– ಒಬ್ಬರನ್ನೂ ಬಿಟ್ಟಿಲ್ಲ, 50 ಕೋಟಿ ವರೆಗೂ ಆಫರ್ ಬಂದಿದೆ: ಟಿವಿಕೆ ಸಚಿವ ಬಾಂಬ್
ಚೆನ್ನೈ: ಪಶ್ಚಿಮ ಬಂಗಾಳ, ಮಹಾರಾಷ್ಟ್ರ ಬಳಿಕ ಇದೀಗ ತಮಿಳುನಾಡಿನಲ್ಲೂ (Tamil Nadu) ಆಪರೇಷನ್ ಶುರುವಾಯ್ತಾ ಅನ್ನೋ ಸದ್ದು ಜೋರಾಗಿದೆ. ಸಿಎಂ ಸಿ. ಜೋಸೆಫ್ ವಿಜಯ್ (Vijay) ನೇತೃತ್ವದ ಟಿವಿಕೆ ಸರ್ಕಾರ ಕೆಡವಲು ಸಂಚು ನಡೆದಿದೆ ಎನ್ನುವ ಆರೋಪಗಳು ದಟ್ಟವಾಗಿವೆ. ಆದ್ರೆ ಈ ಸಂಚನ್ನು ವಿಫಲಗೊಳಿಸಿರುವುದಾಗಿ ರಾಜ್ಯ ಗುಪ್ತಚರ ಇಲಾಖೆ ಹೇಳಿಕೊಂಡಿದೆ.
ತಮಿಳಗ ವೆಟ್ರಿ ಕಳಗಂ (TVK) ಪಕ್ಷದ ಶಾಸಕರೊಬ್ಬರು ನೀಡಿದ ದೂರಿನ ಮೇರೆಗೆ ತನಿಖೆ ನಡೆಸಿದ ಅಧಿಕಾರಿಗಳು ಸಲಹಾ ಸಂಸ್ಥೆಯ ಉದ್ಯೋಗಿಯೊಬ್ಬನನ್ನು ಸೇರಿ ಮೂವರನ್ನ ಬಂಧಿಸಿದ್ದಾರೆ. ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: Ram Temple Donation Theft| ಆರೋಪಿ ಮನೆಯಲ್ಲಿ ನಕಲಿ ‘ರಾಮರಾಜ್ಯ ಕೋಶ’ ಪೆಟ್ಟಿಗೆ, ಕ್ಯೂಆರ್ ಕೋಡ್ ಪತ್ತೆ!
ತನಿಖೆ ಸಮಯದಲ್ಲಿ ಅಧಿಕಾರಿಗಳು ಡಿಎಂಕೆ (DMK) ಶಾಸಕ ಸೆಂಥಿಲ್ ಬಾಲಾಜಿ ಅವರೊಂದಿಗಿನ ಸಂಪರ್ಕವನ್ನು ಪತ್ತೆಹಚ್ಚಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲ ಆರೋಪಿಯನ್ನ ಚೆನ್ನೈನಲ್ಲಿ, ಉಳಿದ ಇಬ್ಬರನ್ನು ಕರೂರಿನಲ್ಲಿ ಬಂಧಿಸಲಾಗಿದೆ. ಈ ಪಿತೂರಿ ಜಾಲವನ್ನ ಬುಡಸಮೇತ ಬಯಲಿಗೆಳೆಯಲು ಅಧಿಕಾರಿಗಳು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಪ್ರಕರಣ ಬೆಳಕಿಗೆ ಬಂದ್ದಿದ್ದು ಹೇಗೆ?
ಉತ್ತಂಗರೈ ಕ್ಷೇತ್ರದ ಟಿವಿಕೆ ಶಾಸಕ ಎನ್. ಇಳಯರಾಜ ಅವರು ಚೆನ್ನೈ ಪೊಲೀಸರಿಗೆ ದೂರು ನೀಡಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಹಿಂದೂ ವಿವಾಹಕ್ಕೆ ನೋಂದಣಿ ಸಾಕಾಗಲ್ಲ, ಸಪ್ತಪದಿ ಸೇರಿ ಧಾರ್ಮಿಕ ವಿಧಿವಿಧಾನ ಕಡ್ಡಾಯ: ಗುಜರಾತ್ ಹೈಕೋರ್ಟ್
ಶಾಸಕರಿಗೆ 35 ಕೋಟಿ ಆಫರ್; ದೂರು
ತಮಿಳುನಾಡು ವಿಧಾನಸಭಾ ಸ್ಪೀಕರ್ ಜೆಸಿಡಿ ಪ್ರಭಾಕರ್, ಟಿವಿಕೆ ನಾಯಕರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಐಪಿಡಿಎಸ್‌ನ ವ್ಯಕ್ತಿಯೊಬ್ಬರು ತಮಗೆ 35 ಕೋಟಿ ರೂ.ಗಳ ಆಮಿಷ ಒಡ್ಡಿದ್ದಾರೆ. ಈ ಆಫರ್ ಬಗ್ಗೆ ಯಾರಿಗೂ ಹೇಳದಂತೆ ಬೆದರಿಕೆ ಕೂಡ ಹಾಕಿದ್ದಾರೆ ಎಂದು ಶಾಸಕರು ಆರೋಪಿಸಿದ್ದಾರೆ.
