ಚೆನ್ನೈ: ಭಾರತೀಯ ವಾಯುಪಡೆ(ಐಎಎಫ್) ಅಧಿಕಾರಿಯನ್ನು ಅತ್ಯಾಚಾರದ ಆರೋಪದ ಮೇಲೆ ತಮಿಳುನಾಡಿನ ಕೊಯಮತ್ತೂರಿನಲ್ಲಿ ಅರೆಸ್ಟ್ ಮಾಡಲಾಗಿದೆ.
ಫ್ಲೈಟ್ ಲೆಫ್ಟಿನೆಂಟ್ ಅಮಿತೇಶ್(29) ಅವರನ್ನು ಕೊಯಂಬತ್ತೂರಿನ ರೇಸ್ ಕೋರ್ಸ್‍ನ ಸಹೋದ್ಯೋಗಿಯ ಆರೋಪದ ಮೇಲೆ ಐಎಎಫ್ ಕ್ಯಾಂಪಸ್ ನಲ್ಲಿ ನಿನ್ನೆ ಬಂಧಿಸಲಾಗಿದೆ. ಅಮಿತೇಶ್ ಅವರು ಇಲ್ಲಿ ತರಬೇತಿ ಪಡೆಯುತ್ತಿದ್ದರು. ಇದನ್ನೂ ಓದಿ: ಹೆತ್ತ ಮಗಳನ್ನೇ ಕೊಂದ ತಂದೆ, ತಾಯಿ, ದೊಡ್ಡಪ್ಪ – ಮರ್ಯಾದಾ ಹತ್ಯಾ ಪ್ರಕರಣ ಬಯಲು
Advertisement
Advertisement
ಈ ಕುರಿತು ಸಂತ್ರಸ್ತೆ ಮಾತನಾಡಿದ್ದು, ಸೆ.10ರಂದು ತರಬೇತಿ ಸಮಯದಲ್ಲಿ ನನಗೆ ಗಾಯವಾಯಿತು. ಅದಕ್ಕೆ ನಾನು ಔಷಧಿ ಸೇವಿಸಿ ಮಲಗಿಕೊಂಡೆ. ಆದರೆ ನಂತರ ಎಚ್ಚರವಾಗಿ ನೋಡಿದರೆ ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲಾಗಿತ್ತು. ಯಾರು ಎಂದು ತಿಳಿದು ಅದನ್ನು ಐಎಎಫ್ ಅಧಿಕಾರಿಗಳಿಗೆ ದೂರು ನೀಡಿದೆ. ಆದರೂ ಸಹ ಅವರು ಯಾವುದೇ ಕ್ರಮ ಕೈಗೊಂಡಿಲ್ಲ. ಅದಕ್ಕೆ ಕೊಯಮತ್ತೂರಿನ ಮಹಿಳಾ ಪೆÇಲೀಸ್ ಠಾಣೆಯನ್ನು ಸಂಪರ್ಕಿಸಿ ಅವರಿಗೆ ದೂರು ನೀಡಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಸಿಎಂ ಜಿಲ್ಲೆಯಲ್ಲಿ ಮರಳು ಸಾಗಾಣಿಕೆಗೆ ಮಕ್ಕಳ ಬಳಕೆ – ಕಣ್ಣುಮುಚ್ಚಿ ಕುಳಿತ ಪೊಲೀಸ್ ಇಲಾಖೆ
Advertisement
ಈ ಹಿನ್ನೆಲೆ ಅಮಿತೇಶ್‍ನನ್ನು ಕೊಯಮತ್ತೂರಿನ ಪೊಲೀಸರು ಅರೆಸ್ಟ್ ಮಾಡಿದ್ದು ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿದೆ. ಈಗ ಅಮಿತೇಶ್ ಅವರನ್ನು ಉಡುಮಲ್ ಪೇಟೆ ಜೈಲಿಗೆ ಕಳಹಿಸಲಾಗಿದೆ.