, ರಾಹುಲ್ ಗಾಂಧಿ ಮುಗುಳ್ನಗುತ್ತಾ, ಅಭೀ ಭಿ ಮೇರಿ ದೋಸ್ತ ಹೈ (ಅವಳು ಈಗ ತನ್ನ ಸ್ನೇಹಿತೆ) ಎಂದು ಕುಚ್ ಕುಚ್ ಹೋತಾ ಹೈ ಚಿತ್ರದ ಶೈಲಿಯಲ್ಲಿ ಹೇಳಿದ್ದಾರೆ. ಈ ವೇಳೆ ಅಲ್ಲಿದ್ದವರು ನಗಾಡಿದ್ದಾರೆ. ಅವರ ತಾಯಿ ಸೋನಿಯಾ ಗಾಂಧಿಯವರೂ ಕೂಡ ಮುಗುಳುನಗೆ ಬೀರಿದ್ದಾರೆ. ಇದನ್ನೂ ಓದಿ: ಸೋನಿಯಾ ಗಾಂಧಿ ಆತ್ಮಕಥೆ ಪುಸ್ತಕ ಮಾರುಕಟ್ಟೆಗೆ – ರಾಜಕೀಯ ಜೀವನದ ಹತ್ತಾರು ಕೌತುಕಗಳು ಬಹಿರಂಗ
