ರಾಯಚೂರು: ಜಿಲ್ಲೆಯ ಮಸ್ಕಿ (Maski) ತಾಲೂಕಿನ ಮೆದಿಕಿನಾಳ ತಾಂಡಾ ಬಳಿ ಬಿರುಗಾಳಿ ಸಹಿತ ಭಾರೀ ಮಳೆಗೆ ಬೃಹತ್ ಕ್ರೇನ್ ಧರೆಗುರುಳಿದೆ.
ರೈತರ ಜಮೀನಿನಲ್ಲಿ ಹಾಕಿರುವ ವಿಂಡ್ ಪವರ್ ವಿದ್ಯುತ್ ಟವರ್ ಅಳವಡಿಕೆ ವೇಳೆ ಬಿರುಗಾಳಿ ಸಹಿತ ಭಾರೀ ಮಳೆ ಸುರಿದಿದೆ. ಪರಿಣಾಮ ಬೃಹತ್ ಕ್ರೇನ್ ಕುಸಿದು ಬಿದ್ದಿದೆ. ಸ್ಥಳದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕೆಲ ಕಾರ್ಮಿಕರು ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. ಇದನ್ನೂ ಓದಿ: ಕರ್ನಾಟಕದಲ್ಲಿ ಯಾವುದೇ ನಿರ್ಬಂಧಗಳಿಲ್ಲದೆ ಇಂಧನ ವಿತರಣೆ ಮುಂದುವರಿಕೆ
ಸ್ಥಳದಲ್ಲಿದ್ದ ಕ್ರೇನ್ ಸಂಪೂರ್ಣ ಜಖಂ ಆಗಿದ್ದು, ಎರಡು ಲಾರಿಯ ಗಾಜುಗಳು ಪುಡಿಪುಡಿಯಾಗಿವೆ. ಘಟನೆ ಹಿನ್ನೆಲೆ ಕೆಲ ಕಾಲ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಸದ್ಯ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ, ಮಸ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

