ದಾವಣಗೆರೆ: ಪ್ರೇಯಸಿ ಮೇಲಿನ ಪ್ರೀತಿಗೆ ಪತಿಯೇ ಪತ್ನಿಯನ್ನು ಕೊಂದ ದಾರುಣ ಘಟನೆ ಜಿಲ್ಲೆಯ ರಾಮಗೊಂಡನಹಳ್ಳಿಯಲ್ಲಿ ನಡೆದಿದೆ.
ಅಶ್ವಿನಿ (20) ಸಾವನ್ನಪ್ಪಿದ ವಿವಾಹಿತ ಮಹಿಳೆ. ಹರೀಶ್ ಎಂಬಾತನ ಜೊತೆ ಕಳೆದ ಐದು ತಿಂಗಳ ಹಿಂದೆ ಅಶ್ವಿನಿ ಮದುವೆಯಾಗಿತ್ತು. ಆದರೆ ಹರೀಶ್‍ಗೆ ಮದುವೆಯ ಮುಂಚೆಯೇ ಇನ್ನೊಬ್ಬ ಯುವತಿಯ ಜೊತೆ ಸಂಬಂಧವಿತ್ತು. ತಾನು ಪ್ರೀತಿಸಿದ ಹುಡುಗಿಯನ್ನು ಮದುವೆಯಾಗಲು ಅಶ್ವಿನಿಯ ಮೇಲೆ ಹಲ್ಲೆ ಮಾಡಿ ವಿಷ ಕುಡಿಸಿ ಕೊಲೆ ಮಾಡಿದ್ದಾನೆ ಎಂದು ಮೃತಳ ಕುಟುಂಬಸ್ಥರು ಹರೀಶ್ ಮೇಲೆ ಆರೋಪ ಮಾಡುತ್ತಿದ್ದಾರೆ.
Advertisement
Advertisement
ಇನ್ನು ಮೃತ ದೇಹವನ್ನು ದಾವಣಗೆರೆ ಜಿಲ್ಲಾಸ್ಪತ್ರೆಗೆ ರವಾನೆ ಮಾಡಿ ಮರಣೋತ್ತರ ಪರೀಕ್ಷೆ ನಡೆಸುತ್ತಿದ್ದು, ಆರೋಪಿ ಹರೀಶ್‍ನನ್ನು ಮಾಯಕೊಂಡ ಠಾಣೆ ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
Advertisement
ಅಲ್ಲದೇ ಶವಗಾರದ ಮುಂಭಾಗ ಅಶ್ವಿನಿ ಸಂಬಂಧಿಕರ ಆಕ್ರಂಧನ ಮುಗಿಲು ಮುಟ್ಟಿದೆ. ಮದ್ವೆಯಾದ ಐದು ತಿಂಗಳಲ್ಲಿಯೇ ಮತ್ತೊಬ್ಬಳ ಮೇಲಿನ ಪ್ರೀತಿಗೆ ಮಗಳನ್ನು ಕೊಲೆ ಮಾಡಿದ ಪಾಪಿ ಎಂದು ಮೃತಳ ಪೋಷಕರು ಹರಿಶ್‍ಗೆ ಶಾಪ ಹಾಕುತ್ತ ಕಣ್ಣೀರಿಡುತ್ತಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv