ಬೆಂಗಳೂರು: ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಸಾಮಾನ್ಯವಾಗಿ ಕಾರಿನಲ್ಲಿ ಬಂದು ದಾಳಿ ಮಾಡುತ್ತಾರೆ. ಆದರೆ ಈಗ ಇವರ ಬೇಟೆಯ ಶೈಲಿ ಬದಲಾಗಿದ್ದು, ಟಾರ್ಗೆಟ್ ಆದ ವ್ಯಕ್ತಿಗಳು ಅನುಮಾನ ಪಡದ ರೀತಿಯಲ್ಲಿ ದಾಳಿ ನಡೆಸಿ ಶಾಕ್ ಕೊಡುತ್ತಿದ್ದಾರೆ.
ಹೌದು. ಈ ಹಿಂದೆ ಕೊಡಗಿನಲ್ಲಿ ಮದುವೆಯ ದಿಬ್ಬಣದಂತೆ ಹೊರಟು ಮಾಜಿ ಕೇಂದ್ರ ಸಚಿವ ಚಿದಂಬರಂ ಅವರ ಆಪ್ತರ ಮನೆ, ಕಚೇರಿಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಈಗ ಗಾಲ್ಫ್ ಆಡುವ ನೆಪದಲ್ಲಿ ಈಗಲ್‍ಟನ್ ರೆಸಾರ್ಟ್ ಪ್ರವೇಶಿಸಿ ಡಿಕೆ ಶಿವಕುಮಾರ್ ಅವರಿಗೆ ಶಾಕ್ ನೀಡಿದ್ದಾರೆ.
Advertisement
ಬೆಳಗ್ಗೆ 5.30ರ ವೇಳೆಗೆ ದಾಳಿಗೆ ಸರ್ವ ಸನ್ನದ್ಧವಾಗಿ ಐಟಿ ಅಧಿಕಾರಿಗಳ ತಂಡ ಬೇರ್ಪಟ್ಟಿತು. ಬೆಳಗ್ಗೆ 6.30ರ ವೇಳೆಗೆ ಅಧಿಕಾರಿಗಳ ತಂಡವೊಂದು ಗಾಲ್ಫ್ ಆಡುವ ನೆಪದಲ್ಲಿ ಬಿಡದಿಯ ಈಗಲ್‍ಟನ್ ರೆಸಾರ್ಟ್ ಪ್ರವೇಶಿಸಿತು. ಈ ವೇಳೆ ಡಿಕೆ ಶಿವಕುಮಾರ್ ಮತ್ತು ಡಿಕೆ ಸುರೇಶ್ ತಂಗಿದ್ದ ಕೋಣೆಯನ್ನು ಪ್ರವೇಶಿಸಿ ಇಬ್ಬರ ಮೊಬೈಲ್ ಸೀಜ್ ಮಾಡಿತು. ಈ ಸಂದರ್ಭದಲ್ಲಿ ಡಿಕೆಶಿ ಕೊಠಡಿಯಲ್ಲಿ ದಾಖಲಾತಿ ಪತ್ತೆ ಆಗಿದ್ದು, ವಿಚಾರಣೆ ವೇಳೆ ದಾಖಲೆಗಳು ಹರಿದು ಹಾಕಿದ್ದಾರೆ ಎನ್ನಲಾಗಿದೆ.
Advertisement
ಬೆಳಗ್ಗೆ 8 ಗಂಟೆಯ ನಂತರ ಕನಕಪುರ, ಸದಾಶಿವನಗರ, ಮೈಸೂರಿನ ಅತ್ತೆ ಮನೆ, ದೆಹಲಿಯಲ್ಲಿರುವ ಆಪ್ತರ ಮನೆ ಸೇರಿ 40 ಒಟ್ಟು 40 ಕಡೆಗಳಲ್ಲಿ ದಾಳಿ ನಡೆಯಿತು. ಸದಾಶಿವನಗರ ಮನೆ ಬಳಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
Advertisement
ವಿಚಾರಣೆ ವೇಳೆ ಐಟಿ ಅಧಿಕಾರಿಗಳು ಡಿಕೆಶಿಗೆ ಈ ಎಲ್ಲ ಪ್ರಶ್ನೆಗಳನ್ನು ಕೇಳಿದ್ದಾರೆ ಎನ್ನಲಾಗಿದೆ.
