ನವದೆಹಲಿ: ದೇಶದ ಹೊರಗೆ ಆರ್‌ಎಸ್‌ಎಸ್‌ನ ಅಭಿವ್ಯಕ್ತಿ ಸ್ವಾತಂತ್ರ್ಯವನ್ನ ಹತ್ತಿಕ್ಕಲು ಪ್ರಯತ್ನಗಳು ನಡೆದ ದಿನ ನಾನೇ ಅವರನ್ನು ರಕ್ಷಿಸುತ್ತೇನೆ. ಏಕೆಂದ್ರೆ ಅವರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ಅಚ್ಚರಿ ಹೇಳಿಕೆ ನೀಡಿದ್ರು.
ದೆಹಲಿಯ ಮಾವಲಂಕರ್ ಹಾಲ್‌ನಲ್ಲಿ ನಡೆದ ಕಾಂಗ್ರೆಸ್ (Congress) ಸಮಾವೇಶವನ್ನುದ್ದೇಶಿಸಿ ಅವರು ಮಾತನಾಡಿದರು. ದೇಶದ ಹೊರಗೆ ಆರ್‌ಎಸ್‌ಎಸ್‌ನ (RSS) ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಲು ಪ್ರಯತ್ನಗಳು ನಡೆದ ದಿನ ನಾನೇ ಅವರನ್ನು ರಕ್ಷಿಸುತ್ತೇನೆ ಎಂದರು.
इनको हम पागल कर देंगे…
आजकल नरेंद्र मोदी रात में सोते नहीं हैं। इसके कई कारण हैं- कुछ obvious हैं, कुछ hidden।
अमित शाह को चाणक्य और न जाने क्या-क्या कहा जाता था, लेकिन वो गायब हो गए, वो भाग गए और 20 दिन तक संसद में नहीं आ पाए।
अब इस सरकार को समझ आ गया है कि ये देश अपने… pic.twitter.com/D1oQ5JFddB
— Congress (@INCIndia) August 13, 2026
ಸಣ್ಣ ವ್ಯವಹಾರಗಳು ಒಂದು ಕಾಲದಲ್ಲಿ ಆರ್‌ಎಸ್‌ಎಸ್‌ನ ಪ್ರಮುಖ ಶಕ್ತಿಯಾಗಿದ್ದವು. ಪ್ರಮೋದ್ ಮಹಾಜನ್ ಅವರ ಅಧಿಕಾರಾವಧಿಯಲ್ಲಿ ಆರ್‌ಎಸ್‌ಎಸ್‌ನಲ್ಲಿ ಕಾರ್ಪೊರೇಟ್ ಪ್ರಭಾವ ಪ್ರಾರಂಭವಾಯಿತು. ನರೇಂದ್ರ ಮೋದಿ ಈ ಪ್ರಕ್ರಿಯೆಯನ್ನ ಪೂರ್ಣಗೊಳಿಸಿದರು ಎಂದು ಟೀಕಿಸಿದರು.
ಹಳೆಯ ಆರ್‌ಎಸ್‌ಎಸ್ ಈಗ ಮುಗಿದಿದೆ, ಸಂಘಟನೆ ದೊಡ್ಡ ಬಂಡವಾಳಶಾಹಿಗಳ ಹಿತಾಸಕ್ತಿಗಳಿಗೆ ಸಾಧನವಾಗಿದೆ. ಆರ್‌ಎಸ್‌ಎಸ್ ಮತ್ತು ಪ್ರಧಾನಿ ಮೋದಿ ಇಬ್ಬರೂ ಕೈಗಾರಿಕೋದ್ಯಮಿಗಳು ಮತ್ತು ಕಾರ್ಪೊರೇಟ್‌ಗಳ ಹಿತಾಸಕ್ತಿಗಾಗಿ ಮಾತ್ರ ಕೆಲಸ ಮಾಡುತ್ತಿದ್ದಾರೆ. ದೇಶದ ಹೆಚ್ಚಿನ ಸಂಖ್ಯೆಯ ಜನರು ಈ ಶಕ್ತಿಯ ವಿರುದ್ಧ ಧ್ವನಿ ಎತ್ತಲು ಹೆದರುತ್ತಿದ್ದಾರೆ ಎಂದರು.
