ನವದೆಹಲಿ/ಚೆನ್ನೈ: ಇತ್ತೀಚಿಗಷ್ಟೇ ಬಿಡುಗಡೆ ಆಗಿರುವ ಕಾಂಗ್ರೆಸ್ನ ಹಿರಿಯ ನಾಯಕಿ ಸೋನಿಯಾ ಗಾಂಧಿ (Sonia Gandhi) ಅವರ ಆತ್ಮಚರಿತ್ರೆ ಇದೀಗ ಸಿನಿಮಾ ಆಗಿ ಬರಲಿದೆ.
ಮಂಗಳವಾರವಷ್ಟೇ (ನ.10) ಬಿಡುಗಡೆ ಆಗಿರುವ ಬಿಲಾಂಗಿಂಗ್ : ಎ ಜರ್ನಿ ಆಫ್ ಲವ್ (Belonging A Jounery of Love) ಪುಸ್ತಕ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಇದೀಗ ಅದೇ ಪುಸ್ತಕವನ್ನು ಆಧರಿಸಿ ಸಿನಿಮಾ ನಿರ್ಮಾಣ ಮಾಡುವುದಾಗಿ ಘೋಷಣೆ ಮಾಡಲಾಗಿದೆ.ಇದನ್ನೂ ಓದಿ: ವಾಜಪೇಯಿ ಸರ್ಕಾರವನ್ನು ಉರುಳಿಸಿದ್ದು ಯಾಕೆ – ಆತ್ಮಚರಿತ್ರೆಯಲ್ಲಿ ಕಥೆ ಬಿಚ್ಚಿಟ್ಟ ಸೋನಿಯಾ
ತೆಲಂಗಾಣ (Telangana) ಕಾಂಗ್ರೆಸ್ (Congress) ಸಮಿತಿಯ ಕಾರ್ಯಾಧ್ಯಕ್ಷ ಜಗ್ಗಾ ರೆಡ್ಡಿ (Jagga Reddy) ನಿರ್ಮಾಣಕ್ಕೆ ಚಾಲನೆ ನೀಡಿದ್ದು, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಘೋಷಣೆ ಮಾಡಿದ್ದಾರೆ. ಚಿತ್ರದ ನಿರ್ಮಾಣಕ್ಕೆ ಕೊಡುಗೆ ನೀಡುವಂತೆ ಕ್ಷೇತ್ರದ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರಿಗೆ ಮನವಿ ಮಾಡಿದ್ದು, ಸಿನಿಮಾ ಮಾಡಲು ಕ್ಷೇತ್ರದ ಕಾಂಗ್ರೆಸ್ ಸಂಚಾಲಕ ಜೂಲಕಂತಿ ಆಂಜನೇಯಲು 2 ಕೋಟಿ ರೂ. ಹಣ ಘೋಷಣೆ ಮಾಡಿದ್ದಾರೆ.
ಪಕ್ಷದ ನಾಯಕರು ಹಾಗೂ ಕಾರ್ಯಕರ್ತರಿಂದ ಹಣ ಸಂಗ್ರಹಿಸಿ ಬಳಿಕ ಸಿನಿಮಾ ಮಾಡಲು ಪಕ್ಷ ತೀರ್ಮಾನಿಸಿದೆ. ಇದನ್ನೂ ಓದಿ: ‘ನಮ್ಮನ್ನು ಶತ್ರುಗಳಂತೆ ನೋಡುತ್ತಿದ್ದರು’: ಸಂಜಯ್ ಪತ್ನಿ ಮನೇಕಾ ಗಾಂಧಿ ಜೊತೆಗಿನ ಕಹಿ ಸಂಬಂಧದ ಬಗ್ಗೆ ಸೋನಿಯಾ ಉಲ್ಲೇಖ