* ನಿಮಗೆ ಬೆಂಗಳೂರು ಸೇರಿ ಎಲ್ಲೆಲ್ಲಿ ಎಷ್ಟೆಷ್ಟು ಆಸ್ತಿ ಇದೆ..?
* ನಿಮ್ಮ ಕುಟುಂಬದವರ ಹೆಸರಿನಲ್ಲಿ ಎಷ್ಟು ಚರ-ಸ್ಥಿರಾಸ್ತಿ ಇದೆ..?
* ನೀವು ಲಂಡನ್, ದುಬೈ ಸೇರಿದಂತೆ ವಿದೇಶದಲ್ಲಿ ಆಸ್ತಿ ಹೊಂದಿದ್ದೀರಾ..?
Advertisement
* ನಿಮ್ಮ ಆಡಳಿತಾವಧಿಯಲ್ಲಿ ಎಲ್ಲಿಂದ ವಿದ್ಯುತ್ ಖರೀದಿ ಮಾಡಿದ್ದೀರಾ..?
* ನಿಮ್ಮ ಇಲಾಖೆಯಲ್ಲಿ ಕಲ್ಲಿದ್ದಲು & ವಿದ್ಯುತ್ ವ್ಯವಹಾರ ಹೇಗಿದೆ..?
* ಯಾವ್ಯಾವ ಕಂಪೆನಿಗಳ ಜೊತೆ ವಿದ್ಯುತ್ ಖರೀದಿ ಒಪ್ಪಂದ ಮಾಡಿಕೊಂಡಿದ್ದೀರಾ..?
* ಯಾವ್ಯಾವ ಕಂಪೆನಿಗಳ ಜೊತೆ ಎಷ್ಟೆಷ್ಟು ವ್ಯವಹಾರ ಮಾಡಿದ್ದೀರಾ..?
* ಯಾವ್ಯಾವ ಬಿಲ್ಡರ್‍ಗಳ ಜೊತೆ ನಿಮ್ಮ ವ್ಯವಹಾರವಿದೆ..?
* ನಿಮ್ಮ ಆಪ್ತ ವಲಯದಲ್ಲಿರೋ ಐಎಎಸ್ ಅಧಿಕಾರಿಗಳು ಯಾರು..?
* ಯಾವ್ಯಾವ ಚೀಫ್ ಎಂಜಿನಿಯರ್‍ಗಳ ಜೊತೆ ನಿಮಗೆ ಸಂಪರ್ಕ ಇದೆ..?