𝐎𝐫𝐝𝐞𝐫 𝐯𝐬 𝐄𝐱𝐩𝐫𝐞𝐬𝐬𝐢𝐨𝐧
At Jantar Mantar, students were told to stay quiet.
A grieving mother was told to stay quiet.
They (BJP-RSS) want to impose order.
And our job is to make India express itself and break that order.
: LoP Shri @RahulGandhi pic.twitter.com/Pz4J5HBkMY
— Congress (@INCIndia) August 13, 2026
ನಾವು ಯಾರನ್ನೂ ತಡೆಯಲು ಬಯಸುವುದಿಲ್ಲ, ಎಲ್ಲರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯ ಇರಬೇಕು ಎಂದು ನಾವು ಹೇಳುತ್ತೇವೆ. ಜಂತರ್ ಮಂತರ್‌ನಲ್ಲಿ ನಡೆಯುತ್ತಿದ್ದ ಪ್ರತಿಭಟನೆ ಕೂಡ ವಿದ್ಯಾರ್ಥಿಗಳು ತಮ್ಮ ಅಭಿಪ್ರಾಯಗಳನ್ನ ವ್ಯಕ್ತಪಡಿಸಲು ಬಯಸುತ್ತಿದ್ದ ಸ್ಥಳವಾಗಿತ್ತು. ವಿದ್ಯಾರ್ಥಿಗಳೆಲ್ಲರೂ ನೋವಿನಿಂದ ಬಳಲುತ್ತಿದ್ದರು, ಮಾತನಾಡಲು ಬಯಸಿದ್ದರು, ಆದರೆ ಸರ್ಕಾರ ಅವರೊಂದಿಗೆ ಮಾತನಾಡಲಿಲ್ಲ ಎಂದು ಕಿಡಿ ಕಾರಿದರು.
ನಾನು ಆರ್‌ಎಸ್‌ಎಸ್ ಅನ್ನೂ ಸಹ ರಕ್ಷಿಸುತ್ತೇನೆ ರಾಹುಲ್ ಗಾಂಧಿ
ಈಗ ಅವರು (ಸರ್ಕಾರ) ಒಂದು ವಿಷಯವನ್ನು ಅರ್ಥಮಾಡಿಕೊಂಡಿದ್ದಾರೆ, ಈ ದೇಶವನ್ನ ಅಭಿವ್ಯಕ್ತಿಯಿಂದ ತಡೆಯಲಾಗುವುದಿಲ್ಲ. ಭಾರತದಲ್ಲಿ ಅನೇಕ ಜನರು ಹೇಡಿಗಳಂತೆ ವರ್ತಿಸುತ್ತಿದ್ದಾರೆ. 3000 ವರ್ಷಗಳಷ್ಟು ಹಿಂದಿನ ಭಾರತವನ್ನ ಅರ್ಥಮಾಡಿಕೊಳ್ಳುವ ಅಗತ್ಯವಿಲ್ಲ, ಆದರೆ ಇಂದಿನ ಭಾರತವನ್ನ ಅರ್ಥಮಾಡಿಕೊಳ್ಳುವ ಅವಶ್ಯಕತೆಯಿದೆ. ದೇಶದ ಹೊರಗೆ ಆರ್‌ಎಸ್‌ಎಸ್‌ನ ಅಭಿವ್ಯಕ್ತಿ ಸ್ವಾತಂತ್ರ್ಯ ಹತ್ತಿಕ್ಕಲು ಪ್ರಾರಂಭಿಸಿದರೆ, ಆ ದಿನ ನಾನು ಅವರನ್ನು ರಕ್ಷಿಸುತ್ತೇನೆ, ಏಕೆಂದರೆ ಅವರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ ಎಂದರು.