ಬಂಧಿತ ವ್ಯಕ್ತಿಗಳಲ್ಲಿ ಒಬ್ಬರು ಸೆಂಥಿಲ್ ಬಾಲಾಜಿ ಮತ್ತು ಅವರ ಸಹೋದರ ಅಶೋಕ್ ಅವರ ಆಪ್ತರು ಎಂದು ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.

ಡಿಎಂಕೆ ವಿರುದ್ಧ ಟಿವಿಕೆ ಸಚಿವರ ವಾಗ್ದಾಳಿ
ಘಟನೆ ಬೆಳಕಿಗೆ ಬರುತ್ತಿದ್ದಂತೆ ಟಿವಿಕೆ ಸಚಿವ ಸಿ.ಟಿ ನಿರ್ಮಲ್ ಕುಮಾರ್, ಡಿಎಂಕೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: Ram Mandir Donation Row | 77.85 ಲಕ್ಷ ಹಣ, 1121 ಡಾಲರ್ ಕರೆನ್ಸಿ ಜಪ್ತಿ – ರಾಮನ ದೇಣಿಗೆ ಕದ್ದವರ ಮನೆಯಲ್ಲಿ ಸಿಕ್ಕಿದ್ದೇನು?
ವಿಜಯ್ ನೇತೃತ್ವದ ಸರ್ಕಾರ ಉರುಳಿಸಲು ಎಐಎಡಿಎಂಕೆ ಮುಖ್ಯಸ್ಥ ಎಡಪ್ಪಾಡಿ ಕೆ ಪಳನಿಸ್ವಾಮಿ ಅವರೊಂದಿಗೆ ಡಿಎಂಕೆ ಕೈಜೋಡಿಸುತ್ತಿದೆ. ಹಲವಾರು ಟಿವಿಕೆ ಶಾಸಕರಿಗೆ ಪಕ್ಷಾಂತರ ಮಾಡಲು ಹಣದ ಆಫರ್ ನೀಡಲಾಗಿದೆ. ಸೆಂಥಿಲ್ ಬಾಲಾಜಿ ಅವರೊಂದಿಗೆ ನೇರವಾಗಿ ಸಂಬಂಧ ಹೊಂದಿರುವ ವ್ಯಕ್ತಿಗಳು ಹಾಗೂ ‘ಕರೂರ್ ಗ್ಯಾಂಗ್’ ಎಂದು ಕರೆಯಲ್ಪಡುವವರು ಇದರಲ್ಲಿ ಭಾಗಿಯಾಗಿದ್ದಾರೆ. ಪೊಲೀಸರು ಕಾನೂನು ಕ್ರಮ ಕೈಗೊಂಡು ಭಾಗಿಯಾಗಿರುವ ಎಲ್ಲರನ್ನೂ ಬಂಧಿಸಬೇಕು. ಅವರು ಇಂತಹ ದುಷ್ಕೃತ್ಯಗಳನ್ನು ಕೊನೆಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ಎಂ.ಕೆ ಸ್ಟಾಲಿನ್ ಮತ್ತು ಉದಯನಿಧಿ ಅವರ ಆದೇಶದ ಮೇರೆಗೆ ಕಾರ್ಯನಿರ್ವಹಿಸುತ್ತಿರುವ ಸೆಂಥಿಲ್ ಬಾಲಾಜಿ ಅವರಂತಹ ಪ್ರಮುಖ ಡಿಎಂಕೆ ವ್ಯಕ್ತಿಗಳು ನಮ್ಮ ಅನೇಕ ಶಾಸಕರನ್ನ ಸಂಪರ್ಕಿಸುತ್ತಿದ್ದಾರೆ. 10, 20 ಅಥವಾ 50 ಕೋಟಿ ರೂಪಾಯಿ ವರೆಗೂ ಆಫರ್ ಕೊಡ್ತಿದ್ದಾರೆ. ಟಿವಿಕೆ ಪಕ್ಷದ ಯಾವೊಬ್ಬ ಶಾಸಕರನ್ನೂ ಬಿಡದೇ ಸಂಪರ್ಕ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
