ಹೊಸಪೇಟೆಯಲ್ಲಿ ಪುನೀತ್ ಪುತ್ಥಳಿ ಅನಾವರಣಕ್ಕೆ ಕ್ಷಣಗಣನೆ

ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಗಲಿ 7 ತಿಂಗಳು ಕಳೆದರು. ಅಭಿಮಾನಿಗಳಿಗೆ ಅಪ್ಪು ನೆನಪು ಮಾಸಿಲ್ಲ. ಒಂದಲ್ಲಾ ಒಂದು ರೀತಿಯಲ್ಲಿ ಪುನೀತ್ ಆರಾಧನೆ ಮಾಡುತ್ತಲೇ ಇರುತ್ತಾರೆ. ಈಗ ವಿಜಯನಗರದ ಹೊಸಪೇಟೆಯಲ್ಲಿ ಪುನೀತ್ ರಾಜ್‌ಕುಮಾರ್ ಪ್ರತಿಮೆ ಅನಾವರಣಕ್ಕೆ ವೇದಿಕೆ ಸಜ್ಜಾಗಿದೆ.
ವಿಜಯನಗರದ ಹೊಸಪೇಟೆಯಲ್ಲಿ ಅಪ್ಪು ಪುತ್ಥಳಿ ಅನಾವರಣಕ್ಕೆ ವೇದಿಕೆ ಸಜ್ಜಾಗಿದೆ. ಇದೀಗ ಪುನೀತ್ ಪುತ್ಥಳಿ ಉದ್ಘಾಟನೆ ನಡೆಯಲಿದ್ದು, ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಪುನೀತ್ ರಾಜ್‌ಕುಮಾರ್ ಪ್ರತಿಮೆ ಅನಾವರಣ ಹಿನ್ನೆಲೆ `ರಾಜಕುಮಾರ’ ಮತ್ತು `ಯುವರತ್ನ’ ಚಿತ್ರದ ನಿರ್ದೇಶಕ ಸಂತೋಷ ಆನಂದ್ ರಾಮ್ ಜ್ಯೋತಿಗೆ ಚಾಲನೆ ನೀಡಿದ್ದಾರೆ. ಇದನ್ನೂ ಓದಿ: ಪುಟ್ಟ ಅಭಿಮಾನಿಯ ಬರ್ತಡೇಗೆ ಹಣೆಗೆ ಮುತ್ತಿಟ್ಟು ಶುಭ ಕೋರಿದ ಸಲ್ಮಾನ್ ಖಾನ್
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಕಂಚಿನ ಪ್ರತಿಮೆ ಅನಾವರಣಕ್ಕೆ ಕ್ಷಣಗಣನೆ ಶುರುವಾಗಿದೆ. ಹೊಸಪೇಟೆಯ ಪುನೀತ ರಾಜಕುಮಾರ್ ಸರ್ಕಲ್ ನಲ್ಲಿ ಅನಾವರಣಗೊಳ್ಳಲಿರುವ 7.5 ಅಡಿ ಎತ್ತರದ ಕಂಚಿನ ಪುತ್ಥಳಿ ನಟ ರಾಘವೇಂದ್ರ ರಾಜಕುಮಾರ್ ಅನಾವರಣ ಮಾಡಲಿದ್ದಾರೆ. ಇನ್ನು ಪ್ರತಿಮೆ ಅನಾವರಣಕ್ಕೂ ಮುನ್ನ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆರಂಭವಾಗಲಿದೆ. ಅಪ್ಪು ಪ್ರತಿಮೆ ಅನಾವರಣಕ್ಕೆ ಸಾವಿರಾರು ಜನರು ಸಾಕ್ಷಿಯಾಗಿದ್ದಾರೆ. ಪುನೀತ ರಾಜಕುಮಾರ್ ಭಾವಚಿತ್ರ ಹಿಡಿದು ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.