– ದೆಹಲಿಯ ಖಾನ್ ಮಾರ್ಕೆಟ್ ಸೇರಿದಂತೆ ಹಲವು ಮಳಿಗೆಗಳಲ್ಲಿ ಮಾರಾಟ
ನವದೆಹಲಿ: ಕಾಂಗ್ರೆಸ್ನ ಹಿರಿಯ ನಾಯಕಿ ಸೋನಿಯಾ ಗಾಂಧಿ (Sonia Gandhi) ಅವರ ಬಹುನಿರೀಕ್ಷಿತ ಆತ್ಮಕಥನ ‘Belonging: A Journey of Love’ ಪುಸ್ತಕ ದೆಹಲಿಯಲ್ಲಿ ಮಾರುಕಟ್ಟೆಗೆ ಲಭ್ಯವಾಗಿದೆ.
ದೆಹಲಿಯ ಖಾನ್ ಮಾರ್ಕೆಟ್ ಸೇರಿದಂತೆ ನಗರದ ಹಲವು ಪುಸ್ತಕ ಮಳಿಗೆಗಳಲ್ಲಿ ಪುಸ್ತಕದ ಮಾರಾಟ ಆರಂಭವಾಗಿದೆ. ಪುಸ್ತಕದ ಅಧಿಕೃತ ಬಿಡುಗಡೆ ಸಮಾರಂಭವನ್ನು ನವೆಂಬರ್ 16 ರಂದು ನಡೆಸಲು ನಿರ್ಧರಿಸಲಾಗಿದೆ. ಅಧಿಕೃತ ಬಿಡುಗಡೆ ಸಮಾರಂಭಕ್ಕೂ ಮುನ್ನವೇ ಪುಸ್ತಕ ಮಳಿಗೆಗಳಲ್ಲಿ ಮಾರಾಟಕ್ಕೆ ಲಭ್ಯವಾಗಿರುವುದು ಗಮನ ಸೆಳೆದಿದೆ. ಇದನ್ನೂ ಓದಿ: ನಾನು ಪ್ರಧಾನಿ ಆಗೋದು ರಾಹುಲ್, ಪ್ರಿಯಾಂಕಾಗೆ ಇಷ್ಟವಿರಲಿಲ್ಲ – 2004ರಲ್ಲೇ ಹುದ್ದೆ ಬೇಡವೆಂದಿದ್ದೆ: ಸೋನಿಯಾ ಗಾಂಧಿ
ಸೋನಿಯಾ ಗಾಂಧಿ ವೈಯಕ್ತಿಕ ಜೀವನ ಅವರ ರಾಜಕೀಯ ಜೀವನ, ವೈಯಕ್ತಿಕ ಅನುಭವಗಳು ಹಾಗೂ ಸಾರ್ವಜನಿಕ ಬದುಕಿನ ಕುರಿತು ಉಲ್ಲೇಖಿಸಲಾಗಿದೆ. 90ರ ಕಾಲಘಟ್ಟದ ಪ್ರಮುಖ ರಾಜಕೀಯ ಬೆಳವಣಿಗೆ ಹಾಗೂ ಇಂದಿರಾ ಗಾಂಧಿ, ರಾಜೀವ್ ಗಾಂಧಿ ಹತ್ಯೆ, ಸೋನಿಯಾ ರಾಜಕೀಯ ಪ್ರವೇಶದ ಬಗ್ಗೆ ವಿವರಿಸಲಾಗಿದೆ.
ಸೋನಿಯಾ ಗಾಂಧಿ ಬಗೆಗೆ ಕುತೂಹಲ ಉಳ್ಳ ಜನರು ಖರೀದಿಸಿ ಓದಲು ಆರಂಭಿಸಿದ್ದಾರೆ. ಪುಸ್ತಕದಲ್ಲಿ ಸೋನಿಯಾ ಅವರ ಕುಟುಂಬ ಹಾಗೂ ರಾಜಕೀಯ ಜೀವನಕ್ಕೆ ಸಂಬಂಧಿಸಿದ ಅಪರೂಪದ ಛಾಯಾಚಿತ್ರಗಳು ಸಹ ಇವೆ. ಇದನ್ನೂ ಓದಿ: RSS ನಲ್ಲಿ ತಮ್ಮದೇ ಪ್ರಯತ್ನದಿಂದ ಅಧಿಕಾರಕ್ಕೇರಿದ್ರು – ಪ್ರಧಾನಿ ಮೋದಿ ರಾಜಕೀಯ ಬೆಳವಣಿಗೆ ಮೆಚ್ಚಿಕೊಂಡ ಸೋನಿಯಾ ಗಾಂಧಿ
