
ಹುಬ್ಬಳ್ಳಿ: ಇಲ್ಲಿನ ಖಾಸಗಿ ಹೋಟೆಲ್‍ನಲ್ಲಿ ಮಂಗಳವಾರ ಬರ್ಬರವಾಗಿ ಹತ್ಯೆಯಾಗಿದ್ದ ಸರಳವಾಸ್ತು ಖ್ಯಾತಿಯ ಚಂದ್ರಶೇಖರ ಗುರೂಜಿ ಅಂತ್ಯಕ್ರಿಯೆ ಇಂದು ಹುಬ್ಬಳ್ಳಿ ಬಳಿಯ ಸುಳ್ಳ ಗ್ರಾಮದ ಕೃಷಿಭೂಮಿಯಲ್ಲಿ ನೆರವೇರಿದೆ.
ಅಪಾರ ಭಕ್ತಸ್ತೋಮ ಹಾಗೂ ಕುಟುಂಬಸ್ಥರ ಸಮ್ಮುಖದಲ್ಲಿ ಅಂತ್ಯ ಸಂಸ್ಕಾರ ನಡೀತು. 10ಕ್ಕೂ ಹೆಚ್ಚು ಸ್ವಾಮೀಜಿಗಳ ಸಮ್ಮುಖದಲ್ಲಿ ವೀರಶೈವ ಲಿಂಗಾಯತ ಸಂಪ್ರದಾಯದಂತೆ ಗುರೂಜಿ ಅಣ್ಣನ ಮಗ ಸಂಜಯ್ ಅಂತಿಮ ವಿಧಿವಿಧಾನ ನೆರವೇರಿಸಿದ್ರು. ಗುರೂಜಿ 2ನೇ ಪತ್ನಿ ಅಂಕಿತಾ, ಪುತ್ರಿ ಸ್ವಾತಿ, ಹಾಗೂ ಅಕ್ಕ ಸೇರಿದಂತೆ ಸಂಬಂಧಿಕರು ಹಾಗೂ ಸರಳವಾಸ್ತು ಸಿಬ್ಬಂದಿ, ಅಭಿಮಾನಿಗಳ ಆಕ್ರಂದನ ಮುಗಿಲು ಮುಟ್ಟಿತ್ತು. ಇದನ್ನೂ ಓದಿ: ಚಂದ್ರಶೇಖರ್ ಗುರೂಜಿ ಅಂತಿಮ ದರ್ಶನ ಪಡೆದ ಮುದ್ದಿನ ಶ್ವಾನ
ಅಂತ್ಯಕ್ರಿಯೆ ವೇಳೆ ಗುರೂಜಿಯ ಮುದ್ದಿನ ಶ್ವಾನ ಪ್ರಿನ್ಸ್ ಶೋಕಸಾಗರದಲ್ಲಿ ಮುಳುಗಿತ್ತು. ನಾಯಿಯ ಕಣ್ಣೀರು ನೋಡುಗರ ಮನಕಲಕುವಂತೆ ಮಾಡಿತು. ಅಂತ್ಯಕ್ರಿಯೆಯಲ್ಲಿ ಶ್ರೀರಾಮಸೇನೆಯ ಪ್ರಮೋದ್ ಮುತಾಲಿಕ್ ಸೇರಿ ಹಲವರು ಪಾಲ್ಗೊಂಡಿದ್ರು. ಅಂತ್ಯಕ್ರಿಯೆಗೂ ಮುನ್ನ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಿಂದ ಅಂತ್ಯಕ್ರಿಯೆ ಸ್ಥಳದವರೆಗೆ ಗುರೂಜಿ ಅಂತಿಮಯಾತ್ರೆ ಸಾಗಿತು. ಜಿಟಿಜಿಟಿ ಮಳೆ ಮಧ್ಯೆಯೆ ರಸ್ತೆ ಇಕ್ಕೆಲಗಳಲ್ಲಿ ಅಭಿಮಾನಿಗಳು ಅಂತಿಮ ನಮನ ಸಲ್ಲಿಸಿದ್ರು.
Live Tv