ಡಿಕೆ ಶಿವಕುಮಾರ್‍ಗೆ ಐಟಿ ಕೊಟ್ಟಿರೋ ಪವರ್ ಪಂಚ್‍ನ ಟೈಮ್‍ಲೈನ್
ಬೆಳಗ್ಗೆ 5.30 : ದಾಳಿಗೆ ಸರ್ವ ಸನ್ನದ್ಧವಾಗಿ ತಂಡಗಳಾಗಿ ಬೇರ್ಪಟ್ಟ ಐಟಿ ಅಧಿಕಾರಿಗಳ ತಂಡ
ಬೆಳಗ್ಗೆ 6.30 : ಗಾಲ್ಫ್ ಆಡುವ ನೆಪದಲ್ಲಿ ಈಗಲ್‍ಟನ್ ರೆಸಾರ್ಟ್‍ಗೆ ಅಧಿಕಾರಿಗಳ ಎಂಟ್ರಿ
ಬೆಳಗ್ಗೆ 7.15 : ಡಿಕೆಶಿವಕುಮಾರ್, ಡಿ.ಕೆ.ಸುರೇಶ್ ತಂಗಿದ್ದ ಕೋಣೆಗೆ ಪ್ರವೇಶ, ಇಬ್ಬರ ಮೊಬೈಲ್ ಸೀಜ್
ಬೆಳಗ್ಗೆ 7.30: ಡಿಕೆಶಿ ಕೋಣೆಯಲ್ಲಿ ದಾಖಲಾತಿ & ಭಾರೀ ಪ್ರಮಾಣದ ನಗದು ವಶ
ಬೆಳಗ್ಗೆ 7.45: ಈಗಲ್‍ಟನ್ ರೆಸಾರ್ಟ್ ಮಾತ್ರವಲ್ಲದೆ 40 ಕಡೆ ದಾಳಿ
ಬೆಳಗ್ಗೆ 8.00: ಸಿಬಿಐ ಕಚೇರಿ ಹಿಂಭಾಗದ ಜ್ಯೋತಿಷಿ ದ್ವಾರಕಾನಾಥ್ ನಿವಾಸದಲ್ಲಿ ಪರಿಶೀಲನೆ
ಬೆಳಗ್ಗೆ 8.15: ಈಗಲ್‍ಟನ್‍ನಲ್ಲಿ ಶಿಕೆಶಿ ವಿಚಾರಣೆ, ಮಾಹಿತಿ ಸಂಗ್ರಹ
ಬೆಳಗ್ಗೆ 8.30: ಸದಾಶಿವನಗರದ ಡಿಕೆಶಿ ನಿವಾಸಕ್ಕೆ ಮತ್ತಷ್ಟು ಐಟಿ ಅಧಿಕಾರಿಗಳ ಆಗಮನ (ಮನೆಯಲ್ಲಿದ್ದ ಲಾಕರ್‍ಗಳನ್ನ ತೆರೆಯಲು ಯತ್ನ )
ಬೆಳಗ್ಗೆ 8.45: ದಾಳಿ ಬಗ್ಗೆ ರಾಹುಲ್ ಗಾಂಧಿಗೆ ಸಿಎಂ ಮಾಹಿತಿ
ಬೆಳಗ್ಗೆ 9.00: ದೆಹಲಿಯ ಡಿಕೆಶಿ ನಿವಾಸ, ಆಪ್ತ ಆಂಜನೇಯ ನಿವಾಸದ ಮೇಲೆ ದಾಳಿ
ಬೆಳಗ್ಗೆ 11.15: ಕನಕಪುರದ ಡಿಕೆ ಸುರೇಶ್ ಅವರ ಕೋಡಿಹಳ್ಳಿ ನಿವಾಸದ ಮೇಲೆ ದಾಳಿ
ಬೆಳಗ್ಗೆ 11.20: ಡಿ.ಕೆ.ಶಿವಕುಮಾರ್ ತಾಯಿ ಗೌರಮ್ಮ ವಿಚಾರಣೆ
ಬೆಳಗ್ಗೆ 11.45: ಬೆಂಗಳೂರಿನ ನಿವಾಸಕ್ಕೆ ಡಿಕೆಶಿ ಜೊತೆ ಐಟಿ ಅಧಿಕಾರಿಗಳ ಆಗಮನ
ಮಧ್ಯಾಹ್ನ 12.00: ಮೈಸೂರಿನ ಅತ್ತೆ ಮನೆ ಮೇಲೆ ದಾಳಿ
ಮಧ್ಯಾಹ್ನ 12.00: ರಾಜ್ಯದ ಹಲವೆಡೆ ಐಟಿ, ಮೋದಿ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ
ಮಧ್ಯಾಹ್ನ 12.10: ಡಿಕೆಶಿ ಮನೆಯಲ್ಲಿ ಪತ್ನಿ ಉಷಾ ವಿಚಾರಣೆ
ಮಧ್ಯಾಹ್ನ 1.00: ರಾಜಕೀಯ ತಂತ್ರಗಳಿಗೆ ಬಗ್ಗುವುದಿಲ್ಲ ಎಂದು ಸಿಎಂ ಟ್ವೀಟ್
ಸಂಜೆ 4.00: ದೆಹಲಿಯಲ್ಲಿ ಬೆಳಗ್ಗೆ ಸೀಜ್ ಆದ ಹಣದ ದೃಶ್ಯ ಬಿಡುಗಡೆ
#DKShivakumar ನಿವಾಸದಲ್ಲಿ ಸಿಕ್ಕಿತು 7.5 ಕೋಟಿ ರೂ. ಹಣ: ಮುಂದೆ ಈ ನಾಯಕರ ಮನೆ ಮೇಲೆ ದಾಳಿ? https://t.co/TvqVnCBVkd #congress #karnataka #itraid pic.twitter.com/psKI4nX2na
