ಬೆಂಗಳೂರು: ನಗರದ (Bengaluru) ಹಲವೆಡೆ ಧಾರಾಕಾರ (Rain) ಮಳೆಯಾಗುತ್ತಿದೆ. ಮಲ್ಲೇಶ್ವರಂ, ರಾಜಾಜಿನಗರ, ಪೀಣ್ಯ, ಮಾದಾವರ, ಮಹದೇವಪುರ, ಕೆಆರ್ ಸರ್ಕಲ್ ಸೇರಿ ಹಲವೆಡೆ ಭಾರೀ ಮಳೆಯಾಗುತ್ತಿದೆ. ದಿಢೀರ್ ಮಳೆಯಿಂದಾಗಿ ವಾಹನ ಸವಾರರು ಪರದಾಡಿದ್ದಾರೆ.
ನಗರದ ಹಲವೆಡೆ ಸಂಜೆ ಆಗುತ್ತಿದ್ದಂತೆ ಮೋಡ ಕವಿದ ವಾತಾವರಣ ನಿರ್ಮಾಣವಾಗಿದೆ. ಮುಂಜಾನೆಯಿಂದ ಬಿಸಿಲಿನ ಬೇಗೆಗೆ ತತ್ತರಿಸಿದ್ದ ಜನ ತುಂತುರು ಮಳೆಯ ಸಿಂಚನದಿಂದ ನಿಟ್ಟುಸಿರು ಬಿಟ್ಟಿದ್ದಾರೆ. ಇದನ್ನೂ ಓದಿ: ಬಂಗಾಳ ಉಪಮಹಾಸಾಗರದಲ್ಲಿ ವಾಯುಭಾರ ಕುಸಿತ – ಬೆಂಗಳೂರಿಗೆ ಸೇರಿ 10 ಜಿಲ್ಲೆಗಳಿಗೆ ಇಂದು ಯೆಲ್ಲೋ ಅಲರ್ಟ್
ಕಲಾಸಿಪಾಳ್ಯ ,ಕಾರ್ಪೊರೇಷನ್, ವಿಧಾನಸೌಧ, ಲಾಲ್‌ಬಾಗ್, ಜಯನಗರ, ಶಾಂತಿನಗರ ಸುತ್ತಮುತ್ತ ಸಹ ಮಳೆ ಆರಂಭವಾಗಿದೆ. ಬೈಕ್ ಸವಾರರು ಮಳೆಯಿಂದ ಪರದಾಡುತ್ತಿದ್ದಾರೆ. ಇದನ್ನೂ ಓದಿ: ಕೊಡಗಿನಲ್ಲಿ ಮಳೆ ಕೊರತೆ – ಕಾವೇರಿ ತೀರ್ಥೋದ್ಭವಕ್ಕೂ ಮುನ್ನ ಭಕ್ತರಲ್ಲಿ ಆತಂಕ

