ಮೈಸೂರು: ಪತ್ನಿಯಿಂದಲೇ ಪತಿ ಹತ್ಯೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಗಂಡನ ಕೊಲೆಗೆ ಹೆಂಡತಿಗೆ ಸಾಥ್ ಕೊಟ್ಟಿದ್ದ ನಾಲ್ವರ ಪೈಕಿ ಮೂವರನ್ನ ಮೈಸೂರಿನ ಕುವೆಂಪು ನಗರ ಪೊಲೀಸರು ಬಂಧಿಸಿದ್ದಾರೆ.
ಪ್ರಮುಖ ಆರೋಪಿ ಹರೀಶ್ ಸೇರಿ ಇಬ್ಬರು ಕೂಲಿ ಕಾರ್ಮಿಕರನ್ನ ಪೊಲೀಸರು ಬಂಧಿಸಿದ್ದು, ಇನ್ನುಳಿದ ಓರ್ವ ಆರೋಪಿಗಾಗಿ ಶೋಧ ನಡೆಸುತ್ತಿದ್ದಾರೆ. ಸಂಸಾರದಲ್ಲಿ ವಿರಸವೇ ಕೊಲೆಗೆ ಕಾರಣ ಎನ್ನಲಾಗ್ತಿದೆ. ಇದನ್ನೂ ಓದಿ: Ram Mandir Donation Row | 77.85 ಲಕ್ಷ ಹಣ, 1121 ಡಾಲರ್ ಕರೆನ್ಸಿ ಜಪ್ತಿ – ರಾಮನ ದೇಣಿಗೆ ಕದ್ದವರ ಮನೆಯಲ್ಲಿ ಸಿಕ್ಕಿದ್ದೇನು?
ಏನಿದು ಕೇಸ್?
ನಿತ್ಯಾನಂದ ಎಂಬಾತನ ಪತ್ನಿ ಸುಶೀಲಾಗೆ ಹರೀಶ್ ಎಂಬಾತ ಪರಿಚಯವಾಗಿದ್ದ. ಸುಶೀಲಾ ಹಾಗೂ ಹರೀಶ್ ಇನ್ನೂ ಮೂವರ ಸಹಾಯ ಪಡೆದು ನಿತ್ಯಾನಂದನನ್ನ ಹತ್ಯೆ ಮಾಡಿದ್ದರು. ಐವರು ನಿತ್ಯಾನಂದನ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದರು. ಮೈಸೂರಿನ ಕುವೆಂಪು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
2 ದಿನಗಳ ಹಿಂದೆಯೇ ಕೊಲೆ ಮಾಡಿ ಅದನ್ನು ಹೃದಯಾಘಾತ ಅಂತ ಬಿಂಬಿಸಲು ಸುಶೀಲಾ ಹೊರಟಿದ್ದಳು. ಈ ಪ್ರಕರಣದ ತನಿಖೆ ನಡೆಸುತ್ತಿದ್ದ ಕುವೆಂಪುನಗರ ಪೊಲೀಸರು ಸುಶೀಲಾಗೆ ಸಾಥ್ ನೀಡಿದ್ದ ಮೂವರು ಆರೋಪಿಗಳನ್ನ ಬಂಧಿಸಿದ್ದಾರೆ. ಇದನ್ನೂ ಓದಿ: ವಿಜಯ್ ಸರ್ಕಾರ ಕೆಡವಲು ಶಾಸಕರಿಗೆ 35 ಕೋಟಿ ಆಫರ್? – ಡಿಎಂಕೆ ಯಿಂದ ಆಪರೇಷನ್ ಆರೋಪ