— PublicTV (@publictvnews) August 2, 2017
Bangalore: D.K.Shivakumar's Wife Usha Under Interrogation Inside Sadashivanagar Residence: https://t.co/Gn3hG51oFK via @YouTube
— PublicTV (@publictvnews) August 2, 2017
ಎಬಿವಿಪಿ, ಆರ್‍ಎಸ್‍ಎಸ್, ಬಜರಂಗದಳದ ರೀತಿಯಲ್ಲೇ ಐಟಿ, ಇಡಿ, ಸಿಬಿಐ ಬಿಜೆಪಿಗೆ ಕಾರ್ಯನಿರ್ವಹಿಸುತ್ತಿವೆ: ದಿನೇಶ್ ಗುಂಡೂರಾವ್ https://t.co/SPwWJLpGDl#Bengaluru pic.twitter.com/CR2xB8WCLS
— PublicTV (@publictvnews) August 2, 2017
ಪ್ರಜಾಪ್ರಭುತ್ವದ ಕೊಲೆ, ತನ್ನ ವಿರುದ್ಧ ಧ್ವನಿ ಎತ್ತುವವರ ಮೇಲೆ ಬಿಜೆಪಿಯಿಂದ ಐಟಿ ದಾಳಿ: ಸಿಎಂ ಕಿಡಿ https://t.co/7TR7FArmjv @Cm#ITRaid #DKShivakumar pic.twitter.com/OFGVv2iSOw
— PublicTV (@publictvnews) August 2, 2017
ಬಿಜೆಪಿಯ ಸಿದ್ದೇಶ್ವರ್ ಮನೆ ಮೇಲೆ ಐಟಿ ದಾಳಿ ನಡೆದಿದೆ: ಕೈ ಆರೋಪಕ್ಕೆ ಸಿಟಿ ರವಿ ಸಮರ್ಥನೆ https://t.co/oeGr0rJM89@withDKS @ArshadRizwan @CTRavi_BJP pic.twitter.com/SihMzkjFCW
— PublicTV (@publictvnews) August 2, 2017
ನನ್ನ ಮನೆ ಮೇಲೆ #ITraid ನಡೆಸಿದ್ರೆ ಐಟಿ ಅಧಿಕಾರಿಗಳಿಗೆ ಹೂ ಗುಚ್ಛ ನೀಡಿ ಸ್ವಾಗತಿಸುತ್ತೇನೆ: @reachmbp https://t.co/EGLSdvXH5c #DKShivakumar pic.twitter.com/i22ZOdHaSf
— PublicTV (@publictvnews) August 2, 2017
Gujrat Congress MLAs Press Meet In Eagleton Resort, Was This The Reason For Today's IT Raid?: https://t.co/ENWUtXZXen via @YouTube
— PublicTV (@publictvnews) August 2, 2017
Rs. 7.5 crore recovered during IT raids at two flats of Karnataka Minister DK Shivakumar in Delhi.: https://t.co/zhfdWWGqx6 via
— PublicTV (@publictvnews) August 2, 2017