ಬೆಂಗಳೂರು: ದೇವರಾಜೇಗೌಡ (Devarajegowda) ಆರೋಪ ಆಧಾರಹಿತ, ಆತನಿಗೆ ತಲೆ ಕೆಟ್ಟಿದೆ. ಆತನ ಆರೋಪಕ್ಕೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಹೇಳಿದ್ದಾರೆ.
ಪೆನ್ ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಕೆಶಿ 100 ಕೋಟಿ ಆಫರ್ ಮಾಡಿದ್ದರು ಎಂದು ದೇವರಾಜೇಗೌಡ ಅವರ ಆರೋಪಕ್ಕೆ ಅವರು ಪ್ರತಿಕ್ರಿಯಿಸಿದರು.
Advertisement
ನಾನು 100 ಕೋಟಿ ರೂ. ಆಫರ್ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತಕ್ಕೆ ದೂರು ಕೊಡಲಿ. ರಾಷ್ಟ್ರೀಯ, ರಾಜ್ಯ ಮಾಧ್ಯಮಗಳು ಆರೋಪಿಯ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಬಾರದು ಎಂದರು. ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಕಳಂಕ ತೊಳೆದುಕೊಳ್ಳುವವರೆಗೂ ಹೆಚ್‌ಡಿಡಿ ಕುಟುಂಬದವರು ರಾಜೀನಾಮೆ ಕೊಡಲಿ: ಪ್ರಿಯಾಂಕ್ ಖರ್ಗೆ
Advertisement
Advertisement
ಅವ್ನು ಏನ್ ಬೇಕಾದರೂ ಮಾತನಾಡಿಕೊಳ್ಳಲಿ. ದೇವರಾಜೇಗೌಡಗೆ ತಲೆ ಕೆಟ್ಟಿದೆ. ನಾನು ಯಾರ ಜೊತೆಯಲ್ಲೂ ಮಾತನಾಡಿಲ್ಲ. ನನ್ನ ಹತ್ತಿರ ಏನೇನಕ್ಕೋ ನೂರಾರು ಜನ ಬರುತ್ತಿರುತ್ತಾರೆ. ಬರುವ ಎಲ್ಲರನ್ನೂ ಸ್ಕ್ಯಾನ್ ಮಾಡಲು ಆಗುತ್ತಾ ಎಂದು ಪ್ರಶ್ನಿಸಿದರು.
Advertisement
ಕೆಲವರಿಗೆ ನನ್ನ ಹೆಸರನ್ನ ಉಪಯೋಗಿಸಿಕೊಂಡು ಮಾರ್ಕೆಟ್ ಮಾಡಿಕೊಕೊಳ್ಳುತ್ತಾರೆ. ಏನಾದ್ರೂ ಒಳ್ಳೆಯದು ಇದ್ದರೆ ಹೇಳಿ. ಯಾರ್ಯಾರೋ ಹೇಳಿದ್ರೆ ನಾನು ತಲೆ ಕೆಡಿಸಿಕೊಳ್ಳಲು ಹೋಗಲ್ಲ ಎಂದರು.
ಎಲ್ಲರೂ ಪೆನ್ ಡ್ರೈವ್ (Pen Drive) ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ ಸಂತ್ರಸ್ತೆಯರ ಬಗ್ಗೆ ಯಾರೂ ಮಾತನಾಡುತ್ತಿಲ್ಲ ಯಾಕೆ? ಈ ವಿಚಾರದಲ್ಲಿ ನಾನು ಹೆಚ್ಚು ಏನೂ ಮಾತನಾಡುವುದಿಲ್ಲ ಎಂದು ಹೇಳಿದರು.
ಶಕ್ತಿ ಯೋಜನೆಯಿಂದ ಎಲ್ಲರಿಗೂ ಅನುಕೂಲ ಆಗುತ್ತಿದೆ. ಸಾರ್ವಜನಿಕರಿಗಾಗಿ ಸಾವಿರಕ್ಕೂ ಹೆಚ್ಚು ಬಸ್ಸು ಖರೀದಿಸಿದ್ದೇವೆ. ಬೆಂಗಳೂರು ಮೆಟ್ರೋ ಆದಾಯ ಹೆಚ್ಚಳವಾಗಿದೆ. ಕಳೆದ ವರ್ಷ ಜೂನ್ ತಿಂಗಳಲ್ಲಿ 1.81 ಕೋಟಿ ಪ್ರಯಾಣಿಕರ ಪ್ರಯಾಣಿಸಿ 141 ಕೋಟಿ ಆದಾಯ ಬಂದಿದೆ. ಈ ವರ್ಷ ಏಪ್ರಿಲ್‌ನಿಂದ 2.09 ಕೋಟಿ ಪ್ರಯಾಣಿಕರು ಪ್ರಯಾಣಿಸಿದ್ದು, 151 ಕೋಟಿ ರೂ. ಆದಾಯ ಬಂದಿದೆ. ಪ್ರಧಾನಿ ಮೋದಿ ಅವರಿಗೆ ಯಾರೋ ತಪ್ಪು ಮಾಹಿತಿ ನೀಡಿದ್ದಾರೆ ಎಂದು ತಿಳಿಸಿದರು.